ಮುಧೋಳ ಕೆರೆ ಹೂಳೆತ್ತಲು ಇಂದು ಚಾಲನೆ
Team Udayavani, May 26, 2019, 12:05 PM IST
ಮುಧೋಳ ಗ್ರಾಮ ಕೆರೆಯ ವಿಹಂಗನ ನೋಟ.
ಯಲಬುರ್ಗಾ: ನಾಲ್ಕು ಗ್ರಾಮಗಳಿಗೆ ಅಂರ್ತಜಲ ಮೂಲವಾಗಿರುವ ತಾಲೂಕಿನ ಮುಧೋಳ ಗ್ರಾಮದ ಕೆರೆ ಹೂಳೆತ್ತುವ ಕಾರ್ಯ ಗ್ರಾಪಂ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮೇ 26ರಂದು ಆರಂಭವಾಗಲಿದೆ.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರಂಭಗೊಳ್ಳಲಿರುವ ಕಾಮಗಾರಿಗೆ ಎರಡು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತದೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಟಿಪ್ಪರ್, ಟ್ರ್ಯಾಕ್ಟರ್‌ಗಳನ್ನು ಕೆಲಸಕ್ಕೆ ಬಿಡಲು ಒಪ್ಪಿಕೊಂಡಿದ್ದಾರೆ. ಈ ಕಾಮಗಾರಿ 25 ದಿನಗಳವರೆಗೆ ನಡೆಯಲಿದೆ.
ನಾಲ್ಕು ಗ್ರಾಮಗಳಿಗೆ ಅನುಕೂಲ: ಈ ಕೆರೆ ಒಟ್ಟು 14 ಎಕರೆ ವ್ಯಾಪ್ತಿ ಹೊಂದಿದೆ. ಮುಧೋಳ ಕೆರೆಯು 4 ಗ್ರಾಮಗಳಿಗೆ ಅಂರ್ತಜಲ ಮೂಲವಾಗಿದೆ. ಮುಧೋಳ, ಕರಮುಡಿ, ಹಿರೇಮ್ಯಾಗೇರಿ ಮತ್ತು ಝಲಜೇರಿ ಸೇರಿದಂತೆ ಇನ್ನಿತರ ಗ್ರಾಮಗಳು ಕೆರೆಯ ಪ್ರಯೋಜನೆ ಪಡೆಯಲಿವೆ.
ಜಾಗೃತಿ: ಕೆರೆ ಹೂಳೆತ್ತುವ ಕಾರ್ಯ ನಿಮಿತ್ತ ಈಗಾಗಲೇ ಗ್ರಾಮಸ್ಥರು ಹಲವಾರು ಪೂರ್ವಭಾವಿ ಸಭೆಗಳನ್ನು ಮಾಡಿದ್ದಾರೆ. ಕೆರೆ ಪುನರುಜ್ಜೀವನ ನಮ್ಮ ಆಶಯ ಎಂಬ ಧ್ಯೇಯ ವಾಖ್ಯೆದೊಂದಿಗೆ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ, ಸಿಬ್ಬಂದಿಗಳು, ಗ್ರಾಮದ ಸರಕಾರಿ ನೌಕರರು, ಗ್ರಾಪಂ ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೆರೆ ಅಭಿವೃದ್ಧಿಗೆ ದೇಣಿಗೆ ನೀಡುತ್ತಿದ್ದಾರೆ.
ಸಮಿತಿ ರಚನೆ: ಕೆರೆಯ ಅಭಿವೃದ್ಧಿಗೋಸ್ಕರವಾಗಿ ಗ್ರಾಮದಲ್ಲಿ ಕೆರೆ ಪುನರುಜ್ಜೀವನ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ 21 ಜನ ಪದಾಧಿಕಾರಿಗಳು ಇದ್ದಾರೆ. ಕೆರೆ ಅಭಿವೃದ್ಧಿಗೆ ಗ್ರಾಪಂ ನರೇಗಾ ಯೋಜನೆಯಡಿ 10 ಲಕ್ಷ ರೂ. ಹಾಗೂ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ರೂ. ನೀಡಿದೆ.
ಮಾದರಿ ಕೆರೆ ನಿರ್ಮಾಣಕ್ಕೆ ಪಣ: ಕೆರೆಯನ್ನು ಸ್ವಚ್ಛಗೊಳಿಸಿ ಮುಳ್ಳು ಕಂಟಿಗಳನ್ನು ತೆರೆವುಗೊಳಿಸಿ ಕೆರೆ ಹೂಳೆತ್ತುವ ಕಾರ್ಯ ನಡೆಯಲಿದೆ. ನಂತರದಲ್ಲಿ ಕೆರೆಗೆ ಸಂಪೂರ್ಣ ಒಡ್ಡು ನಿರ್ಮಿಸಿ ಸುತ್ತಲೂ ತಂತಿಬೇಲಿ ಅಳವಡಿಸಿ ಸಸಿ ನೆಡುವ ಯೋಜನೆಯ ರೂಪರೇಷಗಳನ್ನು ಸಿದ್ಧಪಡಿಸಲಾಗಿದೆೆ.
ಇಂದು ಚಾಲನೆ: ನಿಡಗುಂದಿಕೊಪ್ಪದ ಸಿದ್ದರಾಮ ದೇವರು, ರೋಣದ ಗುಲಗಂಜಿಮಠದ ಗುರುಪಾದ ದೇವರು ಕೆರೆ ಹೂಳೆತ್ತುವ ಕಾರ್ಯಕ್ಕೆ ಮೇ 26ರಂದು ಚಾಲನೆ ನೀಡಲಿದ್ದಾರೆ. ಶಾಸಕ ಹಾಲಪ್ಪ ಆಚಾರ್, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.