ದೇಶದ ಪ್ರಗತಿಗಾಗಿ ಮೋದಿ ಬೆಂಬಲಿಸಿ
Team Udayavani, Apr 4, 2019, 5:32 PM IST
ಹಾನಗಲ್ಲ: ದೇಶದಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯಾದರೆ ಮಾತ್ರ ಜಗತ್ತಿನ ಎಲ್ಲ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಅಗತ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ತಿಳವಳ್ಳಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಅಭಿವೃದ್ಧಿಶೀಲ ರಾಷ್ಟ್ರದ ಸಾಲಿನಲ್ಲಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರದ ಅವಧಿಯಲ್ಲಿ ಸಕ್ಕರೆ ಹಾಗೂ ಮೊಬೈಲ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹಣ್ಣು-ತರಕಾರಿ, ಮೀನುಗಾರಿಕೆ ಹಾಗೂ ಕಬ್ಬಿಣ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ 4ನೇ ಸ್ಥಾನದಲ್ಲಿದೆ.
ಗುಜರಾತ್ ಮಾದರಿಯಲ್ಲಿ ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಲು ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸಲು ಸಿದ್ಧವಾಗಿವೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಈ ಎಲ್ಲ ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ. ಮುದ್ರಾ ಯೋಜನೆಯಡಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಹಾವೇರಿ ಜಿಲ್ಲೆಯಲ್ಲಿ 42964 ಫಲಾನುಭವಿಗಳಿಗೆ 842 ಕೋಟಿ ಸಾಲ ನೀಡಲಾಗಿದೆ. 7 ಐಐಟಿ, 7 ಐಐಎಂ, 14 ಐಐಐಟಿ, 1 ಎನ್‌ಐಟಿ, 103 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ ಹಾಗೂ 62 ನವೋದಯ ವಿದ್ಯಾಲಯಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಪ್ರಥಮ ಆದ್ಯತೆ ನೀಡಿದೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಯಾವುದೇ ಭ್ರಷ್ಟಾಚಾರವಿಲ್ಲದ ಪಾರದರ್ಶಕ ಆಡಳಿತ ನೀಡಿದ ಪ್ರಧಾನಿ ಮೋದಿಯವರನ್ನು ಮತ್ತೂಮ್ಮೆ ದೇಶದ ಪ್ರಧಾನಿ ಮಾಡಲು ಇಡೀ ದೇಶದ ಜನ ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವುದೇ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ಮತದಾರರು ಒಪ್ಪುವುದಿಲ್ಲ. ಸಾಮಾಜಿಕ ಜಾಲತಾಣಗಳು ಪ್ರತಿದಿನವೂ ಎಲ್ಲ ವಿಷಯಗಳನ್ನೂ ಸ್ಪಷ್ಟಪಡಿಸುತ್ತಿವೆ. ದೇಶದ ಭದ್ರತಾ ವ್ಯವಸ್ಥೆಯಲ್ಲಿ ಸೈನಿಕರು ಮೋದಿ ಅವಧಿಯಲ್ಲಾದ ಬದಲಾವಣೆಗಳನ್ನು ಮರೆಯಲು ಸಾಧ್ಯವಿಲ್ಲ. ಕಪ್ಪುಹಣದ ನಿಗ್ರಹಕ್ಕಾಗಿ ನೋಟ್ ಬ್ಯಾನ್ ಕ್ರಮ ಕೈಗೊಳ್ಳಲಾಗಿದೆ. ಅದನ್ನು ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪಾಗಿ ಬಿಂಬಿಸಿ ದಾರಿ ತಪ್ಪಿಸುತ್ತಿದೆ.
ಆದರೆ ಇದರಿಂದ ಬಡ ಜನತೆಗೆ ಅನುಕೂಲವಾಗಲಿದೆ. ರೈತರಿಗಾಗಿ ಬೇವು ಮಿಶ್ರಿತ ಯೂರಿಯಾ ರಸಗೊಬ್ಬರ ನಿರಂತರವಾಗಿ ದೊರೆಯುವಂತೆ ವ್ಯವಸ್ಥೆಗೊಳಿಸಿದ್ದಾರೆ. ಫಸಲ್ ಭಿಮಾ ಯೋಜನೆ ಮೂಲಕ ಭದ್ರತೆ ಒದಗಿಸಿದ್ದಾರೆ. ರೈತರ ಫಸಲಿಗೆ ಬೆಂಬಲಬೆಲೆ ಘೋಷಿಸಿದ್ದಾರೆ. ಕಡಿಮೆ ದರದಲ್ಲಿ ವಿಮಾ ಸೌಲಭ್ಯ ನೀಡಿದ್ದಾರೆ. ದೇಶದ 23 ಕೋಟಿ ಜನ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ. ಎಲ್ಲ ಸಹಾಯಧನವನ್ನೂ ನೇರವಾಗಿ ಅವರವರ ಬ್ಯಾಂಕ್ ಖಾತೆಗೆ ಜಮಾ ಆಗುವ ವ್ಯವಸ್ಥೆ ಮಾಡಿದ್ದರಿಂದ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಲಾಗಿದೆ ಎಂದ ಅವರು, ಹಿಂದೆ ಎಚ್.ಕೆ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಹಾನಗಲ್ಲ ತಾಲೂಕಿನ ತಿಳವಳ್ಳಿ ಸುತ್ತಲಿನ 44 ಗ್ರಾಮಗಳನ್ನು ಮುಳುಗಿಸಿ ಗದಗ ಜಿಲ್ಲೆಗೆ ನೀರು ಪಡೆಯುವ ಯೋಜನೆ ಜಾರಿಗೊಳಿಸಿದ್ದರು. ಇದಕ್ಕಾಗಿ ಡಿ.ಆರ್. ಪಾಟೀಲ ಅವರನ್ನು ಬೆಂಬಲಿಸಿದರೆ ನೀವು ಮುಳುಗುವುದು ಖಚಿತ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ, ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಸಿದ್ದರಾಜ ಕಲಕೋಟಿ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಶಿವಲಿಂಗಪ್ಪ ತಲ್ಲೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಯೋಗಿ ಒಡೆಯರ, ಗಣೇಶಪ್ಪ ಕೋಡಿಹಳ್ಳಿ, ರತ್ನಮ್ಮ ಗುಡ್ಡದಮುಳಥಳ್ಳಿ, ಮಹೇಶ ಬಣಕಾರ, ಗುತ್ತೆಪ್ಪ ಬಾರ್ಕಿ, ಮಾಲತೇಶ ಗಂಟೇರ, ಅಶೋಕ ಯಮನೂರ, ರೆಹಮಾನಸಾಬ ಸವಣೂರ, ಮಾರುತಿ ಈಳಿಗೇರ, ಜಗದೀಶ ಚಂದಣ್ಣನವರ, ಮಮತಾ ಎಲಿ, ಪ್ರಭಾವತಿ, ಭರಮಪ್ಪ ಕುರಬರ, ಜಾನಕಮ್ಮ ಲಮಾಣಿ, ಕುಮಾರ ಲಕೊಜಿ, ಗಿರೀಶ ಹರಿಜನ, ಮಧುಸೂದನ ಮಹಾಬಳೇಶ್ವರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.