ಕುಷ್ಟಗಿ : ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಜೀಪ್ : ಓರ್ವ ಸಾವು, ಮೂವರಿಗೆ ಗಂಭೀರ ಗಾಯ
Team Udayavani, Jun 7, 2022, 8:24 PM IST
ಕುಷ್ಟಗಿ : ಇಲಕಲ್ ಪಟ್ಟಣದ ಹೊರವಲಯದಲ್ಲಿ ಜೀಪ್ ಪಲ್ಟಿಯಾಗಿ ಓರ್ವ ಯುವಕ ದಾರುಣ ಸಾವೀಗೀಡಾಗಿದ್ದು, ಮೂವರಿಗೆ ಗಂಭೀರ ಸ್ವರೂಪದ ಗಾಯವಾದ ಘಟನೆ ಇಲಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವಕ ಹೇರೂರು ಗ್ರಾಮದ ಶಿವು ಅಳವಂಡಿ ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳನ್ನು ಇಲಕಲ್, ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಷ್ಟಗಿಯ ಯುಥ್ ಕಾಂಗ್ರೆಸ್ ಗೆ ಸೇರಿದ ತೆರೆದ ಜೀಪ್ ಇದಾಗಿದೆ. ಇಲಕಲ್ ಪಟ್ಟಣದ ಅಶೋಕ ಚಲವಾದಿ ಅವರ ಹುಟ್ಟು ಹಬ್ಬಕ್ಕಾಗಿ ಮಹಾಂತೇಶ ಚಲವಾದಿ ಎಂಬುವರು ಜೀಪ್ ಕೊಂಡೊಯ್ದಿದ್ದರು.
ಮಂಗಳವಾರ ಮಧ್ಯಾಹ್ನ ಎನ್ ಎಚ್ ನಲ್ಲಿ ಅತಿವೇಗ ಹಾಗೂ ನಿರ್ಲಕ್ಷದ ಚಾಲನೆಯಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪು ಡಿವೈಡರ್ ಢಿಕ್ಕಿ ಹೊಡೆದು ಚರಂಡಿ ಮೇಲೆ ಪಲ್ಟಿಯಾಗಿ ಬಿದ್ದಿದೆ.
ಇದನ್ನೂ ಓದಿ : ಮಗಳು ಹಠ ಬಿಡಲಿಲ್ಲ,ಅಪ್ಪನ ಕೋಪ ತಗ್ಗಲಿಲ್ಲ: ಪ್ರೀತಿಯ ವಿಚಾರಕ್ಕೆ ನಡೆಯಿತು ಮರ್ಯಾದಾ ಹತ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.