ಅನೈತಿಕ ಸಂಬಂಧಕ್ಕೆ ವಿರೋಧ… ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿವಾಹಿತ ಜೋಡಿ
Team Udayavani, Apr 11, 2024, 8:09 PM IST
ಕುಷ್ಟಗಿ: ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯ ವಯಸ್ಕ ವಿವಾಹಿತ ಜೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ.
ಮೃತರನ್ನು ನಿಂಗಪ್ಪ ಹನಮಪ್ಪ ಉಪ್ಪಾರ (38) ಲಕ್ಷ್ಮವ್ವ ದೇವಪ್ಪ ಬಡಿಗೇರ (42) ಎಂದು ಗುರುತಿಸಲಾಗಿದೆ.
ನಿಂಗಪ್ಪ ಉಪ್ಪರ ಹಾಗೂ ಲಕ್ಷ್ಮವ್ವ ಬಡಿಗೇರ ಇಬ್ಬರಿಗೂ ಬೇರೆ ಬೇರೆ ವಿವಾಹ ಆಗಿತ್ತು. ಲಕ್ಷ್ಮವ್ವ ಬಡಿಗೇರ ಗೆ ಮೂವರು ಮಕ್ಕಳು, ನಿಂಗಪ್ಪ ಉಪ್ಪಾರನಿಗೆ ಇಬ್ಬರು ಮಕ್ಕಳಿದ್ದರು.
ಲಕ್ಷ್ಮವ್ವ ಮೊಮ್ಮಕ್ಕಳನ್ನು ಕಂಡಿದ್ದರೂ ಅನೈತಿಕ ಸಂಬಂಧ ಬಿಟ್ಟಿರಲಿಲ್ಲ ಇವರೀರ್ವರ ಅನೈತಿಕ ಸಂಬಂಧ ಗೊತ್ತಾಗಿ ನಿಂಗಪ್ಪ ಉಪ್ಪಾರ ಪತ್ನಿ ತವರು ಮನೆ ಸೇರಿದವಳು ಮತ್ತೆ ಗಂಡನ ಮನೆಯ ಕಡೆ ಮುಖ ಮಾಡಿರಲಿಲ್ಲ. ಒಮ್ಮೆ ನಿಂಗಪ್ಪ ಉಪ್ಪಾರ ಹಾಗೂ ಲಕ್ಷ್ಮವ್ವ ಅಕ್ರಮವಾಗಿ ಜೊತೆಗಿದ್ದಾಗ ಪತಿ ದೇವಪ್ಪ ಬಡಿಗೇರಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ, ಲಕ್ಷ್ಮವ್ವಳ ಪ್ರಚೋಧನೆಯಿಂದ ನಿಂಗಪ್ಪ ಉಪ್ಪಾರ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಲಕ್ಷ್ಮವ್ವಳ ಪತಿ ದೇವಪ್ಪ ಹಾಗೂ ಪುತ್ರನ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ದೇವಪ್ಪ ಬಡಿಗೇರ ಅವರ ಬೆರಳು ತುಂಡರಿತ್ತು. ಈ ಹಿನ್ನೆಲೆಯಲ್ಲಿ ಕುಷ್ಟಗಿ ಪ್ರಕರಣ ದಾಖಲಾಗಿ ನಿಂಗಪ್ಪ ಉಪ್ಪಾರ ಸೆರೆವಾಸ ಅನುಭವಿಸಿ ನಂತರ ಜಾಮೀನಿನ ಮೇಲೆ 10 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಲಕ್ಷ್ಮವ್ವ ಪತಿಗೆ ನಮ್ಮ ಅನೈತಿಕ ಸಂಬಂಧಕ್ಕೆ ನೀನು ಅಡ್ಡಿಯಾದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು.
ಇದಾದ ಕೆಲವು ದಿನಗಳಲ್ಲಿ ಇವರೀರ್ವರ ಅನೈತಿಕ ಸಂಬಂಧ ಬಿಟ್ಟಿರಲಾಗದೇ ಎರಡು ಕಡೆ ಮನೆಯವರ ವಿರೋಧ ಎದುರಿಸಲಾಗದೇ ಕಂಗೆಟ್ಟ ಇಬ್ಬರೂ, ಹಿರೇಬನ್ನಿಗೋಳ ಗ್ರಾಮದ ಹೊರವಲಯದ ಮುತ್ತಣ್ಣ ಉಪ್ಪಾರ ಅವರ ತೋಟದ ಹಳೆಯ ಜನತಾ ಮನೆಯಲ್ಲಿ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಊರಲ್ಲಿ ಇವರೀರ್ವರು ಕಾಣದೇ ಇದ್ದಾಗ ಹುಡುಕಾಡಿದಾಗ ಜೋಡಿ ಅತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಕುಷ್ಟಗಿ ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ಪರಿಶೀಲಿಸಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Congress ಕೊಟ್ಟ ಕುದುರೆ ಏರದ ರಾಹುಲ್ ಗಾಂಧಿ ವೀರನೂ ಅಲ್ಲ, ಶೂರನೂ ಅಲ್ಲ: ಬೊಮ್ಮಾಯಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.