ಹೆತ್ತ ತಾಯಿಗೆ ಮಗಳಿಂದಲೇ ಮೋಸ
Team Udayavani, Jul 31, 2021, 6:05 PM IST
ಕೊಪ್ಪಳ: ಕುಕನೂರು ಪಟ್ಟಣದ ವಾರ್ಡ್ ನಂ.1ರ ಆಸ್ತಿಯ ವಿಚಾರದಲ್ಲಿ ಹೆತ್ತ ತಾಯಿಗೆ ಮಗಳು ಮೋಸ ಮಾಡಿ ಆಸ್ತಿಯನ್ನು ತನ್ನ ಹೆಸರಿನಲ್ಲಿ ದಾನವಾಗಿ ಬರೆಯಿಸಿಕೊಂಡ ಘಟನೆ ಹಿರಿಯ ನಾಗರಿಕರ ಹಿತರಕ್ಷಣಾ ನ್ಯಾಯ ಮಂಡಳಿ ಮುಂದೆ ಬಯಲಿಗೆ ಬಂದಿದ್ದು, ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು ಎಲ್ಲವನ್ನೂ ಆಲಿಸಿ ನೊಂದ ತಾಯಿಗೆ ಪುನಃ ಆಸ್ತಿ ಸೇರುವಂತೆ ಆದೇಶ ಮಾಡಿದ್ದಾರೆ.
ಕುಕನೂರಿನ ಬಸಮ್ಮ ತಳವಾರ ಎನ್ನುವ ತಾಯಿಗೆ ನಾಗಮ್ಮ ಬಿಜಕಲ್ ಎನ್ನುವ ಮಗಳೇ ಮೋಸ ಮಾಡಿದ್ದಾಳೆ. ಬಸಮ್ಮ ತಳವಾರ ಅವರು ಕುಕನೂರು ಪಟ್ಟಣದ 1ನೇ ವಾರ್ಡಿನಲ್ಲಿ ವಾಸವಾಗಿದ್ದಾರೆ. ಅವರ ಮನೆ ಮುಂದೆ ಖಾಲಿ ಜಾಗವಿದ್ದು, ಅದನ್ನು ತಾಯಿ ಬಸಮ್ಮಳಿಗೆ ಮಾಸಾಶನ ಮಾಡಿಸಿ ಕೊಡುವುದಾಗಿ ಹೇಳಿ 2019ರಲ್ಲಿ ತಾಯಿಯನ್ನು ನೋಂದಣಾಧಿಕಾರಿ ಕಚೇರಿಗೆ ಕರೆ ತಂದು ಮಗಳು ನಾಗಮ್ಮ ಬಿಜಕಲ್ ದಾನಪತ್ರ ರೂಪದಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಳು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಾದ ಬಳಿಕ ತಾಯಿ ಬಸಮ್ಮಳ್ಳಿಗೆ ಮನೆಯಿಂದ ಹೊರ ನಡೆಯುವಂತೆ ದಬಾಯಿಸಿದ್ದಾಳೆ. ಇದರಿಂದ ನೊಂದ ಮಹಿಳೆ ಇದು ನನ್ನ ಮನೆಯೆಂದು ಹೇಳಿದ್ದಾಳೆ. ಆಗ ಆಸ್ತಿ ಮಗಳ ಹೆಸರಿನಲ್ಲಿ ಇರುವುದು ಬೆಳಕಿಗೆ ಬಂದಿದೆ.
ತಾಯಿ ಬಸಮ್ಮ ತಳವಾರ ಅವರು ಸ್ಥಳೀಯ ದೇವಸ್ಥಾನದಲ್ಲಿ ವಾಸ ಮಾಡಿ ಕೊನೆಗೆ ಎಸಿ ನೇತೃತ್ವದಲ್ಲಿನ ಹಿರಿಯ ನಾಗರಿಕರ ಹಿತರಕ್ಷಣಾ ನ್ಯಾಯ ಮಂಡಳಿಗೆ ತನ್ನ ಮಗಳೇ ನನಗೆ ಮೋಸ ಮಾಡಿದ್ದಾಳೆಂದು ದೂರು ನೀಡಿದ್ದಾಳೆ. ಆಗ ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು ಅರ್ಜಿ ವಿಚಾರಣೆ ನಡೆಸಿ ಪ್ರತಿವಾದಿಗಳನ್ನು ಕರೆಯಿಸಿದಾಗ ರಾಮಚಂದ್ರ ಮುಂಡರಗಿ, ನಾಗಮ್ಮ ಅವರನ್ನು ಕರೆಯಿಸಿ ವಿಚಾರಿಸಲಾಗಿ, ದಾಖಲೆಗಳನ್ನು ಪರಿಶೀಲನೆ ಮಾಡಿದ ವೇಳೆ ಆಸ್ತಿ ದಾನ ರೂಪದಲ್ಲಿ ವರ್ಗಾವಣೆಯಾದ ಕುರಿತು ತಿಳಿದು ಬಂದಿದೆ.
ಅರ್ಜಿದಾರಳ ಹೇಳಿಕೆ ಹಾಗೂ ಪ್ರತಿವಾದಿಗಳನ್ನು ವಿಚಾರಿಸಲಾಗಿ ಮೋಸದಿಂದ ಆಸ್ತಿ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದ ಹಿನ್ನೆಲೆಯಲ್ಲಿ ದಾನಕೊಟ್ಟ ಆಸ್ತಿಯನ್ನು ರದ್ದುಪಡಿಸಿ ಪುನಃ ತಾಯಿ ಬಸಮ್ಮ ತಳವಾರ ಅವರ ಹೆಸರಿಗೆ ವರ್ಗಾವಣೆ ಮಾಡುವಂತೆಯೂ ಯಲಬುರ್ಗಾದ ಉಪನೋಂದಣಾಧಿ ಕಾರಿಗಳಿಗೆ ಎಸಿ ಅವರು ಆದೇಶ ಮಾಡಿ ಪತ್ರ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.