![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 24, 2022, 7:10 PM IST
ಕುಷ್ಟಗಿ:ತಾಲೂಕಿನ ಗಡಿಗ್ರಾಮ ರಾಂಪೂರ ಗ್ರಾಮದ ಹೊರವಲಯದ ರಸ್ತೆ ಪಕ್ಕದ ತಗ್ಗು ಪ್ರದೇಶದಲ್ಲಿ ನಿಂತ ನೀರಿನಲ್ಲಿ ಇಬ್ಬರು ಬಾಲಕರು ಜೀವಂತ ಸಮಾದಿಯಾದ ಹೃದಯ ವಿದ್ರಾವಕ ಘಟನೆ ನಡೆದಿದ್ದು ದೀಪಾವಳಿ ಹಬ್ಬದಲ್ಲಿ ಮನೆ ಬೆಳಗುವ ಎರಡು ದೀಪಗಳು ನಂದಿವೆ.
ರಾಂಪೂರ ಗ್ರಾಮದ ದೇವೇಂದ್ರಪ್ಪ ಮಾಡಗೇರ್ ಎಂಬುವರ ಜಮೀನಿನ ಪಕ್ಕದಲ್ಲಿ ಇತ್ತೀಚಿನ ಮಳೆಯಿಂದ ವಕ್ಕಂದುರ್ಗಾ ರಸ್ತೆಗೆ ಹೊಂದಿಕೊಂಡಿರುವ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಬಾಲಕರಾದ ಮಹಾಂತೇಶ ಮಲ್ಲಪ್ಪ ಮಾದರ (10) ಹಾಗೂ ವಿಜಯ್ ಪರಸಪ್ಪ ಮಾದರ್ (10) ಇನ್ನಿಬ್ಬರೊಂದಿಗೆ ಸೇರಿ ದೀಪಾವಳಿ ಹಬ್ಬದ ಶಾಲೆ ರಜೆ ಹಿನ್ನೆಲೆಯಲ್ಲಿ ಎತ್ತಿನ ಮೈತೊಳೆಯಲು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಮಹಾಂತೇಶ ಹಾಗೂ ವಿಜಯ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮುಳುಗಿದ್ದಾರೆ. ದಡದಲ್ಲಿದ್ದ ಬಾಲಕರಿಬ್ಬರು ಕೂಡಲೇ ಊರವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯರು ದೌಡಾಯಿಸಿ ಇಬ್ಬರನ್ನು ಮೇಲಕ್ಕೆತ್ತುವಾಗಲೇ ಸಾವನ್ನಪ್ಪಿದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ದೀಪಾವಳಿ ಹಬ್ಬದಲ್ಲಿ ಮಕ್ಕಳಿಬ್ಬರ ದುರಂತ ಸಾವು, ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನ್ನೆಚ್ಚರಿಕೆ ನಡುವೆಯೂ ನಡೆದ ದುರಂತ
ಅಧಿಕೃತ, ಅನಧಿಕೃತ ಗಣಿಗಾರಿಕೆಯ ತೆರೆದ ಗುಂಡಿ, ಕೃಷಿ ಹೊಂಡಗಳಲ್ಲಿ ನೀರು ಜಮಾವಣೆ ಹಿನ್ನೆಲೆಯಲ್ಲಿ ರಕ್ಷಣಾತ್ಮಕ ಬೇಲಿಯ ಮುನ್ನೆಚ್ಚರಿಕೆವಹಿಸದೇ ಇರುವುದು ಪ್ರತಿ ವರ್ಷ ಮಕ್ಕಳು, ಈಜು ಬಾರದವರು ಹಾಗೂ ಜಾನುವಾರು ಸಾಯುತ್ತಿವೆ. ಕಳೆದೆರೆಡು ವರ್ಷಗಳ ಹಿಂದೆ ಪೊಲೀಸ್ ಇಲಾಖೆ ಸರ್ವೆ ನಡೆಸಿ ತೆರೆದ ಗುಂಡಿಗಳನ್ನು ಗುರುತಿಸಿ, ಆಯಾ ಗಣಿ ಮಾಲೀಕರಿಗೆ, ಸಂಬಂಧಿಸಿದವರಿಗೆ ಗುಂಡಿ ಮುಚ್ಚಲು ಹಾಗೂ ರಕ್ಷಣಾತ್ಮಕ ಬೇಲಿ ಅಳವಡಿಸಲು ನೋಟಿಸ್ ನೀಡಿ ಮುನ್ನೆಚ್ಚರಿಕೆವಹಿಸಿತ್ತು. ಆದಾಗ್ಯೂ ಇಂತಹ ಪ್ರಕರಣ ಘಟಿಸುತ್ತಿರುವುದು ದುರದೃಷ್ಟಕರವೆನಿಸಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.