ಪತಿಯ ಜೀವರಕ್ಷಣೆಗೆ ಮಾಂಗಲ್ಯದಲ್ಲಿನ ಹವಳ ತುಂಡರಿಸಿದರು!
Team Udayavani, Jul 6, 2017, 3:45 AM IST
ಕೊಪ್ಪಳ: ಮಾಂಗಲ್ಯದೊಳಗಿನ ಹವಳ ತುಂಡರಿಸದಿದ್ದಲ್ಲಿ ಪತಿ ಜೀವಕ್ಕೆ ಕಂಟಕ ಎಂಬ ಗಾಳಿ ಸುದ್ದಿ ಮಂಗಳವಾರ ರಾತ್ರಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉತ್ತರ ಕರ್ನಾಟಕದಾದ್ಯಂತ ಸಂಚಲನ ಸೃಷ್ಟಿಸಿತು. ಇದನ್ನು ನಂಬಿದ ಮುತ್ತೈದೆಯರು ರಾತ್ರೋ ರಾತ್ರಿ ತಮ್ಮ ಮಾಂಗಲ್ಯ ಸರದಲ್ಲಿನ ಕೆಂಪು ಹರಳುಗಳನ್ನು ಒಡೆದು ಹಾಕತೊಡಗಿದರು. ಕೊಪ್ಪಳ,
ದಾವಣಗೆರೆ, ರಾಯಚೂರು, ಬಾಗಲಕೋಟೆ ಸೇರಿದಂತೆ ಮಧ್ಯ ಉತ್ತರ ಕರ್ನಾಟಕದಾದ್ಯಂತ ಇದೊಂದು ಸಮೂಹ ಸನ್ನಿಯಂತೆ ಹರಡಿತು.
ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಮಾಂಗಲ್ಯದಲ್ಲಿ ಕೆಂಪು ಹರಳು ಧರಿಸಿದ್ದರೆ, ಅದು ಜೀವಂತವಾಗಿರುತ್ತೆ. ನಾನಾ ರೀತಿಯಲ್ಲಿ ಶಬ್ದ ಮಾಡಿಸುತ್ತೆ. ಇದನ್ನು ಧರಿಸಿದರೆ ಪತಿಯ ಜೀವಕ್ಕೆ ಕಂಟಕವಿದೆ. ಕೂಡಲೇ ಇದನ್ನು ಒಡೆದು ಹಾಕಿ ಎನ್ನುವ ಮಾತು ಮಹಿಳೆಯರ ಕಿವಿಗೆ ಬೀಳತೊಡಗಿತು. ಹೀಗೆ ಮಾಡದಿದ್ದರೆ ಪತಿಯ ಜೀವಕ್ಕೆ ಕಂಟಕ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಯಾವುದೋ ಊರಿನಲ್ಲಿ ಐವರು ಜೀವ ಕಳೆದುಕೊಂಡಿದ್ದಾರಂತೆ ಎಂಬ ಮಾತುಗಳು ಹರಿದಾಡಿದವು. ಕೆಲವರು ತಮ್ಮ
ಸಂಬಂಧಿ ಕರ ಮನೆಗೆಲ್ಲ ತಡರಾತ್ರಿ ಕರೆ ಮಾಡಿ ಮಾಹಿತಿ ನೀಡಿದರು. ಒಬ್ಬರಿಂದ ಮತ್ತೂಬ್ಬರಿಗೆ ಈ ಸುದ್ದಿ ಹರಡಿ ಬೆಳಗಿನ ಜಾವದವರೆಗೂ ಜಾಗರಣೆ ಮಾಡುವಂತೆ ಮಾಡಿತು. ಮೊಬೈಲ್,ವಾಟ್ಸಪ್‌ಗ್ಳಲ್ಲಿ ವಿವಿಧ ನಮೂನೆಯ ಸುದ್ದಿಗಳು ಹರಿದಾಡತೊಡಗಿದವು.ಇದನ್ನು ನಂಬಿದ ಮುತೈದೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಕೊರಳಲ್ಲಿನ ತಾಳಿ ತೆಗೆದು ಅದರಲ್ಲಿ ಜೋಡಿಸಿದ್ದ ಹರಳುಗಳನ್ನು ಕೂಡಲೇ ಒಡೆದು ಹಾಕಿ ಪತಿರಾಯರಿಗೆ ಜೀವರಕ್ಷೆ ಕೊಡಲು ದೇವರ ಮೋರೆ ಹೋದ ಪ್ರಸಂಗಗಳೂ ನಡೆದವು. ಕೆಲವು ವಿದ್ಯಾವಂತ ಮಹಿಳೆಯರೂ ಮಾಂಗಲ್ಯದಲ್ಲಿದ್ದ ಹವಳ ಜಜ್ಜಿ ಮುರಿದುಕೊಂಡರು. ಬುಧವಾರ ಬೆಳಗ್ಗೆ ಈ ವಿಚಾರ ಮತ್ತಷ್ಟು ವೇಗ ಪಡೆದಿದ್ದು, ಆಗಲೂ ಸಾಕಷ್ಟು ಮಹಿಳೆಯರು ತಮ್ಮ ಮಾಂಗಲ್ಯದಲ್ಲಿದ್ದ ಹವಳ ತೆಗೆದು ಜಜ್ಜಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಇದೊಂದು ವದಂತಿ ಎಂಬ ಸತ್ಯ ಸಂಗತಿ ಬಯಲಾಯಿತು. ಬೆಳಗ್ಗೆ ಸತ್ಯಾಂಶ ತಿಳಿದ ಬಳಿಕ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ.
ತಾಳಿಯಲ್ಲಿರುವ ಹವಳಗಳನ್ನು ಅರ್ಧ ಗಂಟೆಯೊಳಗೆ ಜಜ್ಜಿ ಹೊರಚೆಲ್ಲಿ. ಇಲ್ಲದಿದ್ದರೆ ನಿಮ್ಮ ಪತಿಗೆ ಸಾವು ಬರುತ್ತದೆ ಎಂದು ಸಂಬಂಧಿಕರು ಹೇಳಿದ್ದರು.ಅದಕ್ಕೆ ಹವಳ ಜಜ್ಜಲು ಹೋಗಿ ಚಿನ್ನವನ್ನೂ ಮುರಿದು ಎಸೆದಿದ್ದೇವೆ.
– ಗೀತಾ ಹಾದಿಮನಿ, ಮಾರನಬಸರಿ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.