ಗಂಗಾವತಿ: ಆನೆಗೊಂದಿ ಬೆಟ್ಟದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ!
Team Udayavani, Oct 16, 2020, 11:23 AM IST
ಗಂಗಾವತಿ: ತಾಲೂಕಿನ ಆನೆಗೊಂದಿ ಬೆಟ್ಟಪ್ರದೇಶದ ಗ್ರಾಮಗಳಲ್ಲಿ ಚಿರತೆ ಹಾಗೂ ಕರಡಿ ಹಾವಳಿ ಮುಂದುವರಿದ್ದು ಗುರುವಾರ ಸಂಜೆ ಆನೆಗೊಂದಿ ತಳವಾರ ಘಟ್ಟ ಗುಡ್ಡದ ಗವಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭಯವುಂಟು ಮಾಡಿದೆ.
ಕಳೆದ ಒಂದು ವಾರದಿಂದ ಆನೆಗೊಂದಿ ಸಾಣಾಪೂರ ಮಲ್ಲಾಪೂರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಹತ್ತಿರ ಇರುವ ಬೆಟ್ಟ ಗುಡ್ಡ ಪ್ರದೇಶದಲ್ಲಿ ಚಿರತ ಮತ್ತು ಕರಡಿಗಳು ನಿತ್ಯವೂ ಪ್ರತ್ಯಕ್ಷವಾಗುತ್ತಿದ್ದು ಇದರಿಂದ ಜನರು ಗ್ರಾಮ ಬಿಟ್ಟು ಹೊರಗೆ ಬಾರದ ಸ್ಥಿತಿಯುಂಟಾಗಿದೆ. ಜಂಗ್ಲಿ ರಂಗಾಪೂರ ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ಕರಡಿಗಳು ಆಗಮಿಸಿ ಬಾಗಿಲು ಮುರಿದು ಒಳಗಿದ್ದ ದೀಪದ ಎಣ್ಣೆ ಕುಡಿದು ಹೋಗಿವೆ. ಆದರೆ ಜನ ಜಾನುವಾರುಗಳಿಗೆ ತೊಂದರೆ ಕೊಟ್ಟಿಲ್ಲ. ಆನೆಗೊಂದಿ ತುಂಗಭದ್ರಾ ನದಿ ಹತ್ತಿರ ತಳವಾರ ಘಟ್ಟ ಬೆಟ್ಟದ ಗುಹೆಯಲ್ಲಿ ಚಿರತೆಯೊಂದು ಎರಡು ದಿನಗಳಿಂದ ವಾಸವಾಗಿದ್ದು ಅಗಾಗ ಗುಹೆಯಿಂದ ಹೊರಗೆ ಆಗಮಿಸಿ ಸಮೀಪದ ಕಲ್ಲು ಬಂಡೆಯ ಮೇಲೆ ಮಲಗುತ್ತಿದೆ.
ತಳವಾರ ಘಟ್ಟ ಬೆಟ್ಟದ ಗುಹೆ ಹತ್ತಿರ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.
ವಾಲಿಕೀಲ್ಲಾ ಆದಿಶಕ್ತಿ ದೇಗುಲದ ಬಳಿ ಗುರುವಾರ ಬೆಳಗಿನ ಜಾವ ಅರಣ್ಯ ಇಲಾಖೆಯ ಬೋನಿಗೆ 04 ವರ್ಷದ ಚಿರತೆ ಬಿದ್ದಿತ್ತು. ಈ ಮಧ್ಯೆ ತಳವಾರ ಘಟ್ಟ ಬೆಟ್ಟದಲ್ಲಿ ಚಿರತೆ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.