ಮುಂಗಾರು ಮಾಯ: ಬತ್ತಿದ ತುಂಗಭದ್ರಾ
•ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ•ನದಿ ಪಾತ್ರದ ಗ್ರಾಮಗಳಲ್ಲಿ ಹಾಹಾಕಾರ
Team Udayavani, Jul 24, 2019, 12:30 PM IST
ಗಂಗಾವತಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿದ್ದ ನೀರು ಬತ್ತಿ ಹೋಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಕೊರತೆಯುಂಟಾಗಿದೆ. ನದಿಯಲ್ಲಿ ನೀರು ಬತ್ತಿರುವುದರಿಂದ ಮೀನುಗಳು ಸಾವನ್ನಪ್ಪಿವೆ. ನದಿ ಪಾತ್ರದಲ್ಲಿರುವ ರೈತರು ಭತ್ತ ನಾಟಿ ಮಾಡಲು ಹಾಕಿದ್ದ ಸಸಿ(ಭತ್ತದ)ಮಡಿಗಳು ಸಂಪೂರ್ಣ ಒಣಗಿದ್ದು, ರೈತರು ಸಾವಿರಾರು ರೂ. ನಷ್ಟಕ್ಕೊಳಗಾಗಿದ್ದಾರೆ.
ನದಿ ಪಾತ್ರದ ಗ್ರಾಮಗಳಾದ ಉಳೇನೂರು ಬೆನ್ನೂರು, ಢಣಾಪೂರ, ಬೆನ್ನೂರು, ಕಕ್ಕರಗೋಳ, ಶಾಲಿಗನೂರು, ಜಮಾಪೂರ ಭಾಗದಲ್ಲಿರುವ ರೈತರ ಭೂಮಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಆಗುತ್ತಿದ್ದರೂ ಅನಧಿಕೃತ ಅಚ್ಚುಕಟ್ಟು ಪ್ರದೇಶ ಹೆಚ್ಚಾಗಿರುವುದರಿಂದ ಕೊನೆ ಭಾಗಕ್ಕೆ ಕಾಲುವೆ ನೀರು ತಲುಪುತ್ತಿಲ್ಲ. ರೈತರು ನದಿ ಮೂಲಕ ನೀರನ್ನು ಗದ್ದೆಗೆ ಹರಿಸಿ ಭತ್ತ ಬೆಳೆಯಲಾಗುತ್ತಿದ್ದು, ಕಳೆದ ವರ್ಷದಿಂದ ಮಳೆಯ ಕೊರತೆಯಿಂದಾಗಿ ನದಿಯಲ್ಲಿ ನೀರು ಇಲ್ಲದಂತಾಗಿದೆ. ನದಿಯಲ್ಲಿ ನೀರಿನ ಕೊರತೆಯಿಂದ ನೂರಾರು ಮೀನುಗಳು ಸಾವನಪ್ಪಿವೆ. ಸುತ್ತಲಿನ ಗ್ರಾಮಗಳ ಜನರು ಮೀನು ಹಿಡಿದು ಮಾರುತ್ತಿದ್ದಾರೆ. ನದಿ ಪಾತ್ರದ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ನದಿ ಬತ್ತಿದ್ದರಿಂದ ಕುಡಿಯುವ ನೀರಿಗೂ ತಾತ್ವರವಾಗಿದೆ. ಬೋರ್‌ವೆಲ್ಗಳೂ ಬತ್ತಿರುವುದರಿಂದ ಜನರಿಗೆ ದಿಕ್ಕು ತೋಚದಂತಾಗಿದೆ.
ರಾಯಚೂರಿಗೆ ಮಾತ್ರ ನೀರು: ಕುಡಿಯುವ ನೀರು ಇಲ್ಲದೇ ತೊಂದರೆಯಾಗಿರುವ ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ 1.5 ಟಿಎಂಸಿ ಅಡಿ ನೀರನ್ನು ಹರಿಸಲಾಗುತ್ತಿದೆ. ಜು. 31ರ ವರೆಗೆ ನೀರನ್ನು ಹರಿಸಲು ಕಲಬುರ್ಗಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಯಚೂರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಎಡದಂಡೆ ಕಾಲುವೆಯುದ್ಧಕ್ಕೂ ಕೊಪ್ಪಳ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೇರಿದ್ದಾರೆ. ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲೂ ಮಳೆ ಕೊರತೆಯಿದ್ದು, ಇಲ್ಲಿಯೂ ಕುಡಿಯುವ ನೀರಿನ ಅಭಾವವುಂಟಾಗಿದೆ. ನದಿಯ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ನದಿ ಸಂಪೂರ್ಣ ಬತ್ತಿದೆ. ಸ್ವಲ್ಪ ಪ್ರಮಾಣದ ನೀರನ್ನು ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದ ಕೆರೆ, ಕೃಷಿ ಹೊಂಡ ಹಾಗೂ ಎಡದಂಡೆ ಮತ್ತು ಉಪಕಾಲುವೆಗಳ ಮೂಲಕ ನದಿಗೆ ಹರಿಸಬೇಕು. ಜಲಾಶಯದಲ್ಲಿ ಸಂಗ್ರಹವಾಗಿರುವ ಸುಮಾರು 18 ಟಿಎಂಸಿ ಅಡಿ ನೀರಿನಲ್ಲಿ ಕೊಪ್ಪಳ ಜಿಲ್ಲೆಯ ತಾಲೂಕುಗಳಿಗೆ ಕುಡಿಯಲು ಹಾಗೂ ಇಲ್ಲಿರುವ ಕೆರೆ, ಕೃಷಿಹೊಂಡ ಭರ್ತಿ ಮಾಡುವ ಮೂಲಕ ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೈನುಗಾರಿಕೆ ಮೂಲಕ ರೈತರು ಉತ್ತಮ ಹಣ ಪಡೆಯುತ್ತಿದ್ದು, ನೀರಿನ ಕೊರತೆಯಿಂದ ಹೈನುಗಾರಿಕೆ ಲಾಭ ಕಡಿಮೆಯಾಗಿದೆ. ಕಾಲುವೆ ಮೂಲಕ ಕುಡಿಯುವ ನೀರನ್ನು ಹರಿಸಿದರೆ ಹೈನುಗಾರಿಕೆ ಮಾಡುವವರಿಗೂ ಅನುಕೂಲ ಮಾಡಿದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.