ಸಾಲ ಮಾಡಿ ಶೌಚಾಲಯ ನಿರ್ಮಿಸಿಕೊಂಡ ಮಹಿಳೆ!
Team Udayavani, Sep 18, 2017, 7:10 AM IST
ಕುಷ್ಟಗಿ: ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ರದ್ದಾಗುವ ಭೀತಿಯಿಂದ ತಾಲೂಕಿನ ಗುಮಗೇರಾದ ರತ್ನಮ್ಮ ಚಂದ್ರಗಿರಿ ಎಂಬುವರು ಸಾಲ ಮಾಡಿ, ಯಾರ ನೆರವೂ ಇಲ್ಲದೇ ಶೌಚಾಲಯ ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆ.
ಸ್ವತ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಕೊಪ್ಪಳ ಜಿಪಂ ಬಹಿರ್ದೆಸೆ ಮುಕ್ತವಾಗಿಸಲು ಸಾರ್ವಜನಿಕರನ್ನು ಮನವೊಲಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಜಾಗೆ ತೋರಿಸಿದರೆ ಅಲ್ಲಿಯೇ ಶಾಚಾಲಯ ನಿರ್ಮಿಸಲಾಗುತ್ತಿದೆ. ಹೀಗಿರುವಾಗ ಗುಮಗೇರಾ ಮಹಿಳೆ ಸ್ವಂತ ಹಣದಲ್ಲೇ ಶೌಚಾಲಯ ನಿರ್ಮಿಸಿಕೊಂಡಿರುವುದು ಹುಬ್ಬೇರಿಸುವಂತೆ ಮಾಡಿದೆ.
ಶೌಚಾಲಯ ನಿರ್ಮಿಸಿಕೊಳ್ಳುವುದು ರತ್ಮಮ್ಮಳದ್ದು ಬಹುದಿನದ ಕನಸು. ಕಡು ಬಡತನದಿಂದ ಅದು ಸಾಕಾರಗೊಂಡಿರಲಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, 10 ಸಾವಿರ ರೂ. ಸಾಲ ಪಡೆದು ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ನೆಲಗಟ್ಟಿಯಾಗಿದ್ದರಿಂದ ಶೌಚಾಲಯ ಫಿಟ್ ಅಗೆಯಲು ಕೆಲಸಗಾರರು ಹಿಂಜರಿದಾಗ ತಾನೇ ಗುದ್ದಲಿ, ಹಾರೆ, ಸಲಿಕೆಯೊಂದಿಗೆ ಅಗೆದು ರಿಂಗ್ ಸಹ ಇಳಿಸಿದ್ದಾರೆ. ಕೂಲಿಯಾಳಾಗಿ ದುಡಿದ ಅನುಭವದ ಹಿನ್ನೆಲೆಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿ ಪ್ಲಾಸ್ಟರ್ ಕೆಲಸ ನಿರ್ವಹಿಸಿ ಶೌಚಾಲಯ ಪೂರ್ತಿಗೊಳಿಸಿದ್ದಾರೆ!
ರತ್ಮಮ್ಮಗೆ ಶ್ರವಣ ದೋಷವಿದ್ದು, ಕುಟುಂಬ ನಿರ್ವಹಣೆಯ ಹೊಣೆ ಅವರ ಹೆಗಲಿಗಿದೆ. ವೃದ್ಧ ತಾಯಿಯ ಆರೈಕೆ ಹೆಗಲಿಗಿದೆ. ಪತಿ ಬಸಪ್ಪ ಸಂಸಾರ ಜೀವನದಿಂದ ದೂರವಾಗಿದ್ದು, ಸಹೋದರರು ಪಿತ್ರಾರ್ಜಿತ ಆಸ್ತಿಯನ್ನೂ ನೀಡದೆ ಕೈ ಕೊಟ್ಟಿದ್ದಾರೆ. ಇದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ಕೂಲಿ ಕೆಲಸ, ಮನೆಯಲ್ಲಿ ಹೊಲಿಗೆ ಯಂತ್ರದ ಜೀವನಾಧಾರವಾಗಿಸಿಕೊಂಡು, ಗುಮಗೇರಾದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಇಬ್ಬರು ಪುತ್ರರು, ಪುತ್ರಿಯೊಂದಿಗೆ ರತ್ನಮ್ಮ ವಾಸವಿದ್ದಾರೆ.
ಗುಮಗೇರಾ ರತ್ಮಮ್ಮ ಕಷ್ಟಕರ ಪರಿಸ್ಥಿತಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆ. 2-3 ದಿನಗಳಲ್ಲಿ ಶೌಚಾಲಯದ ಸಹಾಯಧನ ಬಿಡುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸೋಮವಾರ ಗುಮಗೇರಾಕ್ಕೆ ಭೇಟಿ ನೀಡಿ ರತ್ಮಮ್ಮ ನಿರ್ಮಿಸಿಕೊಂಡಿರುವ ಶೌಚಾಲಯ ಪರಿಶೀಲಿಸುತ್ತೇನೆ.
–ಡಾ.ಡಿ.ಮೋಹನ್, ತಾಪಂ ಇಒ
ಶೌಚಾಲಯ ಹೇಗೋ ನಿರ್ಮಿಸಿಕೊಂಡೆ. ಮನೆಗೆ ಸಹಾಯಧನ ನೀಡಿದರೆ ಅದನ್ನೂ ನಾನೇ ನಿರ್ಮಿಸಿಕೊಳ್ಳುತ್ತೇನೆ. ಬಡತನ ಇದ್ದರೂ ಶೌಚಾಲಯ ಇರಬೇಕು. ಆಗಲೇ ಸ್ವತ್ಛ ಭಾರತ ಕನಸು ನನಸಾಗುತ್ತದೆ.
-ರತ್ಮಮ್ಮ ಚಂದ್ರಗಿರಿ , ಶೌಚಾಲಯ ನಿರ್ಮಿಸಿಕೊಂಡ ಮಹಿಳೆ
– ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.