Kushtagi: ಗೃಹಲಕ್ಷ್ಮೀಯ ಹಣ ಬೇಕು ಬೇಕು ಎನ್ನುವವರ ಮದ್ಯೆ ಬೇಡ ಎನ್ನುವ ಅಜ್ಜಿ
Team Udayavani, Sep 1, 2023, 8:02 AM IST
ಕುಷ್ಟಗಿ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ವೃದ್ಧೆ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಫಲ ಬೇಡ ಎನ್ನುತ್ತಿದ್ದಾರೆ. ಬದುಕು ನಡೆಸಲು ಎಷ್ಟು ಬೇಕೋ ಅಷ್ಟು ಇದ್ದು ಹೆಚ್ಚಿನದ್ದು ನನಗ್ಯಾಕೆ ಎಂದು ಆ ಶಿವಶರಣೆ ಗೃಹಲಕ್ಷ್ಮೀ ಯೋಜನೆಯನ್ನು ನಯವಾಗಿ ತಿರಸ್ಕರಿಸಿದ್ದಾರೆ.
ನಿಡಶೇಸಿ ಗ್ರಾಮದ 78ರ ಇಳಿವಯಸ್ಸಿನ ಅಜ್ಜಿ ಶಿವಶರಣೆಯಾಗಿ ಸರಳ ಜೀವನ ನಡೆಸುತ್ತಿರುವ ಶಿವಮ್ಮ ಸಜ್ಜನ ಸಮಾಜಕ್ಕೆ ಮಾದರಿಯಾಗಿದ್ದಾರೆ. 50 ವರ್ಷಗಳ ಹಿಂದೆ ಸರ್ಕಾರಿ ನೌಕರ ಆಗಿದ್ದ ಪತಿಯಿಂದ ದೂರವೇ ಉಳಿದು ಗೆಜ್ಜೆಬಾವಿ ಮಠದಲ್ಲಿ ಸೇವೆ ಸಲ್ಲಿಸಿ ನಂತರ, ನಿಡಶೇಸಿ ಗ್ರಾಮದಲ್ಲಿ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಒಬ್ಬಂಟಿ ಜೀವನ ನಡೆಸುತ್ತಿರುವ ಶಿವವ್ವ ಅಜ್ಜಿಗೆ ಶಿವಶರಣರ ವಚನ ಪುಸ್ತಕಗಳು ಜೀವನ ಸಂಗಾತಿಯಾಗಿದೆ.
ಬಸವಾದಿ ಶರಣರ ಪುರಾಣ ಪ್ರವಚನ ಎಲ್ಲಿಯೇ ಜರುಗಲಿ ತಪ್ಪದೇ ಹಾಜರಾಗುವ ಸರಳ ಸ್ವಭಾವ ಹಿರಿಯ ಜೀವಿ. ಯಾರಿಂದಲೂ ಸಹಾಯ ನಿರೀಕ್ಷಿಸದ ಈ ಅಜ್ಜಿ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಶೌಚಾಲಯ ನಿರೀಕ್ಷಿಸಿದ್ದು, ಆದರೆ ಇಲ್ಲಿಯವರೆಗೂ ಸಾದ್ಯವಾಗಿಲ್ಲ. ಹೀಗಾಗಿ ಮತ್ತೆ ಕೇಳುವುದನ್ನೇ ಬಿಟ್ಟಿದ್ದಾರೆ. ಅವರ ಜಮೀನು ನಿಡಶೇಸಿ ಕೆರೆ ಮುಳುಗಡೆಯ ಪರಿಹಾರವನ್ನು ಬ್ಯಾಂಕಿನಲ್ಲಿ ಠೇವಣಿಯಲ್ಲಿರಿಸಿದ್ದಾರೆ. ಅದರ ಬಡ್ಡಿಯ ಹಣ ಹಾಗೂ ರೇಷನ್ ಕಾರ್ಡ್ ನಿಂದ ದೊರೆಯುವ ಅಕ್ಕಿ ನಮ್ಮ ಜೀವನಕ್ಕೆ ಇಷ್ಟು ಸಾಕು ಹೆಚ್ಚಿನದು ನಮಗೇಕೆ ಬೇಕು? ಈ ಅಜ್ಜಿ ಗೃಹಲಕ್ಷ್ಮೀ ಯ 2 ಸಾವಿರ ರೂ. ಹಣ ಒಲ್ಲೆ ಎಂದಿರುವುದು ಗಮನಾರ್ಹ ಎನಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.