ಕುಷ್ಟಗಿ: ಗಿಡಗಳಿಗೆ ನೀರುಣಿಸಿ ಪರಿಸರ ಪ್ರೇಮ ಮೆರೆದ ಯುವಕರು


Team Udayavani, Feb 26, 2022, 12:29 PM IST

10plants

ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಯ ಒಡ್ಡು ಪ್ರದೇಶದಲ್ಲಿ ನೆಟ್ಟ ಗಿಡಗಳು ನೀರಿಲ್ಲದೇ ಒಣಗುತ್ತಿರುವುದನ್ನು ಗಮನಿಸಿದ ಯುವಕರು ಸ್ವಯಂ ಪ್ರೇರಿತರಾಗಿ ಗಿಡಗಳಿಗೆ ನೀರುಣಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

2018ರಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಂಡ‌‌ ನಿಡಶೇಸಿ ಕೆರೆಗೆ ಸುತ್ತಲೂ ಒಡ್ಡು ನಿರ್ಮಿಸಿದ್ದರು. ಈ ಒಡ್ಡಿನ ಅಕ್ಕ ಪಕ್ಕದಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ನೆರವಿನಿಂದ 800 ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನಿರ್ವಹಣೆಗೆ ವನಪಾಲಕರನ್ನು ನೇಮಿಸಿತ್ತು. ಆರಂಭಿಕ ವರ್ಷದಲ್ಲಿ ಅರಣ್ಯ ಇಲಾಖೆ ಬೇಸಿಗೆ ಸಂದರ್ಭದಲ್ಲಿ ನೀರುಣಿಸಿತ್ತು.

ಆದರೆ ಪ್ರಸಕ್ತ ವರ್ಷದಲ್ಲಿ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರುಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ಗಿಡಗಳು ಒಣಗಲಾರಂಭಿಸಿದ್ದವು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ದ್ವಾರಕಾಮಯಿ‌ ಸೇವಾ ಟ್ರಸ್ಟ್ ಯುವಕರು ತಾವೇ ವಂತಿಗೆ ಸಂಗ್ರಹಿಸಿಕೊಂಡು ಶುಕ್ರವಾರ 150 ಕ್ಕೂ ಅಧಿಕ ಗಿಡಗಳಿಗೆ ಒಟ್ಟು ನಾಲ್ಕು ಟ್ಯಾಂಕರ್ ನೀರನ್ನು ಉರಿ ಬಿಸಿಲು‌ ಲೆಕ್ಕಿಸದೇ ನೀರುಣಿಸಿದ್ದಾರೆ.

ಇದನ್ನೂ ಓದಿ:ಗಮನ ಸೆಳೆದ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ

ದ್ವಾರಕಾಮಯಿ ಸಾಯಿ ಸೇವಾ ಟ್ರಸ್ಟ್ ನ ಕೃಷ್ಣ ಕಂದಕೂರು, ರಾಜು ಕತ್ರಿ, ಸತೀಶ್ ಕಂದಗಲ್, ನವೀನ್ ಕಲಾಲ್, ಶ್ರೀಧರ ಮೊದಲಾವರು ಬೆಳಗ್ಗೆ 10 ರಿಂದ ಸಂಜೆ 5 ರವರೆಗೂ ನೀರುಣಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಪಾತೀ ಮಾಡಲು ಸಹಕರಿಸಿದ್ದಾರೆ.

ಈ ಕುರಿತು ಉದಯವಾಣಿ ಯೊಂದಿಗೆ ಮಾತನಾಡಿದ ಕೃಷ್ಣಾ ಕಂದಕೂರು, ನಿಡಶೇಷಿ ಕೆರೆಯ ದಡದ ಒಡ್ಡಿನಲ್ಲಿ ಗಿಡಗಳಿಗೆ ಈಗಿನ ಸಂದರ್ಭದಲ್ಲಿ ನೀರು ಅಗತ್ಯವಾಗಿತ್ತು. ಅರಣ್ಯ ಇಲಾಖೆಯ ಮರ್ಜಿ ಕಾಯದೇ ನಾವೇ ಸ್ನೇಹಿತರು ಪಾಕೇಟ್ ಮನಿಯನ್ನು ಪ್ರತಿ ಟ್ಯಾಂಕರ್ ಗೆ 500 ರೂ. ನಂತೆ ಈ ದಿನ ನಾಲ್ಕು‌ ಟ್ಯಾಂಕರ್ ನೀರುಣಿಸಿರುವುದು ಸಾರ್ಥಕ ಭಾವನೆ ವ್ಯಕ್ತವಾಗಿದೆ. ಇನ್ನೂ ವಾರ ಬಿಟ್ಟು ಇನ್ನುಳಿದ ಗಿಡಗಳಿಗೆ ನೀರುಣಿಸುತ್ತೇವೆ. ಹುಟ್ಟು ಹಬ್ಬದ ಆಚರಣೆ ವೇಳೆ ಸಾವಿರಾರು ಖರ್ಚು ಮಾಡುವ ಬದಲಿಗೆ ಅದೇ ಹಣದಲ್ಲಿ ಇಲ್ಲಿನ ಗಿಡಗಳಿಗೆ ತಾವೇ ಖುದ್ದಾಗಿ ನೀರುಣಿಸಬೇಕು ಅಂದಾಗ ಮಾತ್ರ ಹುಟ್ಟು ಹಬ್ಬ ಸಾರ್ಥಕವಾಗುತ್ತಿದೆ‌ ಎಂದರು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ

Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.