ಕುಷ್ಟಗಿ: ಮಣ್ಣಿನ ಮನೆಯಲ್ಲಿದ್ದವರಿಗೆ‌ ಆತಂಕ ಸೃಷ್ಟಿಸಿದ ಮಳೆ

Team Udayavani, Oct 17, 2022, 3:57 PM IST

ಕುಷ್ಟಗಿ: ಮಣ್ಣಿನ ಮನೆಯಲ್ಲಿದ್ದವರಿಗೆ‌ ಆತಂಕ ಸೃಷ್ಟಿಸಿದ ಮಳೆ

ಕುಷ್ಟಗಿ: ಚಿತ್ತಾ ಮಳೆಗೆ ತಾಲೂಕು ತತ್ತರಿಸಿದ್ದು, ನಿರಂತರ ಮಳೆಗೆ ಅನ್ನದಾತರ ಚಿತ್ತ ಕದಡಿದೆ. ತಾಲೂಕಿನಲ್ಲಿ ವ್ಯಾಪಕ ಮಳೆಗೆ ಬಹುತೇಕ ಮಣ್ಣಿನ ಮನೆಗಳು ಕುಸಿಯಲಾರಂಭಿಸಿದ್ದು, ಮಣ್ಣಿನ ಮನೆಯಲ್ಲಿದ್ದವರಿಗೆ ಆತಂಕಸೃಷ್ಟಿಸಿದೆ.

ತಾಲೂಕಿನಲ್ಲಿ ಆಗಸ್ಟ್‌ ಕೊನೆಯ ವಾರದಿಂದ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ನಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಮಳೆಗೆ ತಾಲೂಕಿನ 41 ಕೆರೆಗಳ ಪೈಕಿ ಈಗಾಗಲೇ 11 ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಪ್ರಸಕ್ತ ವರ್ಷ ಎಲ್ಲ ಮಳೆಗಳಾಗುತ್ತಿದ್ದು, ಕೆರೆ ಕಟ್ಟೆ, ಚೆಕ್‌ ಡ್ಯಾಂ, ಕೃಷಿ ಹೊಂಡ ನೀರಿನಿಂದ ಭರ್ತಿಯಾಗಿದೆ.

ನಿರಂತರ ಮಳೆಯಿಂದ ಬಿತ್ತನೆಗೆ ಅವಕಾಶ ಇಲ್ಲ. ಹೀಗಾಗಿ ಜಮೀನುಗಳ ತೇವಾಂಶ ಹೆಚ್ಚಿದ್ದು, ಕಳೆಕಸ ಜಾಸ್ತಿಯಾಗಿದೆ. ಈ ಮಳೆಯಿಂದಾಗಿ ಹತ್ತಿ, ತೊಗರಿ, ಮೆಕ್ಕೆಜೋಳ ಸೇರಿದಂತೆ 25 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ, ಟೋಮ್ಯಾಟೋ, ಈರುಳ್ಳಿ, ಚೆಂಡು ಹೂವು, ಗಲಾಟೆ ಸೇರಿದಂತೆ 89 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಇದುವರೆಗೂ 130 ರೈತರಿಗೆ 16.15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಿದ್ದ ಮನೆಗಳ ಪೈಕಿ ಬಹುತೇಕ ಮಣ್ಣಿನ ಮನೆಗಳಾಗಿದ್ದು, ಹನುಮನಾಳ, ಹನುಮಸಾಗರ ಹೋಬಳಿಗಳಲ್ಲಿ ಹೆಚ್ಚು ಮನೆ ಬಿದ್ದಿರುವುದು ಕಂದಾಯ ಇಲಾಖೆಯ ಮಾಹಿತಿ. ಗ್ರಾಮ ಲೆಕ್ಕಾಧಿಕಾರಿಗಳು, ಜೆಇ  ಹಾಗೂ ಪಿಡಿಒ ಸೇರಿದಂತೆ ಜಂಟಿ ಸಮೀಕ್ಷೆ ನಡೆಸಲಾಗಿದೆ.

ಜೂನ್‌-ಸೆಪ್ಟೆಂಬರ್‌ವರೆಗೂ ಸುರಿದ ಮಳೆಯಿಂದ ಭಾಗಶಃ ಹಾನಿಯಾದ 188 ಮನೆಗಳಿಗೆ 1.03 ಕೋಟಿ ರೂ.ಪರಿಹಾರ ನೀಡಲಾಗಿದೆ. ಈ ಪೈಕಿ ಪುನರ್‌ ನಿರ್ಮಾಣ ಸ್ಥಿತಿಯಲ್ಲಿ (ಬಿ-2) 22 ಮನೆಗಳಿಗೆ ತಲಾ 95,100 ರೂ. ಪರಿಹಾರ, ಭಾಗಶಃ (ಸಿ-2) 161 ಮನೆಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗಿದೆ.

ಹನುಮನಾಳ, ಯಲಬುರ್ತಿ, ಕಿಲ್ಲಾರಹಟ್ಟಿ, ಹಿರೇಬನ್ನಿಗೋಳ, ತೋಪಲಕಟ್ಟಿ,ಬಾದಮಿನಾಳ, ತುಮರಿಕೊಪ್ಪ, ನೀಲೋಗಲ್‌, ವಕ್ಕಂದುರ್ಗ, ಎಂ. ರಾಂಪುರ, ಗುಮಗೇರಿ, ನಿಡಶೇಸಿ, ಟೆಂಗುಂಟಿ, ಹನುಮಸಾಗರ, ಕಾಟಾಪುರ, ಯಲಬುಣಚಿ, ಯರಗೇರಾದಲ್ಲಿ ಮನೆಗಳು ಕುಸಿದಿವೆ. ಕಳೆದ 15 ದಿನಗಳಲ್ಲಿ 95 ಮನೆಗಳು ಬಿದ್ದಿದ್ದು, ಜಂಟಿ ಸಮೀಕ್ಷೆ ಮೂಲಕ ಪರಿಹಾರ ನೀಡಲಾಗುತ್ತಿದೆ.

ಗುಡುಗು, ಸಿಡಿಲಿನ ಅವಘಡ ತಡೆಯಲು ಈಗಾಗಲೇ ಗ್ರಾಮ ಸಭೆ ಮೂಲಕ ಸಿಡಿಲು ಸ್ಮಾರ್ಟ್‌ ಫೋನ್‌ನಲ್ಲಿ ಆ್ಯಪ್‌ ಅಳವಡಿಸಿಕೊಳ್ಳಲು ಮುನ್ನೆಚ್ಚರಿಕೆ ಮಾಹಿತಿ
ನೀಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ ಕೇಂದ್ರ ಸ್ಥಳದಲ್ಲಿದ್ದು, ಘಟನೆ ನಡೆದರೆ ಸ್ಥಾನಿಕ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ.

ಮಣ್ಣಿ ಮನೆಯಲ್ಲಿ ವಾಸವಾಗಿರುವವರು ಅಭದ್ರವಾಗಿದ್ದರೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ  ಶಾಲೆಗಳು ದಸರಾ ರಜೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶಾಲೆ, ಅಂಗನವಾಡಿ, ಸಮುದಾಯ ಭವನದಲ್ಲಿ ಉಳಿದುಕೊಳ್ಳಬಹುದಾಗಿದೆ. ಮಳೆ ಬಂದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಳ್ಳದ ಪ್ರವಾಹ ಇಳಿಯುವವರೆಗೂ ಹಳ್ಳದಾಟಬಾರದು.

ಗುರುರಾಜ್‌ ಚಲವಾದಿ, ಕುಷ್ಟಗಿ ತಹಶೀಲ್ದಾರ್‌

*ಮಂಜುನಾಥ ಮಹಾಲಿಂಗಪುರ 

ಟಾಪ್ ನ್ಯೂಸ್

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kushtagi-patte

Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.