ನಿಡಶೇಸಿ ಕೆರೆ ಕೆಲಸ ರಾಜ್ಯಕ್ಕೆ ಮಾದರಿ


Team Udayavani, Nov 30, 2019, 3:29 PM IST

kopala-tdy-2

ಕುಷ್ಟಗಿ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದಲ್ಲಿ ನಿಡಶೇಸಿ ಕೆರೆ ಅಭಿವೃದ್ಧಿ ಕಾರ್ಯ ಸರ್ಕಾರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.

ತಾಲೂಕಿನ ನಿಡಶೇಸಿ ಕೆರೆ ಅಭಿವೃದ್ಧಿ ಬಳಿಕ ತುಂಬಿರುವ ಹಿನ್ನೆಲೆಯಲ್ಲಿ ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕೆರೆ ಅಭಿವೃದ್ಧಿಯನ್ನು ಕಡಿಮೆ ಹಣದಲ್ಲೂ ಈ ರೀತಿಯಾಗಿ ಮಾಡಬಹುದು ಎಂಬುದು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಿರಿ. ಸರ್ಕಾರದ ಎಸ್‌.ಆರ್‌ ದರದ ಪ್ರಕಾರ ಅಂದಾಜು ವೆಚ್ಚ ಸಮೀಕರಿಸಿ, ಸಣ್ಣ ನೀರಾವರಿ ಇಲಾಖೆ ಟೆಂಡರ್‌ ನಲ್ಲಿ ಈ ದರದಲ್ಲಿ ಮಾಡಬಹುದಾಗಿದೆ ಎಂದುಉಲ್ಲೇಖೀಸಬಹುದಾಗಿದೆ. ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ, ಲೆಕ್ಕ ಪತ್ರ ನಿರ್ವಹಣೆಯ ರೀತಿಯ ನಿಖರ ವಿವರಗಳನ್ನು ತಮಗೆ ನೀಡಿದರೆ ಅದು ಮುಂದಿನ ದಿನಗಳಲ್ಲಿ ರೆಫರೆನ್ಸ್‌ ತರಹ ಆಗಲಿದೆ ಎಂದರು.

ಈ ಮಾದರಿ ಕೆಲಸವನ್ನು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತರಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ಆಗಮಿಸಿ ಪರಿಶೀಲಿಸಿದ್ದು, ಸಂಬಂಧಿ ಸಿದ ಸಚಿವರು ಈಕೆರೆಯನ್ನು ನೋಡಿ ಹೋಗಿದ್ದಾರೆ. ಮಾದರಿ ಕೆಲಸ ಕುರಿತು ಇತರೇ ಜಿಲ್ಲೆಗಳಿಗೆ ಮಾಹಿತಿ ಹೋಗಿದೆ. ಕೆರೆ ಅಭಿವೃದ್ಧಿ ಸಂತಸ ತಂದಿದ್ದು, ಊರಿಗೆ ಅಷ್ಟೇ ಅಲ್ಲ ದೇಶಕ್ಕೆ ಪ್ರೇರಣೆಯಾಗಿದೆ. ನಿಡಶೇಸಿ ಕೆರೆ ಅಭಿವೃದ್ಧಿಯಿಂದ ಊರಿಗೆ ಹೆಮ್ಮೆ ತಂದಿದೆ. ಈ ಕೆರೆಯ ಅಭಿವೃದ್ಧಿ ಸರ್ಕಾರದಿಂದ ಸಾಧ್ಯವಾಗಿಲ್ಲ

ಎನ್ನುವುದು ಎಲ್ಲೋ ನೋವಿತ್ತು, ಆದರೆ ಜನರ, ಊರಿನವರ ಚಿಕ್ಕಚಿಕ್ಕ ಸಹಾಯದಿಂದ ಈ ದೊಡ್ಡ ಕೆಲಸ ನೆರವೇರಿದೆ. ಸರ್ಕಾರದಿಂದ ಉದ್ಯಾನವನ ಅಭಿವೃದ್ಧಿಗೆ 1.50 ಕೋಟಿ ರೂ. ಮಂಜೂರಾಗಿರುವುದು ತೃಪ್ತಿ ತಂದಿದೆ ಎಂದರು. ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮಾತನಾಡಿ, ಯಾವುದೇ ವ್ಯಕ್ತಿ ನಿಷ್ಟುರ, ಹಣಕಾಸುವ್ಯವಹಾರದಲ್ಲಿ 1 ರೂ. ಲೋಪವಾಗದಂತೆ ನಿರ್ವಹಿಸಿದರೆ ಹೆಸರು ಬರುತ್ತದೆ ಎನ್ನುವುದಕ್ಕೆನಿಡಶೇಸಿ ಕೆರೆ ಅಭಿವೃದ್ಧಿ ಕಾರ್ಯ ಸಾಕ್ಷಿಯಾಗಿದೆ.ಯಾವೂದೇ ಸರ್ಕಾರ ಬಂದಿರಬಹುದು ಹಣಕಾಸಿನ ತೊಂದರೆ ಇಲ್ಲ, ಕೆರೆಯ ಮುಂದಿನಅಭಿವೃದ್ಧಿಗೆ ಪೂರಕವಾದ ಕ್ರಿಯಾಯೋಜನೆಯಪ್ರಸ್ತಾವನೆ ಸಲ್ಲಿಸಿದರೆ ಆ ಮೂಲಕ ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವೈಯಕ್ತಿಕ ಕೆಲಸಕ್ಕೆ ತೃಪ್ತಿ, ಸಾರ್ವಜನಿಕರ ಕೆಲಸಕ್ಕೆ ಆತ್ಮಸಂತೃಪ್ತಿ ಆಗುತ್ತದೆ ಎಂಬುದಕ್ಕೆ ನಿಡಶೇಸಿ ಕೆರೆ ಕೆಲಸ ನಿದರ್ಶನವಾಗಿದೆ.ನಿರೀಕ್ಷೆಯಂತೆ ಹಿಂಗಾರು ಮಳೆಯಾಗಿ ಕೆರೆ ತುಂಬಿರುವುದು ಅಕ್ರಮ ಮರಳು ಸಾಗಣೆ ತಪ್ಪಿಸಿದಂತಾಗಿದೆ ಎಂದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ನೀರಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ನೀರನ್ನು ದುಡ್ಡುಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಿಸಿದ್ದೇವೆ. ಬಿಜಕಲ್‌ ಶ್ರೀಗಳಿಗೆ ಮಠ ಇಲ್ಲದಿದ್ದರೂ ನಿಡಶೇಸಿ ಕೆರೆ ಅಭಿವೃದ್ಧಿಗೆ 1 ಲಕ್ಷ ರೂ. ನೀಡಿದ್ದಾರೆ. ಹಲವಾರು ಜನರು ಉದಾರವಾಗಿ ದೇಣಿಗೆ ನೀಡಿರುವುದು ನಮ್ಮಲ್ಲಿ ಶ್ರೀಮಂತರು ಇಲ್ಲದಿದ್ದರೂ, ಹೃದಯವಂತರಿದ್ದಾರೆ ಎನ್ನುವುದಕ್ಕೆ ಹೆಮ್ಮೆ ಇದೆ ಎಂದರು. ಮಾಜಿ ಶಾಸಕ ಕೆ. ಶರಣಪ್ಪ, ತಹಶೀಲ್ದಾರ್‌ ಎಂ.ಸಿದ್ದೇಶ, ಸಿಪಿಐ ಜಿ. ಚಂದ್ರಶೇಖರ, ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪರಸಪ್ಪ ಕತ್ತಿ ಮತ್ತಿತರಿದ್ದರು. ಪ್ರಾ| ಟಿ.ಬಸವರಾಜ್‌ ನಿರೂಪಿಸಿದರು. ಕಲ್ಲೇಶ ತಾಳದ ಸ್ವಾಗತಿಸಿದರು.

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.