ಸುಮಂಗಲಿಯರಿಗೆ ಉಡಿ ತುಂಬುವ ಮೂಲಕ ಶಾಸಕ ಪರಣ್ಣ ಮುನವಳ್ಳಿ ಹುಟ್ಟುಹಬ್ಬ
Team Udayavani, May 1, 2022, 7:22 PM IST
ಗಂಗಾವತಿ: ಎರಡು ಅವಧಿಯಲ್ಲೂ ಕ್ಷೇತ್ರದ ಜನರು ತಮ್ಮನ್ನು ಶಾಸಕರನ್ನಾಗಿ ಮಾಡುವ ಮೂಲಕ ಅವರ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಶೈಕ್ಷಣಿಕ, ಆರೋಗ, ನೀರಾವರಿ ಸೇರಿ ಜನರ ಅಗತ್ಯಗಳಿಗೆ ದಿನದ 24 ಗಂಟೆಯೂ ಅವರ ಸೇವೆ ಮಾಡಲು ಸಿದ್ಧ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ರವಿವಾರ ನಗರದ ಶ್ರೀಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಜನ್ಮದಿನದ ನಿಮಿತ್ತ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ 1001 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿ ಮಠಾಧೀಶರು ಹಾಗೂ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೇರೆ ಊರಿನಿಂದ ಆಗಮಿಸಿದ ತಮ್ಮ ಕುಟುಂಬಕ್ಕೆ ಗಂಗಾವತಿ ನಗರ ಹಾಗೂ ಇಡೀ ಕ್ಷೇತ್ರದ ಜನರು ಸಂಘ ಸಂಸ್ಥೆಯವರು ವಿವಿಧ ಪಕ್ಷದ ಮುಖಂಡರು ಮತ್ತು ವಿವಿಧ ಧರ್ಮದ ಗುರುಗಳು ಆಶೀರ್ವಾದ ಮಾಡಿ ಬೆಳೆಸಿದ್ದರಿಂದ ಎರಡು ಭಾರಿ ಗಂಗಾವತಿಯ ಶಾಸಕನಾಗಿ ಜನರ ಸೇವೆ ಮಾಡುವ ಸೌಭಾಗ್ಯ ಲಭಿಸಿದೆ. ಜನರು ಕೊಟ್ಟ ಅವಕಾಶವನ್ನು ಬಳಸಿಕೊಂಡು ಗಂಗಾವತಿಯಲ್ಲಿ ಶೈಕ್ಷಣಿಕ, ಆರೋಗ್ಯ, ರಸ್ತೆ, ಮೂಲಸೌಕರ್ಯ, ಇತಿಹಾಸ ಪ್ರಸಿದ್ಧ ಅಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅನ್ಯ ಊರುಗಳಿಗೆ ಹೋಗುವುದನ್ನು ತಪ್ಪಿಸಲು ಇಂಜಿನಿಯ ರಿಂಗ್ ಹಾಗೂ ಸ್ನಾತಕೋತ್ತರ ಕೋರ್ಸ್ ಗಳನ್ನು ಮಂಜೂರಿ ಮಾಡಲಾಗಿದೆ. ಡಾ|ಬಿ.ಆರ್.ಅಂಬೇಡ್ಕರ್ ಅವರು ಹೇಳುವಂತೆ ಶಿಕ್ಷಣದ ಮೂಲಕ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಸೌಕರ್ಯ ಕಲ್ಪಿಸಲಾಗಿದೆ. ಜಾತಿ ಜನಾಂಗ ಎಂಬ ಬೇಧ ಮಾಡದೇ ಸರ್ವರಿಗೂ ಅನುದಾನ ಕಲ್ಪಿಸಲಾಗಿದೆ. ತಮ್ಮ ಕುಟುಂಬ ಗಂಗಾವತಿಯ ಸಮಸ್ತ ಜನರ ಆಶೀರ್ವಾದದೊಂದಿಗೆ ಮುಂದೆಯೂ ಕಾರ್ಯ ಮಾಡಲಿದೆ. ತಮ್ಮ ಜನ್ಮದಿನದ ನಿಮಿತ್ತ ಕ್ಷೇತ್ರದ ವಿವಿಧ ಊರುಗಳ ಸುಮಂಗಲಿಯರಿಗೆ ಉಚಿಡಿ ತುಂಬುವ ಮೂಲಕ ಅವರ ಆಶೀರ್ವಾದವನ್ನು ಸ್ನೇಹಜೀವಿ ಸಂಸ್ಥೆಯವರು ಕೊಡಿಸಿದ್ದಾರೆ. ಜನ್ಮದಿನದ ಸಂದರ್ಭದಲ್ಲಿ ಸನ್ಮಾನಿಸಿದ ಮತ್ತು ಶುಭ ಕೋರಿದವರಿಗೆಲ್ಲಾ ಅಭಿನಂದನೆಗಳು. ಕ್ಷೇತ್ರದ ಇನ್ನಷ್ಟು ಸಮಗ್ರ ಪ್ರಗತಿಗೆ ಪಕ್ಷ, ಜಾತಿ ಮರೆತು ಸಲಹೆ ಸೂಚನೆ ನೀಡುವಂತೆ ಮುನವಳ್ಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಬ್ಬಾಳ ಬ್ರಹನ್ಮಠದ ನಾಗಭೂಷಣಶಿವಾಚಾರ್ಯ ಸ್ವಾಮೀಜಿ, ಅರಳಿಹಳ್ಳಿಯ ಗವಿಸಿದ್ದಯ್ಯ ತಾತಾ, ಸುಳೇಕಲ್ ಮಠದ ಶ್ರೀಗಳು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಮುಖಂಡರಾದ ಮನೋಹರಗೌಡ, ವಿಜಯಕುಮಾರ ಗದ್ದಿ, ಗಂಗಣ್ಣ ಮುನವಳ್ಳಿ, ರಾಘವೇಂದ್ರ ಶೆಟ್ಟಿ, ಚನ್ನಪ್ಪ ಮಳಗಿ, ಹುಲಿಗೆಮ್ಮ, ರೇಖಾ ರಾಯಬಾಗಿ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.