![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 2, 2021, 1:46 PM IST
ಕೊಪ್ಪಳ: ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿ ಹದ ಮಾಡಿದರೆ ಉತ್ತಮ ಗೊಬ್ಬರ ದೊರೆಯುತ್ತದೆ ಎಂದು ಕೃಷಿವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಪಿ.ಆರ್. ಬದರಿ ಪ್ರಸಾದ ತಿಳಿಸಿದರು.
ನಗರದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ,ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಯವ ಗೊಬ್ಬರ ಮತ್ತು ಎರೆಹುಳು ಗೊಬ್ಬರ, ಬಹಳ ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ. ತಿಪ್ಪೆ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರಗಳಉಪಯೋಗ ಕೃಷಿಯೊಂದಿಗೆ ಬೆಳೆದು ಬಂದಿದೆ. ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿ ಹದ ಮಾಡಿದರೆ ಉತ್ತಮ ಗೊಬ್ಬರ ದೊರೆಯುತ್ತದೆ. ಹೀಗೆ ತಯಾರಿಸಿದರೆಗುಣಮಟ್ಟ ಗೊಬ್ಬರ ಲಭಿಸುತ್ತದೆ. ದನದಕೊಟ್ಟಿಗೆಯಲ್ಲಿ ಸಗಣಿ, ಮೂತ್ರ, ತಿಂದು ಬಿಟ್ಟ ಕಡ್ಡಿ, ಬೂದಿ ಮತ್ತು ದನಗಳಿಗೆಹಾಸಿಗೆಗಾಗಿ ಉಪಯೋಗಿಸಿದ ಹುಲ್ಲುಮುಂತಾದವುಗಳನ್ನು ನಿತ್ಯವೂ 20x6x3 ರ ತಗ್ಗಿನಲ್ಲಿ 3-4 ಭಾಗಮಾಡಿ ಒಂದುಭಾಗದಲ್ಲಿ ತುಂಬುತ್ತ ಹೊಗಬೇಕು. ನಂತರ ಉತ್ತಮ ಗೊಬ್ಬರವಾಗುತ್ತದೆ. ಇದನ್ನು ತಗ್ಗು ಪದ್ಧತಿ ಮತ್ತು ರಾಶಿ ಪದ್ಧತಿ ಅಂತ ಕರೆಯುತ್ತಾರೆ ಎಂದರು.
ಇತ್ತೀಚೆಗೆ ಜೇನು ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಜೇನು ನೊಣಗಳು ಮಾನವ ಜೀವನಕ್ಕೆಉಪಯುಕ್ತವಾಗಿವೆ. ಹೊಲದಲ್ಲಿಬೆಳೆದ ಬೆಳೆಗಳ ಹೂವುಗಳ ಮೇಲೆಕೂತು ಜೇನುಗಳು ಪರಾಗಸ್ಪರ್ಷ ಮಾಡುತ್ತವೆ. ಇದರಿಂದ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ. ಜೇನು ನೊಣಗಳುಮಳೆನೀರು ಬೀಳದಂತೆ, ಮಳೆಗೆಹಾನಿಯಾಗದಂತೆ ಗೂಡನ್ನು ಕಟ್ಟುತ್ತವೆ.ಅದರಲ್ಲಿ ರಾಣಿ ಜೇನು ಹುಳು ಎಂಬುದುಒಂದು ವಿಶೇಷ ಜೇನು ನೊಣವಾಗಿದೆ. ಒಂದು ತಟ್ಟೆಯಲ್ಲಿ 30-35 ಸಾವಿರಹುಳುಗಳಿರುತ್ತವೆ. ಪ್ರತಿದಿನ 1500ಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತದೆ. ಮನೆಯಲ್ಲಿ ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆ ಮಾಡಬಹುದು. ಪೆಟ್ಟಿಗೆಯಿಂದ ವರ್ಷಕ್ಕೆ 10 ಕೆ.ಜಿ ಜೇನು ತೆಗೆಯಬಹುದು. ಇದರ ಸೇವನೆಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ಅಣಬೆ ಬೆಳೆ ಇಂದು ಬಹಳ ಪ್ರಸಿದ್ಧಿಪಡೆಯುತ್ತಿದೆ. ಇದರ ಬೀಜಗಳ ಬಳಕೆಮಾಡಿ ಮನೆಗಳಲ್ಲಿ ಎಲ್ಲಿಯಾದರೂಬೆಳೆಯಬಹುದು. ಕಡಿಮೆ ಅವ ಧಿಯಲ್ಲಿಅಣಬೆ ಬೆಳೆಯಬಹುದು. ಅಣಬೆ ಸೇವನೆ ಆರೊಗ್ಯಕ್ಕೆ ಉತ್ತಮವಾಗಿದ್ದು, ಇದುಮಾಂಸದಲ್ಲಿರುವ ಪೌಷ್ಟಿಕಾಂಶಗಳನ್ನುಹೊಂದಿರುತ್ತದೆ. ಮಾಂಸ ತಿನ್ನದವರುಅಣಬೆ ಸೇವಿಸಬಹುದು. ಅಣಬೆಮಾರಾಟ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಮಾತನಾಡಿದರು. ಕೃಷಿ ವಿಸ್ತರಣಾ ಕೇಂದ್ರದ ಕೃಷಿ ಸಹಾಯಕ ಪರ್ವತಯ್ಯ, ಸರಕಾರಿ ಬಾಲಕಿಯರಬಾಲಮಂದಿರ ಅಧಿಧೀಕ್ಷಕಿ ಕಲಾವತಿ,ಸರಕಾರಿ ಬಾಲಕರ ಬಾಲಮಂದಿರಅಧಿಧೀಕ್ಷಕ ಮಂಜೂರ್ ಖಾನ್,ವಿಸ್ತಾರ ಸಂಸ್ಥೆಯ ಸಾವಿತ್ರಿ, ಕಲ್ವಾರಿ ಚಾಪೆಲ್ ಟ್ರಸ್ಟ್‌ನ ಜೈ ಕುಮಾರ ಉಪಸ್ಥಿತರಿದ್ದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.