ಭೌತಿಕ ಅಂತರದಲ್ಲಿ ಮದ್ಯ ಖರೀದಿಸುವಂತೆ ಹೇಳಿದ ಹೋಂಗಾರ್ಡ್ ಗೆ ಥಳಿಸಿದ ಯುವಕರು: ಕೇಸ್ ದಾಖಲು
Team Udayavani, May 4, 2020, 6:03 PM IST
ಗಂಗಾವತಿ: ಮದ್ಯ ಖರೀದಿಗೆ ಕ್ಯೂ ಮತ್ತು ಭೌತಿಕ ಅಂತರ ಪಾಲಿಸುವಂತೆ ಹೇಳಿದ ಕರ್ತವ್ಯ ನಿರತ ಹೋಂಗಾರ್ಡ್ ಗಳನ್ನು ಮೂರು ಜನ ಯುವಕರು ಹಲ್ಲೆ ಮಾಡಿದ ಘಟನೆ ಗಂಗಾವತಿ ಮಹಾವೀರ ವೃತ್ತದ ಮದ್ಯದಂಗಡಿಯ ಎದುರು ಸೋಮವಾರ ಮಧ್ಯಾಹ್ನ ಜರುಗಿದೆ.
ಇಲ್ಲಿನ ಮದ್ಯದಂಗಡಿ ಎದುರು ಮದ್ಯ ಖರೀದಿ ಮಾಡಲು ನೂರಾರು ಜನರು ಕ್ಯೂ ನಲ್ಲಿ ನಿಂತಿದ್ದರು. ಮಹೆಬೂಬನಗರದ ಮೂರು ಜನ ಯುವಕರು ಕ್ಯೂ ನಲ್ಲಿ ನಿಲ್ಲದೇ ಭೌತಿಕ ಅಂತರ ಕಾಪಾಡದೇ ಮದ್ಯ ಖರೀದಿಗೆ ಆಗಮಿಸಿ ಕರ್ತವ್ಯ ನಿರತ ಹೋಂಗಾರ್ಡ್ಬ ಜಿಲಾನಿಪಾಷಾ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಶರ್ಟ್ ನ್ನು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಯುವಕರು ಅಲ್ಲಿಂದ ಓಡಿಹೋಗುವ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯದಿಂದ ಹಿಡಿದು ಮೂರು ಜನರನ್ನು ಠಾಣೆ ಗೆ ಕರೆ ತರಲಾಗಿದ್ದು ಹಲ್ಲೆ ಹಾಗು ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ನಗರ ಠಾಣೆಯಲ್ಲಿಕೇಸ್ ದಾಖಲು ಮಾಡಲಾಗಿದೆ.
ಮದ್ಯದಂಗಡಿಗಳು ಬಂದ್: ಕರ್ತವ್ಯ ನಿರತ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕರ ಕ್ರಮ ಖಂಡಿಸಿ ಮಗರದ ಖಾಸಗಿ ಬಾರ್ ಗಳು ಮದ್ಯ ಮಾರಾಟ ವನ್ನು ಮಧ್ಯಾನ್ಹದಿಂದ ಬಂದ್ ಮಾಡಿ ಬಾರ್ ಮಾಲೀಕರು ಹೋಂಗಾರ್ಡ್ ಗೆ ಬೆಂಬಲ ಸೂಚಿಸಿದರು. ಕೂಡಲೇ ಹಲ್ಲೆ ಮಾಡಿದವರ ವಿರುದ್ದ ಕಠಿಣಕ್ರಮ ಜರುಗಿಸುವಂತೆ ಬಾರ್ ಸಿಬ್ಬಂದಿ ಪರವಾಗಿ ಮಲ್ಲಿಕಾರ್ಜುನ ತಟ್ಟಿ ಪೊಲೀಸರಿಗೆ ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.