ಮಾಸ್ಕ್ ಬಳಸಿ ಕೋವಿಡ್ -ಕ್ಷಯ ಮುಕ್ತಗೊಳಿಸಿ: ಲಿಂಗರಾಜು
Team Udayavani, Jun 19, 2020, 6:26 AM IST
ಕೊಪ್ಪಳ: ಮಾಸ್ಕ್ ಬಳಕೆ ಮಾಡಿ ಕೋವಿಡ್ ಮತ್ತು ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಡಿಎಚ್‌ಒ ಡಾ| ಲಿಂಗರಾಜು ಟಿ. ಹೇಳಿದರು.
ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಗುರುವಾರ ನಡೆದ ಮಾಸ್ಕ್ (ಮುಖಗವಸ) ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಸ್ಕ್ ಬಳಕೆಯಿಂದ ಕೋವಿಡ್ –ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಪ್ರಸ್ತುತ ಕೋವಿಡ್ ವೈರಸ್ ಖಾಯಿಲೆ ಹರಡಿದೆ. ಅದನ್ನು ಜಿಲ್ಲೆ ಮತ್ತು ದೇಶದಿಂದ ಮುಕ್ತ ಗೊಳಿಸಬೇಕಾದರೆ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಮಹೇಶ ಎಂ.ಜಿ ಮಾತನಾಡಿದರು. ಜಾಗೃತಿ ಜಾಥಾದಕ್ಕು ಆಶಾ, ಇಲಾಖೆಯ ಸಿಬ್ಬಂದಿ ವರ್ಗವು ಮಾಸ್ಕ್ ಧರಿಸುವ ಬಗ್ಗೆ ಘೋಷಣೆ ಕೂಗುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಡಾ| ಎಸ್.ಬಿ. ದಾನರೆಡ್ಡಿ, ಡಾ.ಜಂಬಯ್ಯ ಬಿ., ಡಾ| ವಿರುಪಾಕ್ಷರೆಡ್ಡಿ ಮಾದಿನೂರು, ಡಾ|ಗೌರಿಶಂಕರ, ಡಾ| ಎಸ್.ಕೆ ದೇಸಾಯಿ, ಡಾ| ಇರ್ಪಾನ್ ಅಂಜುಮ್, ಡಾ| ರಾಮಾಂಜನೇಯ, ನಾಗರಾಜ ಜುಮ್ಮನ್ನವರ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.