ಬೆಳೆಗೆ ತೇವಾಂಶ ಕೊರತೆ: ಆಕಾಶದತ್ತ ಅನ್ನದಾತರ ಚಿತ್ತ
ಹೆಸರು ಬೆಳೆಗೆ ತೇವಾಂಶದ ಕೊರತೆ! ; ಒಂದು ತಿಂಗಳಿಂದ ಮಳೆಯ ಸುಳಿವಿಲ್ಲ
Team Udayavani, Jun 20, 2022, 4:19 PM IST
ದೋಟಿಹಾಳ: ಗ್ರಾಮದ ಸುತ್ತಮುತ್ತ ರೈತರು ನಿಗದಿತ ಅವಧಿಗಿಂತ ಮೊದಲೇ ಬಿತ್ತನೆ ಮಾಡಿರುವುದು ಹೆಸರು ಬೆಳೆ ಸದ್ಯ ತೇವಾಂಶದ ಕೊರತೆ ಎದುರಿಸುತ್ತಿದ್ದು, ರೈತ ತಲೆ ಮೇಲೆ ಕೈಹೊತ್ತು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ.
ಮಳೆ ಇಲ್ಲದೇ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಶುರುವಾಗಿದೆ. ಈ ಭಾರಿ ಕೃತ್ತಿಕಾ ಮಳೆ ಉತ್ತಮವಾಗಿ ಸುರಿಯುವ ಮೂಲಕ ರೈತರಲ್ಲಿ ಆಶಾವಾದ ಚಿಗುರಲು ಕಾರಣವಾಯಿತು. ಈ ಮಳೆ ಮುಂಗಾರು ಬಿತ್ತನೆಗೆ ಅನೂಕಲವಾಗುತ್ತದೆ ಎಂದು ಈ ಭಾಗದ ಸುಮಾರು 70-80ರಷ್ಟು ರೈತರು ಹೆಸರು ಬೆಳೆಯನ್ನು ನಿಗದಿತ ಅವಧಿಗಿಂತ ಮೊದಲೇ ಬಿತ್ತನೆ ಮಾಡಿದರು. ಆದರೆ ಇಂದು ಸಕಾಲಕ್ಕೆ ಮಳೆ ಬರದೇ ಇರುವುದರಿಂದ ಮೂಳಕೆ ಒಡೆದ ಹೆಸರು ತೇವಾಂಶ ಕೊರತೆಯಿಂದ ಒಣಗುತ್ತಿದೆ.
ಭರಣಿ, ಕೃತಿಕಾ ಮಳೆಗಳು ಉತ್ತಮವಾಗಿ ಸಿರಿದಿರುವುದರಿಂದ ಮುಂಗಾರು ಬಿತ್ತನೆಗೆ ಭೂಮಿ ಹದಮಾಡಿ. ಉತ್ಸಾಹದಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಆದರೆ ಈಗ ರೋಹಿಣಿ ಮತ್ತು ಮೃಗಶಿರಾ ಮಳೆಯಾಗದ ಕಾರಣ ರೈತರು ಚಿಂತೆಗೆ ಕಾರಣವಾಗಿದೆ.
ನಿಗದಿತ ಅವಧಿಗಿಂತ ಮೊದಲೆ ಬಿತ್ತನೆ ಮಾಡಬೇಡಿ ಎಂದು ಕೃಷಿ ಇಲಾಖೆ ಸೂಚನೆ ನೀಡಿತ್ತು. ಬಿತ್ತನೆಗೆ ನಿಗದಿಯಾಗಿರುವ ಅವಗಿಂತ ಮೊದಲೇ ಮಳೆಯಾದಾಗ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲೇ ಕಟಾವಿಗೆ ಬಂದು ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ಮಾಡಬಹುದು ಎಂಬುದು ರೈತರ ಲೆಕ್ಕಾಚಾರ. ತಾಲೂಕಿನ ಅಲಲ್ಲಿ ಭರಣಿ ಮತ್ತು ಕೃತಿಕಾ ಮಳೆ ಸುರಿದಿತ್ತು. ಬಿತ್ತನೆಗೆ ಅಗತ್ಯ ಇದ್ದಷ್ಟು ಹಸಿಯಾಗಿದ್ದಕ್ಕೆ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ 20-25 ದಿನದ ಬೆಳೆ ಇದೆ. ಇದರ ಅವಧಿ 75-80 ದಿನಗಳ ಮಾತ್ರ, ಹೀಗಾಗಿ ಶೇ. 75ರಷ್ಟು ಬೆಳೆ ಕೈಕೊಟ್ಟಿದೆ ಎಂದು ರೈತರು ತಿಳಿಸಿದರು.
ತಿಂಗಳ ಹಿಂದೇ ಕೃತಿಕಾ ಮಳೆ ಉತ್ತವಾಗಿ ಸುರಿದ ಕಾರಣ ಈ ಭಾಗದ ಶೇ. 80ರಷ್ಟು ರೈತರು ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿದ ಮೇಲೆ ಮಳೆಯಾಗದ ಕಾರಣ ಬೆಳೆ ಒಣಗುತ್ತಿವೆ. ಬಿತ್ತನೆಯಾಗಿರುವ ಹೆಸರು ಈಗಾಗಲೇ 20-25 ದಿನದ ಬೆಳೆ ಇದೆ. ಶೇ. 75ರಷ್ಟು ಬೆಳೆ ಕೈಕೊಟ್ಟಿದೆ. ಕಳೆದ 4 ವಾರಗಳಿಂದ ಮಳೆಯ ಸುಳಿವಿಲ್ಲ. ವಾತಾವರಣದಲ್ಲಿ ಬಿಸಿಲಿನ ಜಳ ಹೆಚ್ಚಿಗಿದೆ. –ಶರಣಪ್ಪ ಈಶಪ್ಪ ಗೌಡರ, ಮಾಟೂರು ಗ್ರಾಮದ ರೈತ
ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.