ಕರ್ಫ್ಯೂ ಸಮಯದಲ್ಲಿ ಗಂಗಾವತಿ ನಗರದ ಹಸುಗಳ ಬಾಯಾರಿಕೆ ತಣಿಸುವ ಟೀ ವ್ಯಾಪಾರಿ ರಂಗಪ್ಪ
Team Udayavani, May 8, 2021, 2:31 PM IST
ಗಂಗಾವತಿ: ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇದರಿಂದ ಬೀದಿದನಗಳಿಗೆ ಮೇವು, ನೀರಿನ ಕೊರತೆಯುಂಟಾಗಿದೆ. ಇದನ್ನು ಮನಗಂಡ ಇಂದಿರಾ ನಗರದ ಟೀ ವ್ಯಾಪಾರಿ ರಂಗಪ್ಪ ನಾಯಕ ನಿತ್ಯವೂ ಬೆಳ್ಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಓಎಸ್ ಬಿ ರಸ್ತೆಯಲ್ಲಿ ಇಟ್ಟಿರುವ ಸಿಮೆಂಟ್ ಟ್ಯಾಂಕ್ ಗೆ ನೀರು ತುಂಬಿಸುತ್ತಾರೆ. ಗಾಂಧಿ ಚೌಕ್ ಓಎಸ್ ಬಿ ರೋಡ್ ಮತ್ತು ಚನ್ನಬಸವಸ್ವಾಮಿ ದೇಗುಲದ ಸುತ್ತಲಿನ ದನಗಳು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತವೆ. ಗೋವುಗಳ ಬಗ್ಗೆ ಭಕ್ತಿ ಭಾವದ ಮಾತನಾಡುವ ಕೆಲವರು ಗೋವುಗಳಿಗೆ ಮೇವು ನೀರು ಕೊಡುವ ರಂಗಪ್ಪ ನಂತವರು ಮಾತಿಗಿಂತ ಕೆಲಸಕ್ಕೆ ಆದ್ಯತೆ ಕೊಡುವುದು ಉತ್ತಮ ಕೆಲಸವಾಗಿದೆ.
ಕೋವಿಡ್ ಕರ್ಪ್ಯೂ ನಿಂದಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬೀದಿ ದನಗಳಿಗೆ ನೀರು ಮೇವು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ದನಗಳಿಗೆ ಜನರು ಮೇವು ನೀರು ಮಾತ್ರ ಕೊಡಬೇಕು. ಅಕ್ಕಿ ಬೆಲ್ಲ ರೊಟ್ಟಿ ಕೊಡಬಾರದು. ಇದರಿಂದ ದನಗಳ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಅನ್ನ ಅಕ್ಕಿ ರೊಟ್ಟಿ ಬೆಲ್ಲ ತಿಂದ ದನಗಳು ಹಾಕುವ ಸೆಗಣಿಯಿಂದ ರೋಗ ರುಜಿನಗಳು ಹರಡುತ್ತದೆ. ಜನರು ಮೇವು ನೀರು ಬಿಟ್ಟು ಬೇರೆಯದನ್ನು ಕೊಡಬಾರದೆಂದು ರಂಗಪ್ಪ ನಾಯಕ ಉದಯವಾಣಿ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.