Lok polls: ಏ.8 ರಂದು ಆಯೋಜಿಸಿರುವ ಕಾಂಗ್ರೆಸ್ ದ್ರೋಹಿಗಳ ಸಭೆಗೆ ಹೋಗದಂತೆ ಅನ್ಸಾರಿ ಕರೆ
Team Udayavani, Apr 7, 2024, 6:43 PM IST
ಗಂಗಾವತಿ: ನನ್ನನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ಏ.08 ರಂದು ಲೋಕಸಭಾ ಚುನಾವಣೆಗಾಗಿ ಕರೆದ ಕಾಂಗ್ರೆಸ್ ಪಕ್ಷದ ದ್ರೋಹಿಗಳು ಕರೆದಿರುವ ಕಾರ್ಯಕರ್ತರ ಸಭೆಗೆ ತಮ್ಮ ಬೆಂಬಲಿಗ ಕಾರ್ಯಕರ್ತರು ಹಾಗೂ ಮುಖಂಡರು ತೆರಳದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮನವಿ ಮಾಡಿದ್ದಾರೆ.
ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಶಾಮೀದ್ ಮನಿಯಾರ್, ದೇವರಮನಿ ಮಲ್ಲಿ, ಅರಸಿನಕೇರಿ ಹನುಮಂತಪ್ಪ ಸೇರಿ ಕೆಲವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಶಾಸಕನಾಗಬಾರದೆಂದು ಷಡ್ಯಂತ್ರ ನಡೆಸಿ ಬಳ್ಳಾರಿ ಗಾಲಿ ಜನಾರ್ದನರೆಡ್ಡಿಯ ಕೆಆರ್‌ಪಿ ಪಕ್ಷಕ್ಕೆ ಬೆಂಬಲಿಸಿ ನನ್ನನ್ನು ಸೋಲಿಸಿದ್ದಾರೆ.
ಶಾಮೀದ್ ಮನಿಯಾರ್ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಪ್ರಚಾರ ಮಾಡದೇ ಮನೆಯಲ್ಲಿ ಇರುತ್ತಿದ್ದರು, ಸಂಜೆ 4-5 ಗಂಟೆ ಸಂದರ್ಭದಲ್ಲಿ ನಮ್ಮ ಮನೆಗೆ ಬಂದು ಮುಖ ತೋರಿಸಿ ಪುನಃ ಮನೆಗೆ ಹೋಗುತ್ತಿದ್ದರು. ಯಾರು ಸಹ ಅನ್ಸಾರಿಗೆ ಮತ ಹಾಕುವಂತೆ ಎಲ್ಲಿಯೂ ಮನವಿ ಮಾಡಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಇವರೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವ ನಾಟಕವಾಡುತ್ತಿದ್ದಾರೆ.
ಏ.08 ರಂದು ಕೆಆರ್‌ಪಿ ಪಕ್ಷದ ಕಾರ್ಯಾಲಯವಾಗಿದ್ದ ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಿದ್ದು ಯಾರು ಸಹ ಹೋಗಬಾರದು. ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ಆಯೋಜನೆ ಮಾಡಲಿದ್ದು ಆ ಸಭೆಗೆ ಎಲ್ಲರೂ ತಪ್ಪದೇ ಬರಬೇಕು. ಕೆಆರ್‌ಪಿ ಪಕ್ಷಕ್ಕಾಗಿ ದುಡಿದವರಿಗೆ ಈಗ ಅಸ್ತಿತ್ವ ಇಲ್ಲದಂತಾಗಿದ್ದು ಈಗ ಇವರೆಲ್ಲ ಕಾಂಗ್ರೆಸ್ ಎಂದು ಹೇಳುತ್ತಿದ್ದಾರೆ. ಇವರನ್ನು ಯಾರು ನಂಬಬಾರದು. ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಬಹಳ ಮೋಸಗಾರ ಇದ್ದಾನೆ, ಇವರ ಮಾತನ್ನು ಯಾರು ನಂಬಬಾರದು. ಎಂಎಲ್‌ಎ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ ಈಗ ಕಾಂಗ್ರೆಸ್ ಎನ್ನುತ್ತಿದ್ದು ಇವರ ನಂಬಿಕೆ ದ್ರೋಹವಾಗಿದೆ. ಅನ್ಸಾರಿ ಇರುವುದು ಮಾತ್ರ ಓರಿಜಿನಲ್ ಕಾಂಗ್ರೆಸ್ ಇವರೆಲ್ಲ ಡುಬ್ಲಿಕೇಟ್‌ಗಳು ಆದ್ದರಿಂದ ಏ.08 ರ ಸಭೆಗೆ ಯಾರು ಹೋಗಬಾರದು ಎಂದು ಅನ್ಸಾರಿ ಕಾರ್ಯಕರ್ತರಿಗೆ ತಾಕೀತು ಮಾಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.