ಕೊಪ್ಪಳದಲ್ಲಿ ಮತ್ತೆ ಅರಳಿದ ತಾವರೆ
Team Udayavani, May 24, 2019, 3:27 PM IST
ಕೊಪ್ಪಳ: ಭಾರಿ ಕುತೂಹಲ ಮೂಡಿಸಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಮಲ ಹ್ಯಾಟ್ರಿಕ್ ಗೆಲುವು ಪಡೆಯುವುದರೊಂದಿಗೆ ಕ್ಷೇತ್ರವನ್ನು ಕೇಸರಿಮಯ ಮಾಡಿದೆ. ಎರಡನೇ ಅವಧಿಗೂ ಕರಡಿ ಕುಣಿತ ಮತ್ತೆ ಮುಂದುವರಿದಿದ್ದು, ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದರ ಮೂಲಕ ಕಾಂಗ್ರೆಸ್‌ಗೆ ಸೋಲುಣಿಸಿದೆ.
ಕಳೆದರಡು ತಿಂಗಳಿಂದ ಕಾವೇರಿದ್ದ ಲೋಕ ಸಮರಕ್ಕೆ ಗುರುವಾರ ತೆರೆ ಬಿದ್ದಿದೆ. ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು 5,86,783 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ 5,48,386 ಮತ ಪಡೆದಿದ್ದಾರೆ. ಅಂಚೆ ಮತಗಳಲ್ಲೂ ಸಹ ಕರಡಿ 1786 ಮತ ಪಡೆದಿದ್ದರೆ, ಹಿಟ್ನಾಳ 813 ಮತಗಳನ್ನು ಪಡೆದಿದ್ದಾರೆ.
ಚುನಾವಣಾ ಆರಂಭದ ದಿನದಲ್ಲಿ ಕ್ಷೇತ್ರದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದ್ದವು. ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಘೋಷಣೆ ಮಾಡದೇ ಹೈಕಮಾಂಡ್ ವಿಳಂಬ ಮಾಡಿತ್ತು. ಇದರಿಂದ ಕರಡಿಗೆ ಈ ಬರಿ ಟಿಕೆಟ್ ಕೈ ತಪ್ಪಲಿದೆ ಎನ್ನುವ ವಿಶ್ಲೇಷಣೆಗಳು ಶುರುವಾಗಿದ್ದವು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಡಿ ನಿರ್ಧಾರದಿಂದ ಹೈಕಮಾಂಡ್ ಮುನಿಸಿಕೊಂಡಿದ್ದು, ಕರಡಿಗೆ ಟಿಕೆಟ್ ನೀಡಲ್ಲ ಎನ್ನುವ ಲೆಕ್ಕಾಚಾರಗಳು ನಡೆದಿದ್ದವು. ಹಲವು ಡೋಲಾಯಮಾನಗಳ ಮಧ್ಯೆ, ಸಂಗಣ್ಣ ಕರಡಿ ಅವರು ಟಿಕೆಟ್ ಪಡೆದು ಕ್ಷೇತ್ರದ ತುಂಬಾ ಪ್ರಚಾರ ನಡೆಸಿದ್ದರು.
ಇತ್ತ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನು ಬಿದ್ದು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೈನಲ್ಲೇ ಕೆ.ವಿರೂಪಾಕ್ಷಪ್ಪ ಹಾಗೂ ಬಸವನಗೌಡ ಬಾದರ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ ಹಿಟ್ನಾಳ ಕುಟುಂಬಕ್ಕೆ ಟಿಕೆಟ್ ಒಲಿದ ಹಿನ್ನೆಲೆಯಲ್ಲಿ ಕೈನಲ್ಲೇ ಆಂತರಿಕ ಬೇಗುದಿ ಕಾಣಿಸಿಕೊಂಡಿತ್ತು. ಹಲವು ರಾಜಕೀಯ ಬೆಳವಣಿಗೆ ಮಧ್ಯೆ ಮುನಿಸಿನಲ್ಲಿದ್ದ ಇಬ್ಬರೂ ನಾಯಕರು ಕೈನಲ್ಲಿಯೇ ಉಳಿದು ಪ್ರಚಾರ ನಡೆಸಿದ್ದರು.
ಮತದಾರ ಅಭ್ಯರ್ಥಿಗಳು ತನ್ನ ತೀರ್ಪು ನೀಡಿದ್ದು, ಸಂಗಣ್ಣ ಕರಡಿ ಅವರು ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳಗಿಂತ 38,397 ಮತಗಳ ಮುನ್ನಡೆ ಪಡೆದು ಗೆಲುವಿನ ನಗೆ ಬೀರಿದ್ದಾರೆ.
7 ಕ್ಷೇತ್ರಗಳಲ್ಲಿ ಕಮಲಕ್ಕೆ ಮುನ್ನಡೆ: ಎಂಟು ಕ್ಷೇತ್ರಗಳ ಪೈಕಿ ಬಿಜೆಪಿಗೆ ಏಳು ಕ್ಷೇತ್ರಗಳಲ್ಲಿ ಮುನ್ನಡೆ ದೊರೆತಿದ್ದು, ಈ ಪೈಕಿ ಸಿಂಧನೂರು ಕ್ಷೇತ್ರದಲ್ಲಿ 80 ಮತ, ಮಸ್ಕಿ ಕ್ಷೇತ್ರದಲ್ಲಿ 12071 ಮತ, ಕುಷ್ಟಗಿ ಕ್ಷೇತ್ರದಲ್ಲಿ 7825 ಮತ, ಕನಕಗಿರಿ ಕ್ಷೇತ್ರದಲ್ಲಿ 7296 ಮತ, ಗಂಗಾವತಿ ಕ್ಷೇತ್ರದಲ್ಲಿ 2536 ಮತ, ಯಲಬುರ್ಗಾ ಕ್ಷೇತ್ರದಲ್ಲಿ 8072 ಮತ, ಕೊಪ್ಪಳ ಕ್ಷೇತ್ರದಲ್ಲಿ 11678 ಮತಗಳಲ್ಲಿ ಸಂಗಣ್ಣ ಕರಡಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸಿರಗುಪ್ಪಾ ಒಂದೇ ಕ್ಷೇತ್ರದಲ್ಲಿ ಮಾತ್ರ ಕಮಲಕ್ಕಿಂತ 12,134 ಮತ ಮುನ್ನಡೆ ಪಡೆದಿದ್ದು, ಬಿಟ್ಟರೆ ಮತ್ಯಾವ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ.
ಸಹೋದರನ ಕ್ಷೇತ್ರದಲ್ಲೇ ಹಿನ್ನೆಡೆ: ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಸಿಂಧನೂರು, ಕುಷ್ಟಗಿ, ಗಂಗಾವತಿ ಹಾಗೂ ಸಿರಗುಪ್ಪಾ ಕ್ಷೇತ್ರಗಳ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟೇ ಹೆಚ್ಚು ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರಗಳೆಲ್ಲವೂ ಉಲಾr ಹೊಡೆದಂತೆ ಕಾಣುತ್ತಿದೆ. ಮೋದಿ ಅಲೆ, ಯುವಕರ ಕುಣಿತವೇ ಕೈ ಸೋಲಿಗೆ ಕಾರಣವಾಗಿದೆ ಎಂದೆನ್ನಲಾಗುತ್ತಿದೆ. ಅಚ್ಚರಿಯೆಂದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರವನ್ನು 2ನೇ ಅವಧಿಗೂ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪ್ರತಿನಿಧಿಸುತ್ತಿದ್ದರೂ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ 11,678 ಮತಗಳ ಹಿನ್ನಡೆ ಅನುಭವಿಸಿದೆ. ಪ್ರಸ್ತುತ ಚುನಾವಣೆಯ ಫಲಿತಾಂಶ ಕೈ ಪಾಳೆಯದ ಲೆಕ್ಕವನ್ನೆಲ್ಲ ಉಲಾr ಮಾಡಿದೆ. ಇಲ್ಲಿ ಮೋದಿ ಮ್ಯಾಜಿಕ್ ಆಟ ನಡೆದಿದೆ ಎನ್ನುವ ಮಾತಿದ್ದರೂ ಕರಡಿಯ ಅಭಿವೃದ್ಧಿ ಮಾತು ಕೇಳಿ ಬಂದಿವೆ. ಜತೆಗೆ ಯುವ ಸಮೂಹ ದೇಶ ಭಕ್ತಿಯ ಮಾತನ್ನಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಮೋದಿ ಹವಾ ಜೋರಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
•ಕೈ ಶಾಸಕರ ಕ್ಷೇತ್ರಗಳಲ್ಲಿ ಕಮಲಕ್ಕೆ ಲೀಡ್
•ನಡೆಯಲಿಲ್ಲ ಕ್ಷೇತ್ರದೊಳಗೆ ಮೈತ್ರಿಯಾಟ
•ಕಾಂಗ್ರೆಸ್‌ಗೆ ಸಿಗುತ್ತಿಲ್ಲ ರಣತಂತ್ರ ಲೆಕ್ಕ
•ಕಳೆದ ಬಾರಿಗಿಂತ ಕರಡಿಗೆ ಭರ್ಜರಿ ಲೀಡ್
ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಕ್ಷೇತ್ರದ ತುಂಬ ದೊಡ್ಡ ಅಲೆ ಸೃಷ್ಟಿಯಾಗಿತ್ತು. ಅಲ್ಲದೇ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ಕ್ಷೇತ್ರ ವ್ಯಾಪ್ತಿಯ ಗಂಗಾವತಿಯಲ್ಲಿ ಬೃಹತ್ ಪ್ರಮಾಣದ ಪ್ರಚಾರ ರ್ಯಾಲಿ ನಡೆಸಿದ ಮೇಲಂತೂ ಮತ್ತಷ್ಟು ಸಂಗಣ್ಣ ಕರಡಿ ಪರ ಒಲವು ಹೆಚ್ಚಾಯಿತು. ಯುವಕರು ಮೋದಿ ಮಾತಿಗೆ ಮನಸೋತು ದೇಶದ ರಕ್ಷಣೆ, ಭದ್ರತೆಯ ಕುರಿತು ಹೆಚ್ಚಿನ ಮಹತ್ವ ನೀಡಿ ಬಿಜೆಪಿ ಬೆಂಬಲಿಸಿದ್ದಾರೆ. ಜೊತೆಗೆ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಇರುವುದರಿಂದ, ಲಿಂಗಾಯತ್ ಸಮಾಜದವರಾದ ಸಂಗಣ್ಣ ಕರಡಿ ಅವರ ಬುಟ್ಟಿಗೆ ಕ್ಷೇತ್ರದ ದೊಡ್ಡ ಸಮುದಾಯದ ಮತಗಳು ಸರಾಗವಾರಿ ಹರಿದು ಬಂದಿವೆ ಎಂಬ ಮಾತುಗಳು ಕೇಳಿ ಬಂದಿವೆ. ಇದರೊಟ್ಟಿಗೆ ದಲಿತ, ನಾಯಕ ಸೇರಿದಂತೆ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಕೇಸರಿ ಪಾಳಯಕ್ಕೆ ಬಂದ ಕುರಿತು ಅವರೇ ಹೇಳಿಕೊಂಡಿದ್ದಾರೆ. ಇನ್ನೂ ಸಿಂಧನೂರು ಗಡಿ ಭಾಗದಲ್ಲಿ ತೆಲಗು ಭಾಷಿಕರು ಸೇರಿದಂತೆ ಬಾಂಗ್ಲಾದೇಶಿ ವಲಸಿಗರು ಹಲವು ವರ್ಷಗಳಿಂದ ನೆಲೆಸಿದ್ದಾರೆ. ಈ ಹಿಂದೆಯೂ ಅವರು ನಮಗೆ ಶಾಶ್ವತ ಭಾರತದ ಪೌರತ್ವ ನೀಡುವಂತೆ ಒತ್ತಾಯ ಮಾಡಿದ್ದರು. ಸಂಸದರು ಕೇಂದ್ರ ಮಟ್ಟದಲ್ಲಿ ಅವರ ಪ್ರಸ್ತಾವನೆ ಕೊಂಡೊಯ್ದಿದ್ದರು. ಕೇಂದ್ರವೂ ಪೌರತ್ವಕ್ಕೆ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿದ್ದರಿಂದ ಬಾಂಗ್ಲಾ ವಲಸಿಗರು ಕರಡಿಗೆ ಜೈ ಎಂದಿದ್ದಾರೆ. ಇನ್ನೂ ತುಂಗಭದ್ರಾ ಡ್ಯಾಂ ಬಳಿ ನವಲಿ ಜಲಾಶಯದ ಪ್ರಸ್ತಾಪ ಮಾಡಿದ್ದರಿಂದ ಎಡದಂಡೆ ಕಾಲುವೆ ಭಾಗದ ರೈತರು ಬಿಜೆಪಿಯ ಕರಡಿ ಪರ ನಿಂತಿರುವುದನ್ನು ಅಲ್ಲಗಳೆಯುವಂತಿಲ್ಲ.
ಜನರ ತೀರ್ಪಿಗೆ ತಲೆಬಾಗಲೇ ಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಗೆ ಮೈತ್ರಿಕೂಟದ ಅಭ್ಯರ್ಥಿಗಳು ಕೊಚ್ಚಿ ಹೋಗಿದ್ದಾರೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದ್ದರೂ ಗೆದ್ದು ಬರುತ್ತಿದ್ದರು. ಅದರಂತೆ ಈಗ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೋದಿ ಅಲೆಯೊಂದೇ ಮಾನದಂಡವಾಗಿದೆ.
· ಅಮರೇಗೌಡ ಪಾಟೀಲ ಬಯ್ನಾಪುರ, ಶಾಸಕ
ಕೊಪ್ಪಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ನೇರ ಕಾರಣ. ಚುನಾವಣೆಯ ಪ್ರಚಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಜೆಡಿಎಸ್ ಕಾರ್ಯಕರ್ತರು ಹಾಗೂ ಹಳೆಯ ಕಾಂಗ್ರೆಸ್ ಮುಖಂಡರನ್ನು ನಿರ್ಲಕ್ಷ ್ಯ ಮಾಡಿದ ಪರಿಣಾಮವೇ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣವಾಗಿದೆ.
· ಎಚ್.ಆರ್. ಶ್ರೀನಾಥ, ಜೆಡಿಎಸ್ ಮುಖಂಡ
ಅಂಚೆ ಮತದಲ್ಲೂ ಮುಂದೆ
ಕೊಪ್ಪಳ: ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ 21 ಸುತ್ತುಗಳ ಮತಗಳ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಹಿಟ್ನಾಳಗೆ ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಸಿಗಲೇ ಇಲ್ಲ.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ 32,730 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಹಿಟ್ನಾಳ 26469 ಮತ ಪಡೆದರು. 2ನೇ ಸುತ್ತಿನಲ್ಲಿ ಕರಡಿ- 65,237, ಹಿಟ್ನಾಳ 54,070, 3ನೇ ಸುತ್ತಿನಲ್ಲಿ ಕರಡಿ-98,282, ಹಿಟ್ನಾಳ 82,117, 4ನೇ ಸುತ್ತಿನಲ್ಲಿ ಕರಡಿ-1,31,387, ಹಿಟ್ನಾಳ 1,12,443, 5ನೇ ಸುತ್ತಿನಲ್ಲಿ ಕರಡಿ-1,63,798, ಹಿಟ್ನಾಳ 1,42,618, 6ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 1,97,138, ಹಿಟ್ನಾಳ 1,71,392, 7ನೇ ಸುತ್ತಿನಲ್ಲಿ ಕರಡಿ-2,27,800, ಹಿಟ್ನಾಳ 2,02,427, 8ನೇ ಸುತ್ತಿನಲ್ಲಿ ಕರಡಿ- 2,58,403, ಹಿಟ್ನಾಳ 2,34,261, 9ನೇ ಸುತ್ತಿನಲ್ಲಿ ಕರಡಿ-2,91,101, ಹಿಟ್ನಾಳ 2,64,120, 10ನೇ ಸುತ್ತಿನಲ್ಲಿ ಕರಡಿ 3,20,568, ಹಿಟ್ನಾಳ 2,95,081, 11ನೇ ಸುತ್ತಿನಲ್ಲಿ ಕರಡಿ 3,51,543, ಹಿಟ್ನಾಳ 3,23,746, 12ನೇ ಸುತ್ತಿನಲ್ಲಿ ಕರಡಿ 3,85,507, ಹಿಟ್ನಾಳ 3,56,408, 13ನೇ ಸುತ್ತಿನಲ್ಲಿ ಕರಡಿ 4,20,473, ಹಿಟ್ನಾಳ 3,87,015, 14ನೇ ಸುತ್ತಿನಲ್ಲಿ ಕರಡಿ 4,54,401, ಹಿಟ್ನಾಳ 4,20,354, 15ನೇ ಸುತ್ತಿನಲ್ಲಿ ಕರಡಿ 4,88,131, ಹಿಟ್ನಾಳ 4,51,618, 16ನೇ ಸುತ್ತಿನಲ್ಲಿ ಕರಡಿ 5,19,852, ಹಿಟ್ನಾಳ 4,83,244, 17ನೇ ಸುತ್ತಿನಲ್ಲಿ ಕರಡಿ 5,43,656, ಹಿಟ್ನಾಳ 5,06,682, 18ನೇ ಸುತ್ತಿನಲ್ಲಿ ಕರಡಿ 5,63,938, ಹಿಟ್ನಾಳ 5,25,830, 19ನೇ ಸುತ್ತಿನಲ್ಲಿ ಕರಡಿ 5,76,616, ಹಿಟ್ನಾಳ 5,39,391,20ನೇ ಸುತ್ತಿನಲ್ಲಿ ಕರಡಿ 5,83,407, ಹಿಟ್ನಾಳ 5,45,358,21ನೇ ಸುತ್ತಿನಲ್ಲಿ ಕರಡಿ 5,84,997, ಹಿಟ್ನಾಳ 5,47,573 ಮತಗಳನ್ನು ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Drone: ಪುರಿ ದೇಗುಲದ ಮೇಲೆ ಡ್ರೋನ್ ಹಾರಾಟ: ಪೊಲೀಸರಿಂದ ತನಿಖೆ
Washington: ಹಿಲರಿ, ಸೊರೋಸ್ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ
Govt.,: ಖಾಸಗಿ ಚಾಟ್ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.