ಕುಷ್ಟಗಿ ಪೊಲೀಸರ ಕಾರ್ಯಾಚರಣೆ: ಶ್ರೀಗಂಧ ಕಳ್ಳರ ಬಂಧನ, ಸೊತ್ತುಗಳು ವಶ

Team Udayavani, Jun 20, 2023, 7:58 PM IST

ಕುಷ್ಟಗಿ ಪೊಲೀಸರ ಕಾರ್ಯಾಚರಣೆ: ಶ್ರೀಗಂಧ ಕಳ್ಳರ ಬಂಧನ, ಸೊತ್ತುಗಳು ವಶ

ಕುಷ್ಟಗಿ: ಕುಷ್ಟಗಿ, ತಾವರಗೇರಾ, ಹನುಮಸಾಗರ ಹಾಗೂ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಬೆಳೆದ ಶ್ರೀಗಂಧ ಮರಗಳನ್ನು ಕಡಿದು, ಲಕ್ಷಾಂತರ ರೂಗೆ ಮಾರುತ್ತಿದ್ದ ಕಳ್ಳರ ಜಾಲವನ್ನು ಕುಷ್ಟಗಿ ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ವಣಗೇರಾ ಗ್ರಾಮದ ಹನಮಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿ ಶ್ರೀಗಂಧ ಮರಗಳನ್ನು ಕಡಿದು ತುಂಡುಗಳಾಗಿ ಮಾಡಿ ದೋಟಿಹಾಳ ಗ್ರಾಮದ ಹನಮಂತಪ್ಪ ಬಸಪ್ಪ ಜುಮ್ಲಾಪೂರ ಮಾರಾಟ ಮಾಡಿದ್ದಾರೆ. ಇದನ್ನು ವಿಜಯಪುರದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶಶಿಕುಮಾರ ರೂಢಗಿಗೆ ಮಾರಾಟ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸದರಿ ಆರೋಪಿಗಳಿಗೆ ಸಹಾಯ ಮಾಡಿದ್ದ ದೋಟಿಹಾಳ ಮೂಲದ ಮಂಜುನಾಥ ಹನಮವ್ವ ಮಾದರ, ಚಂದ್ರಪ್ಪ ಹನಮವ್ವ ಮಾದರ, ಈರಣ್ಣ ಸಂಗಪ್ಪ ಕುಂಬಾರ, ಸಣ್ಣೆಪ್ಪ ಗಿಡ್ಡಪ್ಪ ಮಾದರ ಪರಾರಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಹನುಮಸಾಗರ ಪಿಎಸೈ ಅಶೋಕ ಬೇವೂರು, ಎಎಸೈಗಳಾದ ವಸಂತ, ಸಿದ್ರಮಪ್ಪ, ವಿರುಪಾಕ್ಷಿ, ಮಲ್ಲಪ್ಪ, ಗುಂಡಪ್ಪ, ಎಎಸೈ ದುರಗಪ್ಪ ಹಿರೇಮನಿ, ವಿರುಪಾಕ್ಷಿ, ಪರಶುರಾಮ್ ಇವರನ್ನು ಒಳಗೊಂಡ ತಂಡಕ್ಕೆ ವಿಶೇಷ ಬಹುಮಾನಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಅವರಿಗೆ ಶಿಫಾರಸ್ಸು ಮಾಡುವುದಾಗಿ ಡಿವೈಎಸ್ಪಿ ರುದ್ರೇಶ ಮಾಹಿತಿ ನೀಡಿದರು.

ಪತ್ತೆ ಹಚ್ಚಿದ್ದು ಹೀಗೆ: ದೋಟಿಹಾಳ ಗ್ರಾಮದ ಹನಮಂತಪ್ಪ ಬಸಪ್ಪ ಜುಮ್ಲಾಪೂರ ಈತ ಶ್ರೀಗಂಧ ಖರೀಧಿಸಿ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ್ದರು. ಮೊದಲಿಗೆ ಹನಮಪ್ಪ ಜುಮ್ಲಾಪೂರ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಶ್ರೀಗಂಧದ ಮರಗಳ್ಳರು ವಣಗೇರಾ ಗ್ರಾಮದ ರಾಜಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿಯನ್ನು ವಕ್ಕಂದುರ್ಗದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಶ್ರೀಗಂಧ ಖರೀಧಿಸಿದ್ದ ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದ ಶಶಿಕುಮಾರ ರೂಢಗಿಯನ್ನು ಬಂಧಿಸಲಾಯಿತು. ಸದರಿ ಪ್ರಕರಣದಲ್ಲಿ ದೊಡ್ಡ ಜಾಲವೇ ಇದ್ದು ಇನ್ನಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಗಳಿವೆ.

ಈ ಭಾಗದಲ್ಲಿ ದೀರ್ಘಾವಧಿ ಬೆಳೆಯಾಗಿ ರೈತರು ಶ್ರೀಗಂಧ ಅಲ್ಲಲ್ಲಿ ಬೆಳೆಯುತ್ತಿದ್ದು, 15ರಿಂದ 20 ವರ್ಷ ಬೆಳೆಸಿದ ಶ್ರಮವನ್ನು ಶ್ರೀಗಂಧ ಕಳ್ಳರು ಕೆಲವೇ ನಿಮಿಷಗಳಲ್ಲಿ ಕಡಿದು ಮಾರಾಟಮಾಡುತ್ತಿದ್ದಾರೆ. ಅಲ್ಲದೆ ಶ್ರೀಗಂಧದ ಕೆಚ್ಚು ಮಾರಿ ಲಕ್ಷಾಂತರ ರೂ. ಗಳಿಸುವ ಧಂಧೆಗೆ ಇಳಿಯುವವರನ್ನು ಮಟ್ಟ ಹಾಕಲು, ಈ ಪ್ರಕರಣಗಳಲ್ಲಿ ಸಿಕ್ಕ ಆರೋಪಿಗಳ ಮೇಲೆ ಎಂ.ಓ.ಬಿ. ಪ್ರಕರಣ ದಾಖಲಿಸಲಾಗುವುದು.
– ರುದ್ರೇಶ ಉಜ್ಜನಕೊಪ್ಪ ಡಿವೈಎಸ್ಪಿ ಗಂಗಾವತಿ

ಇದನ್ನೂ ಓದಿ: Shivamogga: ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.