Kushtagi: ಸಜ್ಜೆ ಕಾಳು ಕಟ್ಟಿದ ತೆನೆಗೆ ಮುತ್ತಿಕೊಂಡ ಹಸಿರು ಹುಳು
Team Udayavani, Aug 24, 2023, 12:53 PM IST
ಕುಷ್ಟಗಿ: ಮಳೆ ಅಭಾವ ಹಾಗೂ ಬರ ಪರಿಸ್ಥಿತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಅಳಿದುಳಿದ ಸಜ್ಜೆ ಇಳುವರಿ ಹಸಿರು ಹುಳುವಿನ ಪಾಲಾಗಿದೆ.
ಹೌದು… ಕುಷ್ಟಗಿ ತಾಲೂಕಿನಲ್ಲಿ ಮುಂಗಾರು ವಿಫಲವಾಗಿದ್ದು, ಜೂನ್, ಜುಲೈ, ಅಗಸ್ಟ್ ತಿಂಗಳಾಗುತ್ತ ಬಂದರೂ ಹೇಳಿಕೊಳ್ಳುವ ಮಳೆ ಆಗಿಲ್ಲ. ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವ ಪರಿಸ್ಥಿತಿ ಮುಂದುವರೆದಿದೆ. ಹೆಸರು, ಅಲಸಂದಿ, ಸೂರ್ಯಕಾಂತಿ, ಸಜ್ಜೆ ಮೆಕ್ಕೆಜೋಳ ಮೊದಲಾದ ಬೆಳೆಗಳು ಬಾಡಿದ್ದು, ಸಕಾಲಿಕ ಮಳೆ ಇಲ್ಲದೇ ಉತ್ಪನ್ನ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಸಜ್ಜೆಗೆ ಹಸಿರು ಹುಳು ಕಾಟ ವಿಪರೀತವಾಗಿದೆ. ಕಾಳು ಕಟ್ಟಿದ ಸಜ್ಜೆ ತೆನೆಗೆ ಹಸಿರು ಹುಳು ಮುತ್ತಿಕೊಂಡಿದ್ದು, ತೆನೆಯ ಕಾಳುಗಳನ್ನು ಭಕ್ಷಿಸುತ್ತಿವೆ.
ಇವುಗಳನ್ನು ನಿಯಂತ್ರಿಸಲುವ ರೈತರು ಸಜ್ಜೆ ಬೆಳೆಗೆ ಕ್ರಿಮಿನಾಶಕ ಔಷಧಿ ನಿಯಂತ್ರಿಸಲು ಮುಂದಾಗಿದ್ದರೂ ನಿಯಂತ್ರಣ ಸಾದ್ಯವಾಗಿಲ್ಲ. ಮುಂಗಾರು ಹಂಗಾಮಿನಲ್ಲಿ ಬೇರೆ ಬೇರೆ ಬೆಳೆ ಇರುತ್ತವೆ ಆಗ ಈ ಹಸಿರು ಹುಳು ಎಲ್ಲಾ ಬೆಳೆಗೂ ವ್ಯಾಪಿಸುತ್ತದೆ. ಆದರೀಗ ಮಳೆ ಕೊರತೆ ಹಿನ್ನೆಲೆಯಲ್ಲಿ ಸಜ್ಜೆ ಬೆಳೆ ಮಾತ್ರವಿದ್ದು, ಈ ಸಜ್ಜೆ ಬೆಳೆಗೆ ತೆನೆ ಕಾಳು ಕಟ್ಟಿ ಬಲಿಯುವ ಹಂತದಲ್ಲಿ ಹಸಿರು ಹುಳು ವಕ್ಕರಿಸಿದೆ.
ಈ ಹುಳುವಿನ ಬಾಧೆ ನಿಯಂತ್ರಿಸಲು ಮೆಲಾಥಿನ್ ಪೌಡರ್ ನ್ನು ಧೂಳೀಕರಿಸುವುದರಿಂದ ನಿಯಂತ್ರಣ ಸಾದ್ಯವಿದೆ ಎನ್ನುತ್ತಾರೆ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಕೃಷಿ ವಿಜ್ಞಾನಿ ಡಾ.ಬದ್ರಿ ಪ್ರಸಾದ್.
ಕುಷ್ಟಗಿ ಸೀಮಾದಲ್ಲಿ6 ಎಕರೆ ಪ್ರದೇಶದಲ್ಲಿ ಸಜ್ಜೆ ಬೆಳೆದಿರುವ ನಿವೃತ್ತ ಬಸ್ ನಿಲ್ದಾಣ ನಿಯಂತ್ರಕ ಕಾಶೀಂಸಾಬ್ ಕಾಯಿಗಡ್ಡಿ, ಸಜ್ಜೆ ಬೆಳೆಗೆ ತೆನೆಗೆ ನಾಲ್ಕೈದು ಹುಳುಗಳು ಮುತ್ತಿಕೊಂಡು ಕಾಳು ತಿಂದು ಹಾಕಿ, ವಿಸರ್ಜನೆ ಮಾಡಿವೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಸಜ್ಜೆ ತೆನೆಗೆ ಈ ರೀತಿಯ ಹಸಿರು ಹುಳು ಹಾವಳಿ ಕಂಡಿರುವುದು ಇದೇ ಮೊದಲು ಆಗಿದೆ. ಸಜ್ಜೆ ಬೆಳೆಗೆ ರೋಗ, ಕೀಟದ ಹಾವಳಿ ಇಲ್ಲ. ಈ ಕೀಟಗಳು ಯಾವ ಬೆಳೆಯನ್ನು ಬಿಡುತ್ತಿಲ್ಲ. ಈ ಹುಳುಗಳ ನಿಯಂತ್ರಿಸಲು 5,100 ರೂ. ಖರ್ಚಾಗಿದ್ದು ನಿಯಂತ್ರಿಸಲು ಸಾದ್ಯವಾಗಿಲ್ಲ ಎಂದು ಕಾಶೀಂಸಾಬ್ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.