ಕೆರೆ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದ ವೃದ್ಧೆ
Team Udayavani, Mar 10, 2019, 11:33 AM IST
ಕುಷ್ಟಗಿ: ವೃದ್ಧೆಯೊಬ್ಬರು ತಮ್ಮ ವೃದ್ಧಾಪ್ಯ ವೇತನ ಹಾಗೂ ತಾವು ಕೂಡಿಟ್ಟ 10 ಸಾವಿರ ರೂ. ಗಳನ್ನು ನಿಡಶೇಸಿ ಕೆರೆ ಅಭಿವೃದ್ಧಿಗೆ ನೀಡಿ, ಇತರರಿಗೆ ಮಾದರಿಯಾಗಿದ್ದಾರೆ.
ಶಿವಮ್ಮ ಸಜ್ಜನ್ ಕೆರೆ ಅಭಿವೃದ್ಧಿಗೆ ದೇಣಿಗೆ ನೀಡಿದ ವೃದ್ಧೆ. ಇವರು ತಾಲೂಕಿನ ನಿಡಶೇಸಿ ಗ್ರಾಮದವರು. ಬಾಲ್ಯದಿಂದಲೂ ಅಧ್ಯಾತ್ಮ ಪ್ರಭಾವಕ್ಕೆ ಒಳಗಾಗಿ ದೇವದುರ್ಗ ತಾಲೂಕಿನ ಗೆಜ್ಜಿಬಾವಿ ಪಶ್ಚಕಂಥಿ ಹಿರೇಮಠದಲ್ಲಿ ಸ್ವಾಮೀಜಿ ಸೇವಾ ನಿರತರಾಗಿದ್ದರು. ಗೆಜ್ಜಿಭಾವಿ ಶ್ರೀಗಳು ಲಿಂಗೈಕ್ಯರಾದ ಬಳಿಕ ಅವರು ತಮ್ಮ ನೆಂಟರ್ ಮನೆಯಲ್ಲಿ ವಾಸವಾಗಿದ್ದಾರೆ. ಶಿವಮ್ಮ ಸಜ್ಜನ್ ಅವರಿಗೆ ಮಕ್ಕಳಿಲ್ಲ, ಸ್ವಂತಕ್ಕೆ ಮನೆ ಇಲ್ಲ. ಇದ್ದ ಜಮೀನು ನಿಡಶೇಸಿ ಕೆರೆಗೆ ಮುಳುಗಡೆಯಾಗಿದ್ದು, ಸರ್ಕಾರ ನೀಡುತ್ತಿರುವ ವೃದ್ಧಾಪ್ಯ ವೇತನ, ಅವರಿರುವ ನೀಡಿದ ಹಣದಲ್ಲಿ ಜೀವನ ಕಳೆಯುತ್ತಿದ್ದಾರೆ.
ಸಾರ್ವಜನಿಕರು, ರೈತರು ತಮ್ಮೂರಿನ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡ ವಿಷಯವನ್ನು ದಿನಪತ್ರಿಕೆಗಳಲ್ಲಿ ಗಮನಿಸಿದ್ದ ಅವರು ತಾವು ಕೂಡಿಟ್ಟ ಹಣ ನೀಡಬೇಕೆನ್ನಿಸಿತು. ಈ ಹಿನ್ನೆಲೆಯಲ್ಲಿ ಎರಡ್ಮೂರು ಸಾರಿ ಭೇಟಿ ನೀಡಿ ಯಾರಿಗೆ ಹಣ ಕೊಡಬೇಕೆಂದು ತಿಳಿಯದೇ ವಾಪಸ್ಸಾಗಿದ್ದಾರೆ. ಕಳೆದ ಶುಕ್ರವಾರ ಖುದ್ದು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿದ್ದ ಕಲ್ಲೇಶ ತಾಳದ್, ತಾಜುದ್ದೀನ್ ದಳಪತಿ ಅವರಿಗೆ 10 ಸಾವಿರ ರೂ. ಹಸ್ತಾಂತರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈ ಕೆರೆಗೂ ತಮಗೂ ಅವಿನಾಭಾವ ಸಂಬಂಧವಿದೆ. ಈ ಕೆರೆಗೆ ಮುಳುಗಡೆಯಾಗಿರುವ ಜಮೀನಿನಲ್ಲಿ ಸದಾ ನೀರು ಇರಬೇಕು. ಪ್ರಾಣಿ ಪಕ್ಷಿ, ದನಕರುಗಳಿಗೆ ಆಸರೆಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅವರು, ಶಿವಮ್ಮ ಸಜ್ಜನ್ ನಿಸ್ವಾರ್ಥ ಸೇವೆಗೆ ಖುದ್ದಾಗಿ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಈ ವೇಳೆ ತಾಜುದ್ದೀನ್ ದಳಪತಿ, ಅಪ್ಪಣ್ಣ ನವಲೆ ಇತರರಿದ್ದರು.
ದೇಣಿಗೆ: ಕುಷ್ಟಗಿ ತಾಪಂ ಸಿಬ್ಬಂದಿ 2ಲಕ್ಷ ರೂ., ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಮ್ಮ ಇಲಾಖಾ ಸಿಬ್ಬಂದಿ ಸಂಗ್ರಹಿಸಿದ 1.50 ಲಕ್ಷ ರೂ.ಗಳನ್ನು ಕೆರೆ ಅಭಿವೃದ್ಧಿ ಸಮಿತಿಗೆ ನೀಡಿದರು. ಇದೇ ವೇಳೆ ಸಿಪಿಐ ಸುರೇಶ ತಳವಾರ ಮಿತ್ರರಾದ ಇಲಕಲ್ಲ ರಾಘವೇಂದ್ರ ಎಂಟರ್ ಪ್ರೈಸಿಸ್, ಸೂರ್ಯ ನಾರಾಯಣ ರಡ್ಡಿ ಅವರು ಕೆರೆ ಅಭಿವೃದ್ಧಿಗೆ 2 ಲಕ್ಷ ರೂ., ಸ್ಥಳೀಯ ವಿಜಯ ವಿಠ್ಠಲ ಮಂದಿರದಿಂದ 25 ಸಾವಿರ ರೂ. ದೇಣಿಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.