ಮೌಲ್ಯಮಾಪನಕ್ಕೆ ಉಪನ್ಯಾಸಕರು ಗೈರು?
Team Udayavani, May 29, 2020, 6:35 AM IST
ಕೊಪ್ಪಳ: ರಾಜ್ಯಾದ್ಯಂತ ಮೇ 29ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಹಲವು ಉಪನ್ಯಾಸಕರು ಗೈರು ಹಾಜರಾಗುತ್ತಿರುವ ಮಾಹಿತಿ ಕೇಳಿ ಬಂದಿದೆ. ಜಿಲ್ಲೆಯಿಂದ 52 ಉಪನ್ಯಾಸಕರು ನೇಮಕವಾಗಿದ್ದಾರೆ. ಆದರೆ ಇವರಲ್ಲಿ ಎಷ್ಟು ಜನರು ಹಾಜರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ.
ಪ್ರಸ್ತುತ ಬೆಳಗಾವಿ, ಬೆಂಗಳೂರು, ಧಾರವಾಡದಲ್ಲಿ ಕೋವಿಡ್ ಅಬ್ಬರ ಜೋರಾಗಿದೆ. ಹೀಗಾಗಿ ಕಾಲೇಜು ಉಪನ್ಯಾಸಕರು ಈ ಜಿಲ್ಲೆಗಳಿಗೆ ಮೌಲ್ಯಮಾಪನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೈರಿಸ್ಕ್ ಏರಿಯಾಗಳಲ್ಲಿ ಕೇಂದ್ರಗಳಿವೆ. ಅಲ್ಲಿ ಹೇಗೆ ತೆರಳಿ ಮೌಲ್ಯಮಾಪನ ಮಾಡಬೇಕು. ಅಲ್ಲದೇ ಮೌಲ್ಯಮಾಪನಕ್ಕೆ ತೆರಳಿದರೆ ನಮಗೆ ಸರಿಯಾದ ವಸತಿ ವ್ಯವಸ್ಥೆ ದೊರೆಯಲ್ಲ. ಊಟ, ಉಪಹಾರದ ವ್ಯವಸ್ಥೆಯೂ ದೊರೆಯಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಬಂದ್ ಆಗಿವೆ. ಲಾಡ್ಜ್ಗಳು ಬಂದ್ ಇವೆ. ಹೀಗಾದರೆ ನಾವು ಎಲ್ಲಿ ವಾಸ್ತವ್ಯ ಮಾಡಬೇಕು. ಇದರಿಂದ ತುಂಬ ತೊಂದರೆ ಎದುರಾಗುತ್ತಿದೆ ಎಂದು ಉಪನ್ಯಾಸಕರು ತಮಗೆ ಆಗುತ್ತಿರುವ ತೊಂದರೆ ಕುರಿತು ಆಪ್ತ ವಲಯದಲ್ಲಿ ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ 52 ಜನರು ಮೇ 29ಕ್ಕೆ ಆಯಾ ಕೇಂದ್ರಗಳಿಗೆ ತೆರಳಿ ಅವರು ಹಾಜರಾಗಿರುವ ಕುರಿತು ವರದಿ ಮಾಡಿಕೊಳ್ಳಬೇಕು. ಆದರೆ ಕೊರೊನಾದಿಂದ ಹಲವು ಜನರು ಅರ್ಧ ದಾರಿಗೆ ತೆರಳಿ ವಾಪಸ್ಸಾಗುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಕೆಲವರಂತೂ ಮೌಲ್ಯಮಾಪನಕ್ಕೆ ತೆರಳಿಯೇ ಇಲ್ಲ. ಇದಲ್ಲದೇ ಕೊಪ್ಪಳ ಜಿಲ್ಲೆಯ ಉಪನ್ಯಾಸಕರ ಸಂಘವಂತೂ ನಮಗೆ ಕೊಪ್ಪಳ ಜಿಲ್ಲೆಯಲ್ಲೇ ಕೇಂದ್ರವನ್ನು ಸ್ಥಾಪಿಸಿ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.