ಸ್ಟವ್ ಗೆ ಗ್ಯಾಸ್ ಕನೆಕ್ಷನ್ ವೇಳೆ ಸಿಲಿಂಡರ್ ಸೋರಿಕೆ; ಮನೆಗೆ ಬೆಂಕಿ
15 ತಿಂಗಳ ಮಗು ಸೇರಿ ಮನೆ ಮಂದಿಯೆಲ್ಲ ಪಾರು... ಓರ್ವನಿಗೆ ಸುಟ್ಟ ಗಾಯ
Team Udayavani, Feb 10, 2024, 7:52 PM IST
ಕುಷ್ಟಗಿ: ಹೊಸ ಗ್ಯಾಸ್ ಕನೆಕ್ಷನ್ ವೇಳೆ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದು ಮನೆಗೆ ಬೆಂಕಿ ವ್ಯಾಪಿಸಿದ ಘಟನೆ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.ಅದೃಷ್ಟವಶಾತ್ 15 ತಿಂಗಳ ಮಗುವಿನೊಂದಿಗೆ ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಕಾಳಪ್ಪ ಕಮ್ಮಾರ ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಕುಷ್ಟಗಿ ಗಜೇಂದ್ರಗಡ ರಸ್ತೆಯಲ್ಲಿರುವ ವಾಣಿಜ್ಯ ಬಳಕೆಯ ಟೋಟಲ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಂಡು, ಗ್ಯಾಸ್ ಸ್ಟವ್ ಗೆ ಕನೆಕ್ಷನ್ ಮಾಡಲಾಗುತ್ತಿತ್ತು. ಈ ವೇಳೆ ಧಗ್ಗನೆ ಬೆಂಕಿ ವ್ಯಾಪಿದ್ದು, ಎಲ್ ಪಿ ಜಿ ಗ್ಯಾಸ್ ಸಂಪರ್ಕಿಸಲು ಬಂದಿದ್ದ ಸಿಬಂದಿ ಅಮರೇಶಗೆ ಮುಖಕ್ಕೆ ಸುಟ್ಟಗಾಯವಾಗಿದೆ. ಆ ಸಂಧರ್ಭದಲ್ಲಿ ಮನೆಯ ಸದಸ್ಯರು 15 ತಿಂಗಳ ಮಗುವಿನೊಂದಿಗೆ ಹೊರಗೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಗ್ಯಾಸ್ ಬೆಂಕಿಯ ಅವಘಡದಿಂದ ಮನೆಯಲ್ಲಿನ ವಸ್ತುಗಳು ಸುಟ್ಟಿದ್ದು ಅಪಾರ ಹಾನಿ ಸಂಭವಿಸಿದೆ. ನಂತರ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸುವ ತುರ್ತು ಕಾರ್ಯಾಚರಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.