Kushtagi: ಟಿಪ್ಪರ್ ವಾಹನಗಳ ಸಂಚಾರ; ಜನ ಸಾಮಾನ್ಯರಿಗೆ ಜೀವ ಭಯ
Team Udayavani, Nov 9, 2023, 1:16 PM IST
ಕುಷ್ಟಗಿ: ಪಟ್ಟಣದ ಹೊರವಲಯದ ಗದಗ- ವಾಡಿ ರೈಲ್ವೇ ಕಾಮಗಾರಿಗೆ ಓವರ್ ಲೋಡಿಂಗ್ ಮರಂ ಮಣ್ಣು ಸಾಗಾಟ ಭರದಿಂದ ಸಾಗಿರುವುದು ಒಂದೆಡೆಯಾದರೆ ಮರಂ ಮಣ್ಣು ಹೊತ್ತು ತರುವ ಟಿಪ್ಪರ್ ವಾಹನಗಳಿಗೆ ಲಂಗು ಲಗಾಮಿಲ್ಲದ ಸಂಚಾರ ಜನ ಸಾಮಾನ್ಯರಿಗೆ ಜೀವ ಭಯ ಸೃಷ್ಟಿಸಿದೆ.
ಗದಗ-ವಾಡಿ ರೈಲ್ವೇ ಕಾಮಗಾರಿಗೆ ಪೂರಕವಾಗಿರುವ ಮರಂ ಮಣ್ಣನ್ನು ಶರವೇಗದಲ್ಲಿ ಹೊತ್ತು ಸಾಗುವ ಟಿಪ್ಪರ್ ಗಳು ಲೋಡಿಂಗ್, ಅನ್ ಲೋಡಿಂಗ್ ನಲ್ಲಿ ನಿರತವಾಗಿವೆ. ಲೋಡಿಂಗ್ ಹೆಚ್ಚಿಸಿಕೊಳ್ಳಲು ಟಿಪ್ಪರ್ ವಾಹನ ಚಾಲಕರು ಸಂಚಾರ ನಿಯಮಗಳ ಲಂಗಾ-ಲಗಾಮಿನಲ್ಲದೇ ಚಲಾಯಿಸುತ್ತಿದ್ದಾರೆ.
ಕಳೆದ ಅಕ್ಟೋಬರ್ 20 ರಂದು ವಾಯುವಿಹಾರಿಗಳ ಮೇಲೆ ಟಿಪ್ಪರ್ ಹರಿದು ದೊಡ್ಡಪ್ಪ ಕಂಚಿ ಎಂಬವರು ದುರ್ಮರಣಕ್ಕೀಡಾಗಿದ್ದರು. ಶೇಖಪ್ಪ ಅಬ್ಬಿಗೇರಿ ಅವರಿಗೆ ಗಾಯವಾಗಿತ್ತು.
ಈ ಪ್ರಕರಣ ಮಾಸುವ ಕೆಲ ದಿನಗಳಲ್ಲಿ ಕುಷ್ಟಗಿ ಡಂಬರ್ ಓಣಿಯ ಮುತ್ತಣ್ಣ ಹಕ್ಕಲ್ ಎಂಬವರು ತಮ್ಮ ತಾಯಿಯೊಂದಿಗೆ ಬೈಕ್ ನಲ್ಲಿ ಜಮೀನಿಗೆ ಹೋಗುವಾಗ ಟಿಪ್ಪರ್ ವಾಹನವೊಂದು ಮೇಲೆ ಬಂದು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದರು.
ಈ ರಸ್ತೆಯಲ್ಲಿ ಟಿಪ್ಪರ್ ವಾಹನಗಳಿಂದ ಒಂದಲ್ಲ ಒಂದು ಅವಘಡಗಳು ನಡೆಯುತ್ತಿವೆ. ಅಲ್ಲದೇ ಈ ವಾಹನಗಳ ಓಡಾಟದಿಂದ ಕುಷ್ಟಗಿ- ಕೊಪ್ಪಳ ರಸ್ತೆ ಹದಗೆಟ್ಟಿದೆ. ಟಿಪ್ಪರ್ ವಾಹನ ಚಾಲಕರು ನಿದ್ದೆಗೆಟ್ಟು ಚಲಾಯಿಸುತ್ತಿದ್ದು, ನಿದ್ದೆ ನಿಯಂತ್ರಿಸಲು ಮಾದಕ ಹಾಗೂ ಮದ್ಯ ಸೇವನೆಯಿಂದ ಈ ರೀತಿ ಚಾಲನೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಅನುಮಾನ ವ್ಯಕ್ತವಾಗಿದೆ.
ಟಿಪ್ಪರ್ ವಾಹನಗಳ ಓಡಾಟದ ಸಾರ್ವಜನಿಕ ಸ್ಥಳಗಳಲ್ಲಿ ವೇಗದ ಮಿತಿ ನಿಯಂತ್ರಣಕ್ಕೆ ಕ್ರಮ ಜರುಗಿಸಿ ಸಂಚಾರ ನಿಯಮಗಳ ಜಾಗೃತಿ ಮೂಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಈ ಕುರಿತು ಮುತ್ತಣ್ಣ ಹಕ್ಕಲ್ ಅವರು, ಟಿಪ್ಪರ್ ವಾಹನಗಳ ಹದ್ದು ಮೀರಿ ಓಡಾಟದ ಬಗ್ಗೆ ದೂರು ನೀಡಿದ್ದು ಎಲ್ಲಾ ಟಿಪ್ಪರ್ ಚಾಲಕರನ್ನು ಕರೆಸಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.