Kushtagi: 6 ಎಕರೆ ಕಡಲೆ ಬೆಳೆ ರಕ್ಷಿಸಿಕೊಳ್ಳಲು ಬೋರ್ವೆಲ್ ಕೊರೆಸಿದ ರೈತ
ಭೀಕರ ಬರದಲ್ಲೂ ರೈತನಿಗೆ ಒಲಿದ ಗಂಗಾಮಾತೆ
Team Udayavani, Nov 2, 2023, 1:03 PM IST
ಕುಷ್ಟಗಿ: ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆಂದು ಎನ್ನುವ ಅಣ್ಣಾವ್ರ (ಡಾ.ರಾಜಕುಮಾರ) ಜನಪ್ರಿಯ ಹಾಡು ಜನಜನಿತವಾಗಿದೆ. ಅವರ ಸ್ಪೂರ್ತಿಯ ಹಾಡನ್ನು ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬಂದಿದ್ದಾರೆ.
ಬರದ ಈ ದಿನಗಳಲ್ಲಿ ಅಂತಹುದೇ ಉದಾಹರಣೆ ತಾಲೂಕಿನ ಗುಮಗೇರಾದಲ್ಲಿ ನಡೆದಿದೆ. ಮುಂಗಾರು- ಹಿಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟ ಪರಿಣಾಮ ತಾಲೂಕು ಬರದ ದಿನಗಳನ್ನು ಎದುರಿಸುತ್ತಿದೆ. ಹಿಂಗಾರು ಮಳೆಯಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯ ಅಭಾವ ಬೆಳೆ ಬಾಡುವ ಸ್ಥಿತಿಯಲ್ಲಿ ಶಾಕ್ ನೀಡಿದೆ.
ವಾರಾಂತ್ಯದಲ್ಲಿ ಮಳೆಯಾಗದೇ ಇದ್ದರೆ ಸದ್ಯದ ಬೆಳೆ ಮಣ್ಣು ಪಾಲಾಗುವ ಸಂಭವ ಇದೆ. ಇಂತಹ ವಿಷಮ ಸ್ಥಿತಿಯಲ್ಲಿ ಗುಮಗೇರಾ ಯುವ ರೈತ ಸಹಾಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗುವ ಮೂಲಕ ಬರಕ್ಕೆ ದಿಟ್ಟ ಉತ್ತರ ಕೊಟ್ಟಿದ್ದಾನೆ.
ಗುಮಗೇರಾದ ಹನಮಂತ ಕಂಬಳಿ ಎಂಬ ರೈತ ತಮ್ಮ 6 ಎಕರೆಯಲ್ಲಿ ಮಳೆಯಾಶ್ರೀತವಾಗಿ ಕಡಲೆ ಬೆಳೆ ಬೆಳೆದಿದ್ದಾರೆ. ಸದ್ಯ ಬೆಳೆ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಬರುವುದು ಅನುಮಾನವಾಗಿದೆ.
ಈಗಿರುವ ಕಡಲೆಬೆಳೆ ಉಳಿಸಿಕೊಳ್ಳಲು ಸ್ಥಳೀಯ ರೈತರೊಬ್ಬರಿಂದ 60 ಪೈಪ್(1,200 ಅಡಿ ಉದ್ದ) ಹಾಕಲು ಮುಂದಾಗಿದ್ದರು. ಆದರೆ ಹೊಂದಾಣಿಕೆಯಾಗದ ಹಿನ್ನೆಲೆ ತಮ್ಮ ಜಮೀನಿನಲ್ಲಿ ನ.1ರ ಬುಧವಾರ ರಾತ್ರಿ ಬೋರವೆಲ್ ಕೊರೆಸುವ ಧೈರ್ಯ ಮಾಡಿದ್ದಾರೆ.
ಕೇವಲ 100 ಅಡಿಗೆ ಅಂತರ್ಜಲ ಸಿಕ್ಕಿದ್ದು ಈ ರೈತ 220 ಅಡಿ ಕೊರೆಯಿಸಿದ್ದು ರೈತನ ಅದೃಷ್ಟಕ್ಕೆ ಎರಡೂವರೆ ಇಂಚು ನೀರು ಸಿಕ್ಕಿದೆ. ಈ ನೀರನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಸ್ಪಿಂಕ್ಲೇರ್ (ತುಂತುರು) ನೀರಾವರಿ ಮೂಲಕ ನೀರುಣಿಸಿ ಬೆಳೆ ರಕ್ಷಿಸಿಕೊಂಡು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಈ ರೈತ ಹನಮಂತ ಮಳೆ ಬರಲಿಲ್ಲ ಅಂತ ಕೈ ಹೊತ್ತು ಕೂರದೇ ಬೊರ್ವೆಲ್ ಕೊರೆಸಿರುವುದು ಸಕಾಲಿಕ ನಿರ್ಧಾರಕ್ಕೆ ಅದೃಷ್ಟ ಕೈ ಹಿಡಿದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.