ಕುಷ್ಟಗಿಯ 5 ತಾಪಂ ಕ್ಷೇತ್ರ ರದ್ದು
Team Udayavani, Mar 26, 2021, 8:13 PM IST
ಕುಷ್ಟಗಿ: ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ ವಿಂಗಡಣೆ ಕನ್ನಡಿಯೊಳಗಿನ ಗಂಟಾಗಿದ್ದು, ರದ್ದಾಗಲಿರುವ 5 ತಾಲೂಕು ಪಂಚಾಯತ್ ಕ್ಷೇತ್ರಗಳ ವಿವರಣೆ ನಿಖರವಾಗಿ ತಿಳಿಯದ ಕಾರಣ ಆಂತರಿಕ ಗೊಂದಲ, ಕುತೂಹಲಕ್ಕೆ ಎಡೆಮಾಡಿದೆ. 25 ತಾಪಂ ಕ್ಷೇತ್ರಗಳು, 7 ಜಿಪಂ ಕ್ಷೇತ್ರಗಳಿರುವ ಕುಷ್ಟಗಿ ತಾಲೂಕಿನಲ್ಲಿ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ 5 ತಾಪಂ ರದ್ದಾಗಲಿದ್ದು, ಜಿಪಂ ಕ್ಷೇತ್ರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಇದೀಗ ರದ್ದಾಗಲಿರುವ ತಾಪಂ ಕ್ಷೇತ್ರಗಳು ಯಾವವು ಎನ್ನುವುದು ಖಚಿತವಾಗಿಲ್ಲ. ಲಭ್ಯವಾದ ಮಾಹಿತಿಗಳ ಪ್ರಕಾರ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಾಗಿರುವ ಎರಡೂ¾ರು ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮೂರು ಪ್ರಸ್ತಾವನೆಯಲ್ಲಿ ಅಂತಿಮ ಯಾವುದು ಎನ್ನುವುದು ಅಸ್ಪಷ್ಟ. ಸಂಬಂ ಧಿಸಿದ ಅ ಧಿಕಾರಿಗಳನ್ನು ವಿಚಾರಿಸಿದರೆಸರ್ಕಾರದತ್ತ ಬೆರಳು ಮಾಡುತ್ತಿದ್ದಾರೆ. ರದ್ದಾಗಲಿರುವ ತಾಪಂ ಕ್ಷೇತ್ರಗಳ ಮಾನದಂಡ ವಿಚಾರದಲ್ಲಿ ಸ್ಥಳೀಯ ಅ ಧಿಕಾರಿಗಳ ನಡೆ ಗೊಂದಲ ಮೂಡಿಸಿದೆ.
ಜಿಪಂ ಹಾಗೂ ತಾಪಂ ಕ್ಷೇತ್ರ ಪುನರ್ ವಿಂಗಡಣೆ 10 ವರ್ಷಕ್ಕೊಮ್ಮೆ ಆಗಿರುವ ಹಿನ್ನೆಲೆ ಇದೆ. 1999-2000ರಲ್ಲಿ 18 ತಾಪಂ ಕ್ಷೇತ್ರಗಳಿದ್ದವು. 2004-05ರ ಪುನರ್ ವಿಂಗಡಣೆಯಲ್ಲಿ ಹೊಸದಾಗಿ 4 ಪಂಚಾಯತ್ ಗಳು ಉದಯವಾಗಿ 22 ತಾಪಂ ಕ್ಷೇತ್ರಗಳಾಗಿದ್ದವು. ಆಗ ಹಿರೇಮನ್ನಾಪುರ ಜಿಪಂ ಕ್ಷೇತ್ರವಾಗಿ ಉದಯಿಸಿತ್ತು.
2009-10ರಲ್ಲಿ ಯಾವುದೇ ಪುನರ್ ವಿಂಗಡನೆಯಾಗದೇ ಕುಷ್ಟಗಿ ತಾಲೂಕಿನಲ್ಲಿ 22 ತಾಪಂ ಹಾಗೂ 6 ಜಿಪಂ ಕ್ಷೇತ್ರಗಳಾಗಿದ್ದವು. 2015ರ ಮಧ್ಯಂತರದಲ್ಲಿ ಮತ್ತೆ ಕಳಮಳ್ಳಿ, ಕುಂಬಳಾವತಿ, ಬಿಜಕಲ್ ತಾಪಂ ಕ್ಷೇತ್ರಗಳು ಹಾಗೂ ಯರಗೇರಾ ಜಿಪಂ ಕ್ಷೇತ್ರ ಉದಯಿಸಿದ್ದವು. 2015ರಿಂದ ಇಲ್ಲಿಯವರೆಗೂ ಕುಷ್ಟಗಿ ತಾಲೂಕಿನಲ್ಲಿ 25 ತಾಪಂ ಕ್ಷೇತ್ರಗಳು, 7 ಜಿಪಂ ಕ್ಷೇತ್ರಗಳಿವೆ. ಇದೀಗ 2021ರ ಪುನರ್ ವಿಂಗಡಣೆ ಸಂದರ್ಭದಲ್ಲಿ 5 ತಾಪಂ ಕ್ಷೇತ್ರಗಳು ರದ್ದಾಗಿದ್ದು, ಜಿಪಂ ಕ್ಷೇತ್ರಗಳು ಯಥಾಸ್ಥಿತಿಯಲ್ಲಿವೆ. ಇದೀಗ ರದ್ದಾಗಲಿರುವ ತಾಪಂ ಕ್ಷೇತ್ರಗಳನ್ನು ಪ್ರಕಟಿಸಿದರೆ ಅಸಮಾಧಾನ ಸ್ಫೋಟವಾಗುವ ಸಾಧ್ಯತೆ ಇದೆ.
ಈಗಾಗಲೇ ಮಾಲಗಿತ್ತಿ, ಮುದೇನೂರು ತಾಪಂ ಕ್ಷೇತ್ರಗಳು ರದ್ದಾಗದಂತೆ ಸ್ಥಳೀಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಕೇಸೂರು ಗ್ರಾಪಂನ್ನು ಅಡವಿಬಾವಿ ತಾಪಂ ಕ್ಷೇತ್ರದಲ್ಲಿ ಸೇರ್ಪಡೆ ಮಾಡದಂತೆ ಮನವಿ ಸಲ್ಲಿಸಲಾಗಿದೆ. ಈ ಗೊಂದಲದ ನಡುವೆಯೂ ತಾಪಂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದ್ದು, ಅಂತಿಮ ನಿರ್ಧಾರ ಏನಾಗುತ್ತದೋ ಎಂಬ ಕುತೂಹಲ ಹೆಚ್ಚಿಸಿದೆ.
2011ರ ಜನಸಂಖ್ಯೆ ಪ್ರಕಾರ ಪ್ರತಿ ತಾಪಂ ಕ್ಷೇತ್ರಕ್ಕೆ 10 ಸಾವಿರ ಜನಸಂಖ್ಯೆಯ ಮಾನದಂಡ ಬದಲಿಗೆ ಶೇ. 2ರಷ್ಟು ಹೆಚ್ಚಿಸಿ 12 ಸಾವಿರ ಜನಸಂಖ್ಯೆಯಿಂದ 18 ಸಾವಿರ ಜನಸಂಖ್ಯೆ ಮಿತಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 20 ತಾಪಂ ಕ್ಷೇತ್ರಗಳನ್ನು ಸರಿಹೊಂದಿಸುವ ಪ್ರಯತ್ನ ನಡೆಸಲಾಗಿದೆ.
ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.