Basic amenities ಕೊರತೆ: ಪಿಡಿಒಗಳ ವಿರುದ್ಧ ಸಚಿವ ತಂಗಡಗಿ ಕಿಡಿ
ಶಿಸ್ತು ಕ್ರಮ...ಅಮಾನತಿಗೆ ಸೂಚನೆ...
Team Udayavani, Nov 6, 2023, 5:58 PM IST
ಗಂಗಾವತಿ: ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು ಸಭೆ,ಸಮಾರಂಭಗಳಿಗೆ ಮೀಸಲಾಗಿ ಜನರ ಸಮಸ್ಯೆ ಮರೆತಿದ್ದಾರೆ.ಇದು ಸರಿಯಾದ ಕಾರ್ಯ ವೈಖರಿಯಲ್ಲ.ಅಭಿವೃದ್ಧಿ ವೇಗ ಹೆಚ್ಚಾಗದಿದ್ದರೆ ಶಿಸ್ತು ಕ್ರಮ ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.
ತಾ.ಪಂ.ಸಭಾಂಗಣ ಮಂಥನದಲ್ಲಿ ಗ್ರಾಪಂ. ಪಿಡಿಒಗಳ ಸಭೆಯಲ್ಲಿ ಮಾತನಾಡಿ, ”ಪ್ರಮುಖವಾಗಿ ಹುಳ್ಕಿಹಾಳ, ಚಳ್ಳೂರು, ಯರಡೋಣಾ, ಗುಂಡೂರು, ಬೆನ್ನೂರು, ಕಲ್ಡುಡಿ,ಹೊಸಕೇರಿ, ಚಿಕ್ಕಮಾದಿನಾಳ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಪ್ರಮುಖವಾಗಿ ಕುಡಿಯುವ ನೀರು, ರಸ್ತೆ. ಚರಂಡಿಗಳು, ಹಕ್ಕು ಪತ್ರಗಳ ವಿತರಣೆ, 9/1 ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಗ್ರಾಮದ ಜನರಿಗೆ ಸತಾಯಿಸುತ್ತಿರುವದರ ಬಗ್ಗೆ ವರದಿ ಬಂದಿದೆ. ಕೂಡಲೆ ಅಧಿಕಾರಿಗಳು ಗ್ರಾಮದ ಜನರ ಬಗ್ಗೆ ಸ್ಪಂದನೆ ನೀಡದಿದ್ದರೆ ನಿರ್ಧಾಕ್ಷಿಣ್ಯವಾಗಿ ಅಮಾನತು ಗೊಳಿಸಲು ಶಿಫಾರಸ್ಸು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಪಿಡಿಒಗಳಿಗೆ ಸರಕಾರ ಸಂಬಳ ಕೊಡುತ್ತದೆ. ಸರಕಾರ ಮತ್ತು ಗ್ರಾಮದ ಜನರ ರುಣ ತೀರಿಸುವ ಕೆಲಸ ಮಾಡ ಬೇಕೆಂದು ಸೂಚಿಸಿದ ಅವರು ಗ್ರಾಮಗಳ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ತಮಗೆ ದಿನ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಪಿಡಿಒಗಳು ಕಾಲಹರಣ ಮಾಡುತ್ತಿರುವದು ಸರಿಯಲ್ಲ ಎಂದರು.
ಒಬ್ಬ ಪಿಡಿಒ ಗಳಿಗೆ ಎರಡು ಗ್ರಾಮ ಪಂಚಾಯಿತಿ ಅದಿಕಾರ ನೀಡಿದ್ದರಿಂದ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ ಕೂಡಲೆ ಇವರಿಗೆ ಒಂದೆ ಪಂಚಾಯಿತಿ ಅಧಿಕಾರಿ ಕೊಡಿರಿ ಎಂದು ಸಭೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾಯ್ರನಿರ್ವಹಕಾಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದಲ್ಲಿರುವ ಪಿಡಿಓಗಳು ಕೇಂದ್ರಸ್ಥಾನದಲ್ಲಿ ವಾಸವಿರುವದಿಲ್ಲ. ಇದರಿಂದ ಗ್ರಾಮಸ್ಥರಿಗೆ ಸಂಪರ್ಕಕ್ಕೆ ಬಾರದಂತಾಗಿದೆ. ಕೂಡಲೆ ಸಿಇಒ ಅವರು ಕೇಂದ್ರಸ್ಥಾನದಲ್ಲಿ ವಾಸವಾಗಿರುವಂತೆ ಆದೇಶ ನೀಡಬೇಕೆಂದರು.
ಬೈಂದೂರು ಗ್ರಾಮ ಮಾದರಿ
ಕಿತ್ತೂರು ತಾಲೂಕಿನ ಬೈಂದೂರು ಗ್ರಾಮ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮವನ್ನು ಎಲ್ಲಾ ಪಿಡಿಒ ಗಳು ವೀಕ್ಷಣೆ ಮಾಡಿದರೆ ನಿಮಗೆ ಅಭಿವೃದ್ದಿಯ ಅರಿವು ಆಗುತ್ತದೆ. ಬೈಂದೂರು ಗ್ರಾಮದಲ್ಲಿ ಮಳೆಯಾದರೆ ನೀರು ನಿಲ್ಲುವದಿಲ್ಲ ಉತ್ತಮ ಚರಂಡಿಗಳು, ಶೌಚಾಲಯ, ಸಿಸಿ ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಹೊಂದಿವೆ ಕಾರಣ ಸಿಇಒ ಅವರು ಈ ಭಾಗದ ಪಿಡಿಓಗಳನ್ನು ಪ್ರವಾಸಕ್ಕೆ ಕಳಿಸುವಂತೆ ಸೂಚಿಸಿದರು.
ಪಿಡಿಒ ಅಮಾನತು
ಕ್ಷೇತ್ರದ ಶಾಸಕರ ಗಮನಕ್ಕೆ ತರದೆ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿದ ಪಿಡಿಒ ಸೂರ್ಯಕುಮಾರಿ ಅವರನ್ನು ಕೂಡಲೆ ಅಮಾನತು ಗೊಳಿಸ ಬೇಕೆಂದು ಸಭೆಯಲ್ಲಿದ್ದ ಸಿಇಒ ಅವರಿಗೆ ಸೂಚನೆ ನೀಡಿದರು. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಮತ್ತು ಕಾರ್ಯಕ್ರಮಗಳ ಬಗ್ಗೆ ಸ್ಥಳೀಯ ಶಾಸಕರನ್ನು ಅಹ್ವಾನಿಸುವ ಶಿಷ್ಠಾಚಾರ ಇದೆ. ಆದರೆ ಪಿಡಿಒ ಯಾರ ಮಾತು ಕೇಳಿ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಶಿಷ್ಚಾಚಾರ ಉಲ್ಲಂಘಿಸಿದ್ದಾರೆ ಕೂಡಲೆ ಅನಮಾತು ಗೊಳಿಸ ಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಸಿಇಒ ರಾಹೂಲ್ ರತ್ನಂ ಪಾಂಡೆ, ಯೋಜನಾಧಿಕಾರಿ ಕೃಷ್ಣಮೂರ್ತಿ, ಇಒ ಲಕ್ಷ್ಮೀದೇವಿ, ಕನಕಗಿರಿ ಇಒ ಚಂದ್ರಶೇಖರ ಕನಕಗಿರಿ, ಕಾರಟಗಿ ಇಒ ನರಸಪ್ಪ, ಜಿಲ್ಲಾ ಪಂಚಾಯಿತ್ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.