Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
ನಂಬಿದವರೇ ನನ್ನ ಕೈಬಿಟ್ಟಿದ್ದಾರೆ.. ಸ್ವಪಕ್ಷದ ವಿರುದ್ಧವೇ ಕರಡಿ ವಾಗ್ದಾಳಿ
Team Udayavani, Mar 19, 2024, 12:39 PM IST
ಕೊಪ್ಪಳ : ಮುಂದಿನ ರಾಜಕೀಯ ನಿರ್ಧಾರಕ್ಕೆ ಗುರುವಾರ ಮಾ 21 ರಂದು ನಿರ್ಧಾರ ಮಾಡುತ್ತೇನೆ. ಅಂದು ಬೆಂಬಲಿಗರ ಸಭೆ ಕರೆದಿರುವೆ. ಬೆಂಬಲುಗರ ಸಭೆಯ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಬಸವರಾಜ ಅವರಿಗೆ ಘೋಷಣೆಯಾಗಿದೆ. ಅವರಿಗೆ ಶುಭ ಕೋರುತ್ತೇನೆ. ನನಗೆ 8 ವಿಧಾನ ಸಭಾ ಕ್ಷೇತ್ರದ ಮುಖಂಡರು ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ಒಂದೇ ಕೂಗು ಅನ್ಯಾಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡರು ಮಾತನಾಡಿದ್ದಾರೆ. ರಾಜ್ಯ ನಾಯಕರು ಸೌಜನ್ಯಕ್ಕೂ ಮಾತನಾಡಿಲ್ಲ. ಈಗ ವಿಜಯೇಂದ್ರ ಮಾತನಾಡಿದರು. ನಾನು ಕೇಳಿದ ಮೂರು ಪ್ರಶ್ನೆಗೆ ಉತ್ತರವಿಲ್ಲ ಎಂದರು.
ನಾನು ಗುರುವಾರ ಶಾಂತವೀರ ಕಲ್ಯಾಣ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವೆ. ಟಿಕೆಟ್ ಘೋಷಣೆ ನಂತರ ಆರ್ ಅಶೋಕ, ವಿಜಯೇಂದ್ರ, ಯಡಿಯೂರಪ್ಪ, ಬೊಮ್ಮಾಯಿ ನನ್ನೊಂದಿಗೆ ಮಾತನಾಡಲಿಲ್ಲ . ಯಾವ ಕಾರಣಕ್ಕೆ ಟಿಕೆಟ್ ತಪ್ಪಿದೆ ಎನ್ನುವ ಉತ್ತರವಿಲ್ಲ. ನನಗೆ ರಾಜಕೀಯ ಬಿಟ್ಟು ಬೇರೆ ಏನೂ ಗೊತ್ತಿಲ್ಲ.ನಾನು ಆರೋಗ್ಯವಾಗಿ ಇರುವ ವರೆಗೂ ರಾಜಕೀಯದಲ್ಲಿ ಇರುವೆ. ಜಿಲ್ಲಾ ಬಿಜೆಪಿ ಮುಖಂಡರ ಮೂಲಕ ಲಾಬಿ ಮಾಡಿ ನನಗೆ ಅವಮಾನ ಮಾಡಿದ್ದಾರೆ. ರಾಜ್ಯ ನಾಯಕರಿಗೆ ನಾನು ಲೆಕ್ಕಕ್ಕಿಲ್ಲ ಎಂದುಕೊಂಡಿದ್ದಾರೆ. ನಿರಂತರವಾಗಿ ಕೆಲಸ ಮಾಡಿ ಜನರ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ನಾನು ಕೆಲಸ ಮಾಡಿದ್ದೇನೆ ಎಂದರು.
ಹೈಕಮಾಂಡ್ ನಡೆಯಿಂದ ನನಗೆ ನೋವು ಆಗಿದೆ. ಇಂದು ರಾಜೇಶ್, ಯಡಿಯೂರಪ್ಪ ಮಾತನಾಡಿದ್ದಾರೆ. ನಾನು ಟಿಕೆಟ್ ಸಿಗುತ್ತದೆ ಎಂದು ನಂಬಿಕೆಕೊಂಡಿದ್ದೆ. ನಂಬಿದವರೇ ನನ್ನ ಕೈಬಿಟ್ಟಿದ್ದಾರೆ ಎಂದರು.
ಡಾ. ಬಸವರಾಜ್ ಗೆ ದೊಡ್ಡನಗೌಡ, ಹಾಲಪ್ಪ, ಬಸವರಾಜ ದಡೇಸಗೂರು ಟಿಕೆಟ್ ಕೊಡಿಸಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ನಾನು ಬಿಜೆಪಿ ಮುಖಂಡತ್ವ ವಹಿಸಲ್ಲ ಈ ಎಲ್ಲ ನಾಯಕರೇ ಮುಖಂಡತ್ವ ವಹಿಸಲಿ . ನೇರವಾಗಿ ನಾನು ಬಿಜೆಪಿ ಅಭ್ಯರ್ಥಿಯ ಪರವಾಗಿ ಇರೋಲ್ಲ. ಲೀಡರ್ ಶಿಪ್ ತೆಗೆದುಕೊಳ್ಳಲ್ಲ ಎಂದರು.
ಕಾಂಗ್ರೆಸ್ ನವರು ಸೌಜನ್ಯಕ್ಕಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಪಡೆ ಬಗ್ಗೆ ಮಾತನಾಡಿಲ್ಲ. ಅಲ್ಲಿ ಏನು ನಡೆಯುತ್ತದೆ ಎಂಬುವುದು ಗೊತ್ತಿಲ್ಲ. ಕಾಂಗ್ರೆಸ್ ಸೇರುವ ಪ್ರಶ್ನೆ ಬಂದಿಲ್ಲ ನಾನು ಗುರುವಾರ ಬೆಂಬಲಿಗರ ಅಭಿಪ್ರಾಯ ಪಡೆದು ನಿರ್ಧಾರ ಮಾಡುವೆ ಬಿಜೆಪಿ ನೇತೃತ್ವದಲ್ಲಿ ಸಭೆ ಕರೆಯುವೆ. ಸಭೆಗೆ ಎಂಟೂ ಕ್ಷೇತ್ರದಿಂದ ಜನತೆ ಬರಲಿದ್ದಾರೆ. ನನ್ನ ನಿರ್ಧಾರ ಅಲ್ಲಿ ಪ್ರಕಟ ಮಾಡುವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.