![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Feb 21, 2024, 10:47 AM IST
ಕುಷ್ಟಗಿ: ಕುಷ್ಟಗಿಗೆ ಹೊಳೆ ಇಲ್ಲ.. ಹಳಿ ಇಲ್ಲ ಇನ್ನೇನ್ ಅಭಿವೃದ್ದಿಯಾಗುತ್ತೋ? ಎನ್ನುವ ಮಾತು ಜನ ಬಳಕೆಯಲ್ಲಿತ್ತು. ಇದೀಗ ಆ ಮಾತು ಸುಳ್ಳಾಗಿಸಿದ್ದು, ಕೊಪ್ಪಳ ಸಂಸದ ಕರಡಿ ಸಂಗಣ್ಣ ಪ್ರಯತ್ನದ ಫಲವಾಗಿ ಕುಷ್ಟಗಿಗೆ ರೈಲ್ವೆ ಹಳಿಯೂ ಆಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಗದಗ- ವಾಡಿ ಮಾರ್ಗದಲ್ಲಿ ರೈಲು ಸಂಚರಿಸುವುದು ಸನ್ನಿಹಿತವಾಗಿದೆ. ಕುಷ್ಟಗಿ ಜನ ಗದಗ, ಹುಬ್ಬಳ್ಳಿ ರೈಲಿನಲ್ಲಿ ಸಂಚರಿಸಲು ಕಾತುರರಾಗಿದ್ದಾರೆ.
ಹೌದು… ನೈಋತ್ಯ ರೈಲ್ವೇ ವಲಯದ ಗದಗ- ವಾಡಿ ಉದ್ದೇಶಿತ ರೈಲು ಮಾರ್ಗ ಗದಗ-ಕೊಪ್ಪಳ ಉದ್ದೇಶಿತ ಬ್ರಾಡ್ ಗೇಜ್ ರೈಲು ಮಾರ್ಗ ಗದಗದಿಂದ ತಳಕಲ್‌ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್‌ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್ 24ರೊಳಗೆ ಸಂಪೂರ್ಣ ಮುಗಿಯಲಿದೆ. ಬಳಿಕವಷ್ಟೇ ರೈಲು ಸಂಚಾರ ಆರಂಭಿಸಲಿದೆ.
ತಳಕಲ್, ಕುಕನೂರು, ಯಲಬುರ್ಗಾ, ಸಂಗನಾಳ ಲಿಂಗಲಬಂಡಿವರೆಗೆ ಪ್ರಾಯೋಗೀಕ ರೈಲು ಸಂಚರಿಸಿದೆ. ಕೆಲವು ದಿನಗಳಿಂದ ಹನುಮಾಪುರದಿಂದ ಲಿಂಗಲಬಂಡಿ, ಕುಷ್ಟಗಿ ಪಟ್ಟಣದ ಸಂತ ಶಿಶುನಾಳ ಷರೀಫ್ ನಗರದವರೆಗೂ ಹಳಿ ಜೋಡಣೆ ಕೆಲಸ ಆಗಿದೆ. ಸದ್ಯ ಕುಷ್ಟಗಿ ಪಟ್ಟಣದವರೆಗೆ ರೈಲ್ವೆ ಹಳಿಗಳ ಜೋಡಣೆ ಕೆಲಸ ವೇಗದಲ್ಲಿ ಸಾಗಿದೆ.
ಕಳೆದ ಮಂಗಳವಾರ ರೈಲ್ವೆ ಇಂಜಿನ್ ಮೂಲಕ ಕುಷ್ಟಗಿ ರೈಲ್ವೆ ನಿಲ್ದಾಣವರೆಗೂ ಬಿಲಾಯಿ ಉಕ್ಕು ಕಾರ್ಖನೆಯಲ್ಲಿ ಸಿದ್ದಗೊಂಡ 26 ಮೀಟರ ಉದ್ದ ಇರುವ ಹೊಸ ರೈಲ್ವೆ ಹಳಿಗಳ ಜೋಡಣೆ ಹಾಗೂ ರೈಲ್ವೆ ಟ್ರ್ಯಾಕ್ ಚಕೀಂಗ್ ಕಾರ್ಯ ನಡೆದಿದೆ.
ಕುಷ್ಟಗಿ ಪಟ್ಟಣಕ್ಕೆ ಪ್ರ ಪ್ರಥಮ ಬಾರಿಗೆ ರೈಲಿನ ಇಂಜಿನ್ ಹಾರ್ನ್ ಮಾಡುತ್ತ ಬಂದಿರುವುದು ಕುಷ್ಟಗಿ ಪಟ್ಟಣದ ಜನತೆಗೆ ಸಂತಸ ಉಕ್ಕಿದೆ. ರೈಲ್ವೇ ಟ್ರ್ಯಾಕ್ ಚಕಿಂಗ್ ಗೆ ರೈಲ್ವೇ ಇಂಜಿನ್ ಬರುತ್ತಿದ್ದಂತೆ ಜನ ಮೊಬೈಲ್ ಸೆಲ್ಪಿಗೆ ಮುಗಿ ಬಿದ್ದು ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಶತಮಾನದ ಕನಸು ನನಸಾಗುವ ಘಳಿಗೆಯಲ್ಲಿ ಸಂಸದ ಕರಡಿ ಸಂಗಣ್ಣ ಅವರ ಇಚ್ಚಾಶಕ್ತಿಯಿಂದ ಇದು ಸಾದ್ಯ ಎಂದು ನಿರೂಪಿತವಾಗಿದೆ.
-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.