ಕೆರೆ ಹೂಳೆತ್ತುವುದು ಅನಿವಾರ್ಯ


Team Udayavani, Jan 20, 2019, 11:07 AM IST

20-january-20.jpg

ಕುಷ್ಟಗಿ: ಪಟ್ಟಣದ ಸೇರಿದಂತೆ 30ಕ್ಕೂ ಅಧಿಕ ಗ್ರಾಮಗಳಿಗೆ ನಿಡಶೇಸಿ ಕೆರೆ ಅಂತರ್ಜಲದ ಮೂಲವಾಗಿರುವ ಹಿನ್ನೆಲೆಯಲ್ಲಿ ಕೆರೆಯ ಹೂಳೆತ್ತುವುದು ಅನಿವಾರ್ಯವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ವಜ್ರಬಂಡಿ ಕ್ರಾಸ್‌ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿ ನಿಡಶೇಷಿ ಕೆರೆ ಪುನಶ್ಚೇತನ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆರೆಯ ಹೂಳೆತ್ತುವುದು ಸದ್ಯ ಸಕಾಲಿಕವಾಗಿದೆ. ಈಗಲಾದರೂ ಕೆರೆ ಹೂಳೆತ್ತಲು ಮನಸ್ಸು ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ತಾವು ಶಾಸಕರಾಗಿದ್ದಾಗ ಈ ಕೆರೆಯ ಹೂಳೆತ್ತುವುದು, ಆಳ ಹೆಚ್ಚಿಸಲು ಸಮಗ್ರ ಅಭಿವೃದಿœಗಾಗಿ ಸಿ.ಎಂ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 5 ಕೋಟಿ ರೂ. ಮಂಜೂರಾಗಿತ್ತು. ಆದರೆ ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಬಹುಕೋಟಿ ತುಂಡು ಗುತ್ತಿಗೆ ಹಗರಣದಿಂದಾಗಿ ಮಂಜೂರಿಯಾದ ಅನುದಾನ ವಾಪಸ್ಸಾಯಿತು. ತನಿಖೆ ನಂತರ ಬಿಡುಗಡೆಗೊಳಿಸುವ ಭರವಸೆ ಸಿಕ್ಕಿದ್ದರೂ ಪುನಃ ಸದರಿ ಮೊತ್ತ ಬಿಡುಗಡೆಗೊಳಿಸುವ ಪ್ರಯತ್ನವೂ ನಡೆಯಲಿ, ಇತ್ತ ಜನತೆಯ ಸಹಭಾಗಿತ್ವದಲ್ಲಿ ಹೂಳೆತ್ತುವ ಕೆಲಸವು ನಡೆಯಲಿ. ಈ ಹೂಳೆತ್ತುವ ಕಾರ್ಯಯೋಜನೆಗೆ ನಮ್ಮ ಬೆಂಬಲವಿದ್ದು, ಸಮಿತಿ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುವೆ ಎಂದರು.

ಕೆರೆ ಹೂಳೆತ್ತುವ ಸಮಿತಿಯ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಮಳೆ ಬಂದಾಗ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು ಕೆರೆಯಿಂದ ಮಾತ್ರ ಸಾಧ್ಯವಿದೆ. ಈ ಕೆರೆಯ ಪ್ರದೇಶದಲ್ಲಿ ಆಳವಾಗಿ ಹೂಳೆತ್ತುವುದರಿಂದ ನೀರು ಸಂಗ್ರಹಣೆ ಸಾಮಾರ್ಥ್ಯ ಹೆಚ್ಚುವುದಲ್ಲದೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದರು.

ಬಸವರಾಜ್‌ ಕುದರಿಮೋತಿ ಮಾತನಾಡಿ, ಕೆರೆಯ ಪ್ರದೇಶದಲ್ಲಿ ನೀರು ಬರಿದಾದಾಗ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕ್ಷೀಣಿಸಿ, ತಾಪತ್ರಯ ಎದುರಿಸಿದ ಅನುಭವವೂ ಇದೆ. ಹೀಗಾಗಿ ಕೆರೆ ಪ್ರದೇಶದಲ್ಲಿ ನೀರಿದ್ದರೆ ಅಂತರ್ಜಲ ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪುರಸಭೆ ಸದಸ್ಯ ವಸಂತ ಮೇಲಿನಮನಿ ಮಾತನಾಡಿ, ಕೆರೆಯೊಂದಿಗೆ ಭಾವನಾತ್ಮಕ ಸಂಬಂಧ ಉಳಿಯಲು ನಮ್ಮೂರ ಕೆರೆ ಎನ್ನುವ ಭಾವನೆ ಎಲ್ಲರಲ್ಲಿರಬೇಕು ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಆರ್‌.ಕೆ. ದೇಸಾಯಿ ಮಾತನಾಡಿ, ಆಳ ಹೆಚ್ಚಾದಂತೆ ಕೊಳವೆಬಾವಿಯ ನೀರು ವಿಷಕಾರಿಯಾಗುತ್ತಿದೆ. ಇದನ್ನು ತಪ್ಪಿಸಲು ಕೆರೆ ಹೂಳೆತ್ತಿ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಬೇಕಿದೆ. ತಾಲೂಕಿನ 41 ಕೆರೆಗಳಿದ್ದು, ಎಲ್ಲ ಕೆರೆಗಳ ಹೂಳೆತ್ತುವ ಕಾರ್ಯ ನಡೆದರೆ ಉಳಿದ ಕೆರೆಗಳ ಹೂಳೆತ್ತುವುದಕ್ಕೆ ಪ್ರೇರಣೆ ಸಿಗಲಿದೆ ಎಂದರು.

ಮಲ್ಲಿಕಾರ್ಜುನ ಮೇಟಿ ಮಾತನಾಡಿ, ಕೆರೆ ಹೂಳೆತ್ತುವ ಕೆಲಸಕ್ಕೆ ಒಂದೊಂದು ದಿನ ಒಂದು ಗ್ರಾಮ ಶ್ರಮದಾನ ನಿರ್ವಹಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರು ಒಂದು ದಿನದ ಕೂಲಿ ನೀಡಿ ಬೆಂಬಲಿಸಬೇಕೆಂದರು.

ಇದೇ ವೇಳೆ ಪರಸಪ್ಪ ಕತ್ತಿ, ದೊಡ್ಡಬಸವ ಬಯ್ನಾಪುರ, ಅಮರೇಶ್ವರ ಶೆಟ್ಟರ್‌, ಬಸೆಟೆಪ್ಪ ಕುಂಬಳಾವತಿ, ಪುರಸಭೆ ಸದಸ್ಯರಾದ ಕಲ್ಲೇಶ ತಾಳದ, ಚಿರಂಜೀವಿ ಹಿರೇಮಠ, ವೀರೇಶ ಬಂಗಾರಶೆಟ್ಟರ, ಸಿದ್ಧನಗೌಡ ತಳವಗೇರಾ, ಮಂಜುನಾಥ ಕಟ್ಟಿಮನಿ, ತಾಜುದ್ದೀನ್‌ ದಳಪತಿ, ಸಂಗನಗೌಡ ಜೇನರ್‌, ಹನಮಂತಪ್ಪ ಚೌಡ್ಕಿ, ಎಸ್‌.ಎಸ್‌. ಹಿರೇಮಠ, ಟಿ. ಬಸವರಾಜ್‌, ಜಗನ್ನಾಥ ಗೋತಗಿ, ಮಹಾಂತಯ್ಯ ಅರಳಲಿಮಠ ಮತ್ತಿತರಿದ್ದರು.

ಪ್ರಮುಖ ಅಂಶಗಳಿವು
■    ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಶ್ರಮದಾನ.

■    ಕೆರೆ ಹೂಳೆತ್ತುವ ಕಾರ್ಯ. ನಿರ್ವಹಣೆಗೆ ಸಮಿತಿ ಅಸ್ತಿತ್ವ

■    ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ ಸೇವೆಗೆ ಮುಕ್ತ ಅವಕಾಶ.

■    ಪಕ್ಷಬೇಧ ಮರೆತು ಶ್ರಮದಾನ.

■    ಕೆರೆ ಹೂಳೆತ್ತುವ ಕಾರ್ಯಕ್ಕೆ ಶಾಲಾ ಮಕ್ಕಳಿಂದ 1 ರೂ. ವಂತಿಗೆ

■    ನರೇಗಾ ಯೋಜನೆ ಕೂಲಿಕಾರರಿಂದ ಒಂದು ದಿನದ ವೇತನ.

■    ಕೆರೆ ಪ್ರದೇಶದಲ್ಲಿ ಹೂಳೆತ್ತುವುದಕ್ಕೆ ಸಕಾರಾತ್ಮಕ ಸ್ಪಂದನೆ.

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.