ಲೋಕಲ್ ಫೈಟ್‌ಗೆ ಮೈಕೊಡವಿದ ಪಕ್ಷಗಳು
Team Udayavani, Dec 13, 2021, 12:30 PM IST
ಕೊಪ್ಪಳ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಐದುನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ರಾಷ್ಟ್ರೀಯ ಹಾಗೂಪ್ರಾದೇಶಿಕ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಯಾರಿಗೆ ಈ ಬಾರಿ ಟಿಕೆಟ್ ನೀಡಬೇಕು ಎನ್ನುವ ಲೆಕ್ಕಾಚಾರ ಸದ್ದಿಲ್ಲದೇ ನಡೆದಿದೆ.
ಕೊರೊನಾ ಪೂರ್ವದಲ್ಲೇ ಜಿಲ್ಲೆಯಲ್ಲಿನಕೆಲವು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅಧಿಕಾರ ಅವಧಿ ಮುಗಿದಿದೆ. ಕೋವಿಡ್ ಹರಡುವ ಭೀತಿಯಿಂದಅವಧಿ ಮುಗಿದಿರುವ ಸದಸ್ಯ ಸ್ಥಾನಗಳಿಗೆಚುನಾವಣೆ ಘೋಷಣೆಯಾಗಿರಲಿಲ್ಲ. ಈ ಮಧ್ಯೆ ಸಂವಿಧಾನದ ಆಶಯದಂತೆ,ರಾಜ್ಯ ಚುನಾವಣಾ ಆಯೋಗ ಜಿಲ್ಲೆಯಲ್ಲಿನ ಐದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಿದೆ. ಈ ಪೈಕಿ ಭಾಗ್ಯನಗರ ಪಪಂನ 19 ಸ್ಥಾನ,ಕುಕನೂರು ಪಪಂನ 19 ಸ್ಥಾನ, ಕಾರಟಗಿಪುರಸಭೆಯ 23 ಸದಸ್ಯ ಸ್ಥಾನ, ಕನಕಗಿರಿಪಪಂನ 17 ಸ್ಥಾನ ಹಾಗೂ ತಾವರಗೇರಾಪಪಂನ 18 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯ ರಾಜಕೀಯ ನಾಯಕರುಕೊಪ್ಪಳ-ರಾಯಚೂರು ವಿಪ ಕ್ಷೇತ್ರದಚುನಾವಣೆ ಮುಗಿಸಿ ನೆಮ್ಮದಿಯನಿಟ್ಟುಸಿರು ಬಿಟ್ಟಿದ್ದರು. ಈ ಬೆನ್ನಲ್ಲೆ ಸ್ಥಳೀಯಸಂಸ್ಥೆಗಳ ಚುನಾವಣೆ ಪಕ್ಷಗಳನಾಯಕರ ನಿದ್ದೆಗೆಡಿಸಿದೆ.ಏಕೆಂದರೆ, ಸ್ಥಳೀಯ ಸಂಸ್ಥೆಚುನಾವಣೆಗಳು ಮುಂದೆವಿಧಾನಸಭೆ ಚುನಾವಣೆಗಳಿಗೆ ಅಡಿಪಾಯ ಎನ್ನುವ ಮಾತುಗಳು ಸುಳ್ಳಲ್ಲ.
ಈ ಚುನಾವಣೆಯೇ ಮುಂಬರುವ ವಿಧಾನಸಭಾಕ್ಷೇತ್ರದ ಚುನಾವಣೆಗೆ ಈಚುನಾವಣಾ ಫಲಿತಾಂಶ ದಿಕ್ಸೂಚಿ ಎಂದರೂ ತಪ್ಪಾಗಲಾರದು.ಕಾಂಗ್ರೆಸ್, ಬಿಜೆಪಿನಾಯಕರು ವಿಧಾನ ಪರಿಷತಚುನಾವಣೆ ಮುಗಿಸಿದ ಬೆನ್ನಲ್ಲೇ, ಸ್ಥಳೀಯ ಸಂಸ್ಥೆಗಳಚುನಾವಣೆಯತ್ತ ಚಿತ್ತಹರಿಸಿದ್ದು, ಈಗಾಗಲೇ ಭಾಗ್ಯನಗರ, ಕನಗಕರಿ, ಕಾರಟಗಿಸೇರಿ ವಿವಿಧ ಪಪಂಗಳಲ್ಲಿಚುನಾವಣಾ ಪೂರ್ವಭಾವಿ ಸಭೆ ನಡೆಸಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರವನ್ನುಹೊರತುಪಡಿಸಿ ಈ ಬಾರಿ ಕ್ಷೇತ್ರಗಳ ಸ್ಥಳೀಯಸಂಸ್ಥೆಗಳಲ್ಲಿ ಚುನಾವಣಾ ಕಣ ಏರ್ಪಡಲಿದೆ.
ವಿಪ ಚುನಾವಣೆಯಲ್ಲಿ ಸುಮ್ಮನಿದ್ದ ಜೆಡಿಎಸ್ ಈಗಪಪಂ, ಪುರಸಭೆ ಚುನಾವಣೆಗೆ ಸದ್ದಿಲ್ಲದೆಸಿದ್ಧತೆ ನಡೆಸಿದೆ. ಇತ್ತ ಕಾಂಗ್ರೆಸ್, ಬಿಜೆಪಿ ಒಂದು ಸುತ್ತು ಆಕಾಂಕ್ಷಿಗಳ ಸಭೆ ನಡೆಸಿಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಪಕ್ಕಾ ಸ್ಥಳೀಯ ರಾಜಕಾರಣದ ಚುನಾವಣೆಆಗಿರುವುದರಿಂದ ಪ್ರತಿಯೊಂದು
ವರ್ಗವನ್ನೂ ಪರಿಗಣಿಸಿ ಟಿಕೆಟ್ ಹಂಚಿಕೆಮಾಡುವ ಅನಿವಾರ್ಯತೆಯಿದೆ. ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೂರು ಪಕ್ಷಗಳುತಯಾರಿ ನಡೆಸಿದ್ದು, ಸ್ಥಳೀಯ ಸಂಸ್ಥೆಗಳಅಧಿಕಾರವನ್ನು ತಮ್ಮ ವಶ ಮಾಡಿಕೊಳ್ಳಲುಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದು,ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆದಿದೆ.
ನಾವು ಈಗಾಗಲೇ ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಎಲ್ಲಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ನಡೆಸಲಾಗಿದೆ.ಇದೊಂದು ಸ್ಥಳೀಯ ರಾಜಕೀಯದಚುನಾವಣೆಯಾಗಿರುವ ಹಿನ್ನೆಲೆಯಲ್ಲಿಆಯಾ ಕ್ಷೇತ್ರದಲ್ಲಿನ ಹಿರಿಯರಿಗೆ ಅಭ್ಯರ್ಥಿಗಳ ಆಯ್ಕೆಗೆ ನಿರ್ಧಾರಕ್ಕೆ ಬಿಡಲಾಗಿದೆ. ನಾವು ಸರ್ವ ರೀತಿಯಿಂದಲೂ ಚುನಾವಣೆಗೆ ಸಿದ್ಧರಿದ್ದು, ಕಾರ್ಯಕರ್ತರನ್ನು ಕಣಕ್ಕೆ ಇಳಿಸಲಿದ್ದೇವೆ. –ದೊಡ್ಡನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ
ಈಗಾಗಲೇ ಐದು ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳಆಯ್ಕೆ ಕುರಿತಂತೆ ಪ್ರಮುಖರಸಭೆ ನಡೆಸಿ ಸಮಾಲೋಚನೆನಡೆಸಿದ್ದೇವೆ. ಬಿಜೆಪಿ ಸರ್ಕಾರದದುರಾಡಳಿತವನ್ನು ಜನರಿಗೆತಿಳಿಸಿ, ಕಾಂಗ್ರೆಸ್ ಮಾಡಿದಅಭಿವೃದ್ಧಿ ಕೆಲಸ ಮುಂದಿಟ್ಟುಮತ ಕೇಳಲು ಸಜ್ಜಾಗಿದ್ದೇವೆ.ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಮಾಡಲಿದ್ದೇವೆ.– ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಜೆಡಿಎಸ್ ಅಭ್ಯರ್ಥಿ ಕಣಕ್ಕೆಇಳಿಸಲಿದ್ದೇವೆ. ರಾಜ್ಯ ಮಟ್ಟದಸಭೆಯಲ್ಲಿ ನಮಗೆ ಕೆಲ ಸೂಚನೆನೀಡಿದ್ದು, ನಾವು ಸಹ ಜಿಲ್ಲೆಯಲ್ಲಿಚುನಾವಣಾ ಪೂರ್ವಭಾವಿಸಭೆ ನಡೆಸಿ ಎಲ್ಲ ತಯಾರಿಮಾಡಿಕೊಂಡಿದ್ದೇವೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ.– ವೀರೇಶ ಮಹಾಂತಯ್ಯನಮಠ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.