ಕುಷ್ಟಗಿ : ಪಾಲಕರ ಕಣ್ತಪ್ಪಿಸಿ ಅಪ್ರಾಪ್ತೆಯ ಮದುವೆ : ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ
Team Udayavani, Sep 21, 2022, 7:40 AM IST
ಕುಷ್ಟಗಿ : ಅಪ್ರಾಪ್ತೆಯನ್ನು ಪ್ರೀತಿಸಿ, ಪಾಲಕರ ಕಣ್ತಪ್ಪಿಸಿ ಕರೆದೊಯ್ದು ದೇವಸ್ಥಾನದಲ್ಲಿ ತಾಳಿ ಕಟ್ಟಿ ಮದುವೆಯಾಗಿ ಸಂಸಾರ ಶುರು ಹಚ್ಚಿಕೊಂಡಿದ್ದ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಶಿರಹಟ್ಟಿ ತಾಲೂಕಿನ ರಣತ್ತೂರಿನ ರೇಣುಕಾಚಾರ್ಯ ಅಲಿಯಾಸ್ ಸಿದ್ದಾರ್ಥ ಜಡಿಸ್ವಾಮಿ ಮಠದ ಈತ ಗೋವಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಇದ್ದ. ಕಳೆದ 6 ತಿಂಗಳ ಹಿಂದೆ ತಂದೆ,ತಾಯಿಯೊಂದಿಗೆ ವಲಸೆ ಬಂದಿದ್ದ ಕ್ಯಾದಿಗುಪ್ಪ ಮೂಲದ ಅಪ್ರಾಪ್ತೆ ಬಾಲಕಿ ಕೆಲಸಕ್ಕೆ ಹೋದಾಗ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದ್ದು ಯುವಕನಿಗೆ 20 ವರ್ಷ, ಅಪ್ರಾಪ್ತೆಗೆ 17 ವರ್ಷ 4 ತಿಂಗಳು.
ಅನ್ಯ ಜಾತಿ, ಅಪ್ರಾಪ್ತೆ ಎಂದು ಗೊತ್ತಿದ್ದರೂ ನೀನು ಬಹಳ ಚಂದ ಇದ್ದೀಯಾ.. ನಿನ್ನನ್ನೆ ಪ್ರೀತಿ ಮಾಡ್ತೇನೆ ಮದುವೆಯೂ ಆಗ್ತೇನೆ ಎಂದು ಯಾಮಾರಿಸಿದ್ದ.
ಕಳೆದ ಆಗಸ್ಟ್ 8 ರಂದು ಮೊಹರಂ ಹಬ್ಬಕ್ಕೆ ಅಪ್ರಾಪ್ತೆ ಬಾಲಕಿಯ ಕುಟುಂಬ ಕ್ಯಾದಿಗುಪ್ಪಕ್ಕೆ ಹೋಗಿದ್ದ ವೇಳೆ, ಯುವಕ ಬಾಲಕಿಯನ್ನು ಚೊಳಚಗುಡ್ಡಕ್ಕೆ ಕರೆದೊಯ್ದು ಬಲತ್ಕರಿಸಿದ್ದ ಅಲ್ಲದೆ ಆಕೆಯನ್ನು ದೇವಸ್ಥಾನವೊಂದರಲ್ಲಿ ತಾಳಿಕಟ್ಟಿ ಮದುವೆಯೂ ಆಗಿದ್ದ ಜೊತೆಗೆ ಬೇರೆ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಸೆ.19ರಂದು ಪಾಲಕರು ಸ್ಥಳೀಯ ಪೋಲೀಸ್ ಠಾಣೆಗೆ ಮಗಳು ನಾಪತ್ತೆಯಾಗಿರುವ ಕುರಿತು ದೂರು ನೀಡಿ ರೇಣುಕಾಚಾರ್ಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಕುಷ್ಟಗಿ ಪೊಲೀಸರು ಆರೋಪಿ ರೇಣುಕಾಚಾರ್ಯ ಮಠದ್ ವಶಕ್ಕೆ ತೆಗೆದುಕೊಂಡು ಅಪ್ರಾಪ್ತೆ ಬಾಲಕಿಯನ್ನು ಪಾಲಕರ ವಶಕ್ಕೆ ಒಪ್ಪಿಸಿದ್ದಾರೆ.
ಅಪ್ರಾಪ್ತೆಯ ದೂರಿನ ಮೇರೆಗೆ ರೇಣುಕಾಚಾರ್ಯ ವಿರುದ್ದ ಪೋಕ್ಸೋ ಕಾಯ್ಧೆ ಅಡಿ ಬಂಧಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.