ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಯನ್ನು ಕಂಡು, ಮೈಯಲ್ಲಿ ದೇವರು ಬಂದಂತೆ ನಟಿಸಿದ ಭೂಪ.!
Team Udayavani, Nov 27, 2021, 1:19 PM IST
ಕುಷ್ಟಗಿ: ಮನೆ ಮನೆಗೆ ಕೋವಿಡ್ ಲಸಿಕಾ ಮೇಳ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ ವ್ಯಕ್ತಿಯೊಬ್ಬರಿಗೆ ಲಸಿಕೆ ಹಾಕಲು ಮುಂದಾದಾಗ ವ್ಯಕ್ತಿಯೊಬ್ಬ ಮೈಯಲ್ಲಿ ದೇವರು ಬಂದಂತೆ ನಟಿಸಿ, ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಯನ್ನು ಯಾಮಾರಿಸಿದ ಘಟನೆ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ನಡೆದಿದೆ.
ಶಾಖಾಪುರ ಗ್ರಾಮದ ರಾಮಣ್ಣ ಯಲಬುರ್ತಿ ಮನೆಗೆ ತೆರಳಿದ್ದರು. ಆರೋಗ್ಯ ಸಿಬ್ಬಂದಿ ನೋಡುತ್ತಿದ್ದಂತೆ ಮನೆಯ ದೇವರ ಜಗಲಿ ಮೇಲಿದ್ದ ಗಂಟೆಗಳನ್ನು ಹಿಡಿದು ದೇವರು ಬಂದವನಂತೆ, ಕುದರೆ..ಕುದರೆ ಎನ್ನುತ್ತಲೇ ಕುದರೆ ಓಡಾಡಿದರು. ಈ ವಿಲಕ್ಷಣ ಪ್ರಸಂಗಕ್ಕೆ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು. ಆದಾಗ್ಯೂ ರಾಮಣ್ಣ ಮನವೋಲೈಸಿ ಲಸಿಕೆ ಹಾಕಲು ಕುಟುಂಬದವರೊಟ್ಟಿಗೆ ಪ್ರಯತ್ನಿಸಿದರೂ ಪ್ರಯೋಜನೆ ಆಗಲಿಲ್ಲ. ಹೀಗಾಗಿ ಆರೊಗ್ಯ ಸಿಬ್ಬಂದಿ ರಾಮಣ್ಣ ಯಲಬುರ್ತಿಗೆ ಲಸಿಕೆ ಹಾಕದೇ ವಾಪಸ್ಸಾದರು.
ಈ ಕುರಿತು ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ ವಡ್ಡರ ಪ್ರತಿಕ್ರಿಯಿಸಿ, ಶಾಖಾಪೂರ ಗ್ರಾಮದ ರಾಮಣ್ಣ ಯಲಬುರ್ತಿ ಅವರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಹೋದಾಗ, ತನಗೆ ಹೃಧಯ ಕಾಯಿಲೆ ಇದ್ದು ಲಸಿಕೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ. ಆದರೂ ಹೃದಯ ಕಾಯಿಲೆ ಇದ್ದರೂ ಏನೂ ಆಗಲು ಎಂದು ಲಸಿಕೆ ಹಾಕಲು ಯತ್ನಿಸಿದೆವು. ಆದರೆ ಆ ವ್ಯಕ್ತಿಮೈಯಲ್ಲಿ ದೇವರು ಬಂದು ಕುಣಿಯತೊಡಗಿದ್ದ. ವ್ಯಕ್ತಿಯ ವಿಚಿತ್ರ ವರ್ತನೆಗೆ ನಾವು ಲಸಿಕೆ ಮಾಡಲಿಲ್ಲ ಎಂದರು.
ಕೆ.ಬೋದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ ವಡ್ಡರ, ಮಹಿಳಾ ಪೇದೆ ಮುತ್ತಮ್ಮ ಸೇರಿದಂತೆ ಆಶಾ ಕಾರ್ಯರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.