ಕುಷ್ಟಗಿ: ಹಾವುಗಳ ಕಾಟಕ್ಕೆ ಹೆದರಿದ ಅಲೆಮಾರಿ ಬುಡಕಟ್ಟು ಜನ
Team Udayavani, Jul 22, 2022, 9:36 PM IST
Kushtagi, tribe, afraid of snakes,
ಕುಷ್ಟಗಿ: ಪಟ್ಟಣದ ಹೊರವಲಯ ಕೃಷ್ಣಗಿರಿ ಕಾಲೋನಿಯ ನೀರಿನ ಟ್ಯಾಂಕ್ ಬಳಿ ಅಲೆಮಾರಿ ಬುಡಕಟ್ಟು ಸಮುದಾಯದವರು ವಾಸವಾಗಿರುವ ಪ್ರದೇಶದಲ್ಲಿ ಹಾವುಗಳ ಕಾಟಕ್ಕೆ ಜನ ಹೆದರಿದ್ದಾರೆ.
ಈ ಪ್ರದೇಶದಲ್ಲಿ ಚರಂಡಿ, ರಸ್ತೆ ಯಾವೂದೇ ಸೌಲಭ್ಯಗಳಿಲ್ಲ. ಕೃಷ್ಣಗಿರಿ ಕಾಲೋನಿಯ ಹೊರವಲಯದಲ್ಲಿ ಚರಂಡಿ ನೀರು ನಿಂತು ಮುಳ್ಳು ಕಂಟಿ ಬೆಳೆದಿದೆ. ಕಪ್ಪು ಭೂಮಿಯ ಈ ಪ್ರದೇಶದಲ್ಲಿ ಸ್ವಲ್ಪ ಮಳೆಯಾದರೆ ಸಾಕು ರಸ್ತೆ ಕೆಸರು ಗದ್ದೆಯಾಗುತ್ತಿದೆ. ಸೊಳ್ಳೆ ಕಾಟ ಅತೀಯಾಗಿದ್ದು ರಾತ್ರಿ ಮಲಗುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಹಾವು, ವಿಷ ಜಂತುಗಳ ಭಯ ಇದೆ. ಗುರುವಾರ ಮಧ್ಯಾಹ್ನ ಎರಡು ನಾಗರಹಾವು ಪತ್ತೆಯಾಗಿವೆ.
ಸಂತ ಶಿಶುನಾಳ ಷರೀಪ ನಗರದಲ್ಲಿರುವ ಹಾವಾಡಿಗರು ಜೋಡಿ ನಾಗರಹಾವನ್ನು ಹಿಡಿದು ಭಯ ನಿವಾರಿಸಿದ್ದಾರೆ.ದಿನೇ ದಿನೇ ಪರಿಸ್ಥಿತಿ ಅಯೋಮಯವಾಗಿದ್ದು ಬಿಟ್ಟು ಹೋಗುವ ಪರಿಸ್ಥಿಗೆ ಕಾರಣವಾಗಿದ್ದು ಮಳೆಗಾಲ ಮುಗಿಯುವವರೆಗೂ ಈ. ಗೋಳು ತಪ್ಪದಂತಾಗಿದೆ. ಸ್ಥಳೀಯ ನಿವಾಸಿ ಮಂಜುನಾಥ ಕಟ್ಟಿಮನಿ, ಪುರಸಭೆ ಸದಸ್ಯೆ ಗೀತಾ ಕೋಳೂರು ಈ ಪ್ರದೇಶದ ನಿವಾಸಿಗಳ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ. ಮೂಲ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಿದರೂ ಪ್ರಯೋಜನೆ ಆಗಿಲ್ಲ.
ಪುರಸಭೆ ನಿರ್ಲಕ್ಷೆ ಯಿಂದ ಈ ಪ್ರದೇಶ ಮತ್ತೊಂದು ಕೊಳಗೇರಿ ಆಗಿದೆ. ನಮ್ಮ ಗೋಳು ಕೇಳುವವರು ಯಾರಿಲ್ಲ ಎಂದು ಮಂಜುನಾಥ ಕಟ್ಟಿಮನಿ ಕಳವಳ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.