ಸಿಲಿಂಡರ್ ಕೊರತೆ; ಕಟ್ಟಿಗೆ ಒಲೆ ಮೇಲೆ ಬಿಸಿಯೂಟ
Team Udayavani, Sep 8, 2019, 11:26 AM IST
ತಾವರಗೇರಾ: ಬಸವಣ್ಣನ ಕ್ಯಾಂಪ್ ಸಹಿಪ್ರಾ ಶಾಲೆಯಲ್ಲಿ ಕಟ್ಟಿಗೆಯಂದ ಬಿಸಿಯೂಟ ತಯಾರಿಸಲಾಗುತ್ತಿದೆ.
ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಒಂದು ತಿಂಗಳಿನಿಂದ ಸಿಲಿಂಡರ್ ಪೂರೈಕೆಯಾಗದ ಕಾರಣ ಕಟ್ಟಿಗೆ ಒಲೆ ಮೇಲೆ ಬಿಸಿಯೂಟ ತಯಾರಿಸಲಾಗುತ್ತಿದೆ. ಸಿಲಿಂಡರ್ ದೊರೆಯದ ಕಾರಣ ಶಾಲೆಗಳಲ್ಲಿ ಅನಿವಾರ್ಯವಾಗಿ ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡಲಾಗುತ್ತಿದೆ.
ತಾಲೂಕಾದ್ಯಂತ ಸರಕಾರಿ ಶಾಲೆಗಳಿಗೆ ಕುಷ್ಟಗಿ ಭಾರತ್ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ನೀಡುತ್ತಿದ್ದಾರೆ. ಆದರೆ ಒಂದು ತಿಂಗಳಿನಿಂದ ಕೆಲ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಸಿಲಿಂಡರ್ ವಿತರಿಸದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿಗಳಿಗೆ ಕಟ್ಟಿಗೆ ಒಲೆ ಮೇಲೆ ಅಡುಗೆ ತಯಾರಿಸಿ ಬಿಸಿಯೂಟ ಉಣಬಡಿಸಲಾಗುತ್ತಿದೆ.
ಬಿಸಿಯೂಟ ತಯಾರಿಸಲು ಬೇಕಾಗುವ ಸಿಲಿಂಡರ್‌ಗಳಿಗೆ ನೆರೆ ಹಾವಳಿ ಬಿಸಿ ತಟ್ಟಿದೆ. ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ಪ್ರತಿ ತಿಂಗಳಿಗೊಮ್ಮೆ ಆಯಾ ಶಾಲೆಗಳಿಗೆ ಕುಷ್ಟಗಿ ಭಾರತ್ ಗ್ಯಾಸ್ ಏಜೆನ್ಸಿಯವರು ಬಂದು ತುಂಬಿದ ಸಿಲಿಂಡರ್‌ಗಳನ್ನು ಕೊಟ್ಟು ಶಾಲೆಗಳಿಲ್ಲಿರುವ ಖಾಲಿ ಸಿಲಿಂಡರ್‌ಗಳನ್ನು ತಮ್ಮದೇ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ನೆರೆ ಹಾವಳಿಯಿಂದ ಕುಷ್ಟಗಿ ಭಾರತ್ ಗ್ಯಾಸ್ ಏಜೆನ್ಸಿಗೆ ಮಂಗಳೂರಿನಿಂದ ರಿಫೈನರಿ ಸ್ಟೇಶನ್‌ನಿಂದ ಸಿಲಿಂಡರ್ ಸರಬರಾಜು ಆಗುವಲ್ಲಿ ವ್ಯತ್ಯಯಾಗುತ್ತಿದ್ದು. ಇದರಿಂದ ಶಾಲೆಗಳಲ್ಲಿ ಕಟ್ಟಿಗೆಯ ಮೇಲೆ ಬಿಸಿಯೂಟ ಬೇಯುತ್ತಿದೆ.
ದೂರದಲ್ಲಿದೆ ಏಜೆನ್ಸಿ: ಹೋಬಳಿ ವ್ಯಾಪ್ತಿಯಲ್ಲಿರುವ ಗಡಿ ಗ್ರಾಮಗಳ ಶಾಲೆಗಳಿಗೆ ಕುಷ್ಟಗಿ ದೂರವಾಗುತ್ತಿದ್ದು. ಪ್ರತಿ ಸಲ ಕುಷ್ಟಗಿಯವರು ಸಿಲಿಂಡರ್ ಬಂದು ಶಾಲೆಗಳಿಗೆ ತಲುಪಿದ ನಂತರ ಒಂದು ಕಿ.ಮೀ.ಗೆ ಒಂದು ರೂಪಾಯಿ ಆರವತ್ತು ಪೈಸೆ ಚಾರ್ಜ್ ಮಾಡುತ್ತಾರೆ. ಇದರಿಂದ ಆರ್ಥಿಕ ಹೊರೆ ಆಗುವ ಸಾಧ್ಯತೆ ಇದೆ.
ತಾವರಗೇರಾದಲ್ಲಿರುವ ಇಂಡಿಯನ್ ಗ್ಯಾಸ್ ಏಜೆನ್ಸಿಯ ಸಮೀಪದಲ್ಲಿದೆ. ಈಗಾಗಿ ಕುಷ್ಟಗಿಯಿಂದ ತಾವರಗೇರಾ ಗ್ಯಾಸ್ ಅಂಗಡಿಗೆ ವರ್ಗಾವಣೆ ಮಾಡಿದರೆ ಸೂಕ್ತ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ಅಭಿಪ್ರಾಯಪಟ್ಟರು.
ಬಯಲಲ್ಲಿ ಬಿಸಿಯೂಟ ತಯಾರಿಕೆ: ಸಿಲಿಂಡರ್ ಕೊರತೆಯಿಂದ ಕಟ್ಟಿಗೆ ಮೇಲೆ ಬಿಸಿಯೂಟ ತಯಾರಿಸಲು ಶಾಲೆಯ ಆವರಣದಲ್ಲಿ ಒಲೆ ಹೂಡಿ. ಬಯಲಲ್ಲಿ ಅಡುಗೆ ತಯಾರಿಸುವುದರಿಂದ ಅಡುಗೆಯಲ್ಲಿ ದೂಳು, ಮಣ್ಣು ಬೀಳುವ ಸಾಧ್ಯತೆ ಇದ್ದು. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರಲಿದೆ ಎಂದು ಪಾಲಕರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.