Kushtagi: ಯುವಕನಿಗೆ ಪಿಎಸೈ ಕಪಾಳ ಮೋಕ್ಷ; ಪಿಎಸೈ ವಿರುದ್ದ ತಿರುಗಿದ ಸ್ಥಳೀಯರ ಪ್ರತಿಭಟನೆ
Team Udayavani, Oct 20, 2023, 3:45 PM IST
ಕುಷ್ಟಗಿ: ಪಿ.ಎಸ್.ಐ. ಮುದ್ದುರಂಗಸ್ವಾಮಿ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪಿಎಸೈ ವಿರುದ್ದ ಪ್ರತಿಭಟನೆಗೆ ತಿರುಗಿದ್ದು, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಅಘೋಷಿತ ಪ್ರತಿಭಟನೆ ನಡೆಸಿ, ಪಿಎಸೈ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗ ಆ.20ರ ಶುಕ್ರವಾರ ನಡೆಯಿತು.
ಕುಷ್ಟಗಿ ಪಟ್ಟಣದ ಸಮಾಜ ಸೇವಕ ರವಿಕುಮಾರ ಹಿರೇಮಠ ಅವರ ಪುತ್ರ, ನಂದೀಶ ಬೈಕಿನಲ್ಲಿ ಬಂದು ಕಂದಕೂರ ಜುವೆಲ್ಲರ್ಸ್ ಬಳಿ ಎಳನೀರು ಖರೀದಿಸಲು ರಸ್ತೆಯ ಬದಿ ಬೈಕ್ ನಿಲ್ಲಿಸಿದ್ದರು.
ಅದೇ ವೇಳೆ ಆಗಮಿಸಿದ್ದ ಪಿಎಸೈ ಮುದ್ದುರಂಗಸ್ವಾಮಿ ಈ ಯುವಕನಿಗೆ ಕಪಾಳಮೋಕ್ಷ ಮಾಡಿದರಲ್ಲದೇ ಬೂಟ್ ಕಾಲಿನಿಂದ ಒದ್ದು, ಪೊಲೀಸ್ ಠಾಣೆಗೆ ಎಳೆದೊಯ್ದುರು. ನಂತರ ಪೊಲೀಸ್ ಠಾಣೆಯಲ್ಲಿ ಬೆಲ್ಟ್ ನಿಂದ ಥಳಿಸಿದರೆಂದು ಆರೋಪಿಸಲಾಗಿದೆ.
ಈ ಪ್ರಕರಣದ ಬೆನ್ನಲ್ಲೇ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಅಭಿಮಾನಿಗಳು, ಏಕಾಏಕಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಪಿಎಸೈ ವರ್ತನೆಯನ್ನು ಟೀಕಿಸಿದರಲ್ಲದೇ ಕಾಂಗ್ರೆಸ್ ಏಜೆಂಟ್ ಪಿಎಸೈ ಎಂದು ಕೂಗಿ ಆಕ್ರೋಶ ಹೊರಹಾಕಿದರು. ಪಿಎಸೈ ಮುದ್ದುರಂಗಸ್ವಾಮಿ ಅವರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.
ಬಸವೇಶ್ವರ ವೃತ್ತದಲ್ಲಿ ಧರಣಿ ನಿರತರನ್ನು ಸಿಪಿಐ ಯಶವಂತ ಬಿಸರಳ್ಳಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಸಮಾಜಾಯಿಷಿ, ಏಕಾಏಕಿ ಪ್ರತಿಭಟನೆ ಮಾಡದಿರಲು ಮನವಿಗೆ ಪ್ರತಿಭಟನಾಕಾರರು ಜಗ್ಗಲಿಲ್ಲ. ರವಿಕುಮಾರ ಹಿರೇಮಠ ಅವರ ಪುತ್ರ ನಿನ್ನೆ ಬೆಂಗಳೂರಿನಿಂದ ಬಂದಿದ್ದು, ತಾಯಿಗೆ ಹುಶಾರು ಇಲ್ಲ ಎಂದು ಎಳನೀರು ತರಲು ಬೈಕಿನಲ್ಲಿ ಹೋದಾಗ, ಪಿಎಸೈ ಮುದ್ದುರಂಗಸ್ವಾಮಿ, ಅವರು, ಜಂಗಮ ಸಮಾಜ ಯುವಕ ನಂದೀಶನನ್ನು ಮನಸೋಇಚ್ಚೆ ಥಳಿಸಿದ್ದು, ಠಾಣೆಗೆ ಎಳೆದೊಯ್ದಿರುವ ಅವಮಾನವೀಯ ವರ್ತನೆಯನ್ನು ಪ್ರಶ್ನಿಸಿದರು.
ಟ್ರಾಫಿಕ್ ಪಕ್ರರಣ ಉಲ್ಲಂಘಿಸಿದರೆ ದಂಡ ಹಾಕದೇ ಅವರ ಮೇಲೆ ಹಲ್ಲೆ ಮಾಡುವ ದುರ್ವರ್ತನೆಯನ್ನು ವಿಜಯಕುಮಾರ ಹಿರೇಮಠ ಖಂಡಿಸಿದರು. ಈ ಪ್ರಕರಣ ಇಷ್ಟಕ್ಕೆ ಸುಮ್ಮನೇ ಬಿಡುವುದಿಲ್ಲ ಕುಷ್ಟಗಿ ಪಿಎಸೈ ದುರ್ವರ್ತನೆ ಖಂಡಿಸಿ ಕುಷ್ಟಗಿ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಸಿದರು.
ಈ ಕುರಿತು ಸ್ಪಷ್ಟನೆ ನೀಡಿದ ಪಿಎಸೈ ಮುದ್ದುರಂಗಸ್ವಾಮಿ ಅವರು, ನನಗೆ ರವಿಕುಮಾರ ಹಿರೇಮಠ ಎನ್ನುವುದು ಗೊತ್ತಿಲ್ಲ ಸದರಿ ಯುವಕ ಕಾಲೇಜು ಅಕ್ಕಪಕ್ಕ ಬೈಕ್ ಸೈಲೆನ್ಸರ್ ಕಿತ್ತು ಕರ್ಕಶ ಸೌಂಡ್ ಮಾಡಿಕೊಂಡು ವಾಹನ ಸಂಚರಿಸಿರುವುದು ಗಮನಿಸಿದ್ದೇನೆ. ಸದರಿ ಯುವಕ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ನನಗೆ ಕಾಂಗ್ರೆಸ್, ಬಿಜೆಪಿ ಕಡೆಯವರು ಯಾವೂದು ಗೊತ್ತಿಲ್ಲ. ನಮಗೆ ರವಿ ಅಜ್ಜನವರಿಗೆ ಯಾವೂದೇ ವೈರತ್ವ ಇಲ್ಲ ಸ್ಪಷ್ಟಪಡಿಸಿದರು.
ಸಿಪಿಐ ಯಶವಂತ ಬಿಸನಳ್ಳಿ ಪ್ರತಿಕ್ರಿಯಿಸಿ, ಈ ಪ್ರಕರಣದ ಹಿನ್ನೆಲೆಯಲ್ಲಿ ಕುಷ್ಟಗಿ ಬಂದ್ ಕರೆ ಬಗ್ಗೆ ಪ್ರಸ್ತಾಪಕ್ಕೆ ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.