ಬೆಳಿಗ್ಗೆ ಶಾಲೆ ಹೋಗೋ ಹೊತ್ತಿಗಾದ್ರೂ ಒಂದು ಬಸ್ ಬಿಡ್ರಿ… ಸಂಜೆ ಬೇಕಾದ್ರು ನಡ್ಕೊಂಡು ಹೋಗ್ತೀವಿ..
ಅಧಿಕಾರಿಗಳಲ್ಲಿ ಮನವಿ ಮಾಡಿದ ಶಾಲಾ ವಿದ್ಯಾರ್ಥಿಗಳು
Team Udayavani, Nov 30, 2022, 12:10 PM IST
ಕುಷ್ಟಗಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗೆ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ… ಸಂಜೆ ಶಾಲೆ ಬಿಟ್ ಮೇಲೆ ಬೇಕಾದ್ರು ನಾವು ಕಾಲ್ನಡಿಗೆಯಲ್ಲೇ ನಮ್ಮೂರಿಗೆ ಹೋಗ್ತೀವಿ.. ಇದು ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ವಿದ್ಯಾರ್ಥಿಗಳ ಆಳಲು.
ವಣಗೇರಾ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಅಂತರದ ತಳವಗೇರಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಣಗೇರಾದಿಂದ ತಳವಗೇರಾ ಮಾರ್ಗವಾಗಿ ರಸ್ತೆ ಚನ್ನಾಗಿದ್ದರೂ ಈ ಒಳ ಮಾರ್ಗದಲ್ಲಿ ಒಂದೇ ಒಂದು ಬಸ್ ಸೇವೆ ಇಲ್ಲ.
ಬೆಳಗ್ಗೆ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವಣಗೇರಾ ವರೆಗೆ ಬಂದು ಮತ್ತೆ ಅದೇ ಮಾರ್ಗವಾಗಿ ಕುಷ್ಟಗಿಗೆ ಹೋಗುತ್ತದೆ. ಸದ್ಯ ಈ ಬಸ್ಸನ್ನೇ ವಣಗೇರಾ ಮಾರ್ಗವಾಗಿ ತಳವಗೇರಾ ಶಾಲೆಯ ತನಕ ಬಂದರೆ ಸಂಜೆ ಶಾಲೆ ಬಿಡುವ ಸಮಯಕ್ಕೆ ತಳವಗೇರಾ ದಿಂದ ಕುಷ್ಟಗಿಗೆ ಪ್ರಯಾಣಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದರು. ಆದರೆ ಈ ಮನವಿಗೆ ಘಟಕ ವ್ಯವಸ್ಥಾಪಕರು ಸ್ಪಂಧಿಸುತ್ತಿಲ್ಲ ಹೀಗಾಗಿ ಬೆಳಗ್ಗೆ ಶಾಲಾ ಆರಂಭದ ವೇಳೆಗೆ ಕುಷ್ಟಗಿ, ವಣಗೇರಾ ಬಸ್ ಸೇವೆಯನ್ನು ತಳವಗೇರಾಕ್ಕೆ ವಿಸ್ತರಿಸಿರಿ ಸಂಜೆ ಶಾಲೆ ಬಿಟ್ಟ ಬಳಿಕ ವಣಗೇರಾಕ್ಕೆ 5 ಕಿ.ಮೀ. ನಡೆದು ಬರುತ್ತೇವೆ ಎಂದು ಕೇಳಿಕೊಂಡರು ಘಟಕ ವ್ಯವಸ್ಥಾಪಕ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಫಲಿತಾಂಶ ಬರೋವರೆಗೂ ಕಾದು ನೋಡಿ…ಗುಜರಾತ್ ನಲ್ಲಿ AAP ಖಾತೆಯನ್ನೇ ತೆರೆಯಲ್ಲ: ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.