ಶಾಲಾ ಅವಧಿಗೆ ಬಸ್ ವ್ಯವಸ್ಥೆ ಕಲ್ಪಿಸಿ
ಶಾಲೆಗೆ ಎರಡೂವರೆ ಗಂಟೆ ಬೇಗ ಹೋಗುತ್ತಿರುವ ಮಕ್ಕಳು
Team Udayavani, Jul 2, 2019, 9:23 AM IST
ಕುಷ್ಟಗಿ: ಶಾಲಾ ಅವಧಿ ವೇಳೆ ಬಸ್ ವ್ಯವಸ್ತೆ ಕಲ್ಪಿಸಬೇಕೆಂದು ಒತ್ತಾಯಿಸಿ ನೀರಲೂಟಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಕುಷ್ಟಗಿ: ಶಾಲಾ ಅವಧಿ ಬಸ್ ಸೇವೆ ಕಲ್ಪಿಸಬೇಕೆಂದು ಒತ್ತಾಯಿಸಿ ತಾಲೂಕಿನ ನೀರಲೂಟಿ ಗ್ರಾಮದ ವಿದ್ಯಾರ್ಥಿಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಸಂತೋಷಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಹಿರೇಮನ್ನಾಪೂರ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಬೆಳಗ್ಗೆ 9:30ಕ್ಕೆ ಆರಂಭಗೊಂಡು ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ಈ ಅವಧಿಗೆ ಬಸ್ ಸೇವೆ ಕಲ್ಪಿಸಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಹುಲಿಯಾಪೂರದಿಂದ ಬೆಳಗಿನ ಜಾವ 6:45ಕ್ಕೆ ನಿರ್ಗಮಿಸುತ್ತಿದ್ದು, ನೀರಲೂಟಿ ಗ್ರಾಮಕ್ಕೆ 7 ಗಂಟೆಗೆ, ಹಿರೇಮನ್ನಾಪೂರಕ್ಕೆ 7:30ಕ್ಕೆ ತಲುಪಿ 8:30ರ ವೇಳೆ ಕುಷ್ಟಗಿ ತಲುಪುವ ವ್ಯವಸ್ಥೆ ಇದೆ. ಆದರೆ ಈ ವ್ಯವಸ್ಥೆಯಿಂದ ನೀರಲೂಟಿಯ ಪ್ರೌಢಶಾಲಾ ವಿದ್ಯಾರ್ಥಿಗಳು, 9:30ಕ್ಕೆ ಶುರುವಾಗುವ ಶಾಲೆಗೆ ಎರಡೂವರೆ ತಾಸು ಮುಂಚಿತವಾಗಿ ಆಗಮಿಸಬೇಕಿದ್ದು, ಸಂಜೆ ತಡವಾಗಿ ಮನೆ ಸೇರುವಂತಾಗಿದೆ. ಹೀಗಾಗಿ ಶಾಲೆಯ ವೇಳೆಗೆ ಸರಿಹೊಂದುವಂತೆ ಬಸ್ ಸೇವೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ಗ್ರಾಮಸ್ಥರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಸಂತೋಷಕುಮಾರ ಮಾತನಾಡಿ, ಶಾಲೆಗಳು ಏಕಕಾಲಕ್ಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಅವಧಿ ಬಸ್ ಬೇಕೆನ್ನುವ ಬೇಡಿಕೆ ತಪ್ಪಲ್ಲ. ಪ್ರತಿ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಬೇಕಾಗುತ್ತದೆ. ಆ ವ್ಯವಸ್ಥೆ ಅಸಾಧ್ಯ. ಬಸ್ ಸಂಚರಿಸುವ ಗ್ರಾಮಗಳ ಗ್ರಾಮಸ್ಥರೊಂದಿಗೆ ಚರ್ಚಿಸಿ ಸೂಕ್ತ ಸಮಯಕ್ಕೆ ಅರ್ಧ ಗಂಟೆ ಹೆಚ್ಚು ಕಡಿಮೆಯಾದರೂ ಹೊಂದಾಣಿಕೆಗೆ ಸಹಮತವಿದ್ದರೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು. ದುರಗಪ್ಪ ಹರಿಜನ, ಶಿವಪುತ್ರಯ್ಯ ಹಿರೇಮಠ, ಹನಮಂತಪ್ಪ ನಿಡಗುಂದಿ, ಯಮನೂರಗೌಡ ಪೊಲೀಸಪಾಟೀಲ, ಹನಮಂತಪ್ಪ ದಾಸರ, ಸಂಗಪ್ಪ ಅಂಗಡಿ, ಬಸಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ
Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.