ರಾಜ್ಯದ ಜನರಿಗೆ ಪ್ರಾದೇಶಿಕ ಪಕ್ಷಗಳ ಒಲವು ಕಮ್ಮಿ; ಶಾಸಕ ಬಯ್ಯಾಪೂರ
Team Udayavani, Dec 30, 2022, 4:06 PM IST
ಕುಷ್ಟಗಿ: ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಚ್ಚಿಕೊಂಡಷ್ಟು ನಮ್ಮ ರಾಜ್ಯದ ಜನತೆ ಪ್ರಾದೇಶಿಕ ಪಕ್ಷಗಳನ್ನು ನೆಚ್ಚಿಕೊಂಡಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ತಾವರಗೇರಾ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಮರ್ಥ ಅಭ್ಯರ್ಥಿ, ಸ್ಥಳೀಯ ವಾತವರಣ ಆಧರಿಸಿ ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪಕ್ಷಗಳ ಪರಿಣಾಮವಾಗುವ ಸಾದ್ಯತೆ ಇದೆ ಎಂದು ಹೇಳಿದರು.
ಪ್ರಸ್ತುತವಾಗಿ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಕಳೆದುಕೊಂಡಿದ್ದು, ದಕ್ಷಿಣ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ಕೆಲವೆಡೆ ಉಳಿಸಿಕೊಂಡಿದೆ. ಜನಾರ್ದನ ರಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಪ್ರಾದೇಶಿಕ ಪಕ್ಷದಿಂದ ಬಿಜೆಪಿ, ಕಾಂಗ್ರೆಸ್ ಗೆ ಬಹಳಷ್ಟು ಅಲ್ಲದಿದ್ದರೂ ಶೇ.5ರಿಂದ 10 ರಷ್ಟು ಪರಿಣಾಮದ ಸಾದ್ಯತೆ ಇದೆ ಎಂದರು.
ಈ ಹಿಂದೆ ಶ್ರೀರಾಮುಲು ಅವರ ಬಿ ಎಸ್ ಆರ್ ಪಕ್ಷ ಹಾಗೂ ಯಡಿಯೂರಪ್ಪ ನವರ ಕೆ.ಜೆ.ಪಿ. ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡ ಒಂದೇ ವರ್ಷದಲ್ಲಿ ರಾಷ್ಟ್ರೀಯ ಪಕ್ಷದಲ್ಲಿ ವಿಲೀನಗೊಂಡಿದ್ದವು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ದೇವೇಗೌಡ ಅವರ ಶ್ರಮದಿಂದ ಜನತಾ ಪಕ್ಷ, ಜನತಾದಳ ರಾಜ್ಯದಲ್ಲಿ ಯಶಸ್ವಿಯಾಗಿತ್ತು.1994 ರಲ್ಲಿ ಪ್ರಾದೇಶಿಕ ಪಕ್ಷದಿಂದ ಪ್ರಥಮ ಬಾರಿಗೆ ಶಾಸಕನಾಗಿದ್ದೆ ಎಂದು ಹೇಳಿದರು.
2013 ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಕೆಜೆಪಿ ಅಭ್ಯರ್ಥಿ ಪುರದಪ್ಪ 1, 100 ಓಟು, ಕ್ಷೇತ್ರದಲ್ಲಿ ದುಂಧು ವೆಚ್ಚ ಮಾಡಿದ್ದ ಬಿಎಸ್ ಆರ್ ಅಭ್ಯರ್ಥಿ ರಾಜಶೇಖರಗೌಡ ಗೋನಾಳ 17ಸಾವಿರ ಓಟು ಪಡೆದಿದ್ದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.