ಕಾರ್ಖಾನೆಗಳ ಜತೆ ತಂಗಡಗಿ ನಂಟು: ಮುನವಳ್ಳಿ ಆರೋಪ
•ಮೀಸಲಿಟ್ಟ ಜಾಗಕ್ಕೆ ಭೇಟಿ-ಪರಿಶೀಲನೆ•ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಿ: ಶಾಸಕ ಪರಣ್ಣ
Team Udayavani, Aug 9, 2019, 12:44 PM IST
ಗಂಗಾವತಿ: ಪೌರ ಕಾರ್ಮಿಕರಿಗೆ ಮಂಜೂರಾದ ವಸತಿ ವಿನ್ಯಾಸ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು.
ಗಂಗಾವತಿ: ನಗರದ ಸೌಂದರ್ಯಕ್ಕೆ ಸ್ಪಂದಿಸಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ನಿವೇಶನ ಸೇರಿ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಸರೋಜ ನಗರದಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4.36 ಎಕರೆ ಪ್ರದೇಶದಲ್ಲಿ 120 ಪೌರಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಸರಕಾರ ಒಂದು ಮನೆ ನಿರ್ಮಾಣಕ್ಕೆ 6 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಸದ್ಯ 64 ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಪೌರಾಯಕ್ತರು ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಬೇಕು. 120 ಪೌರಕಾರ್ಮಿಕರಲ್ಲದೇ ಅನ್ಯರಿಗೆ ನಿವೇಶನ ಕೊಡಬಾರದು. ಈಗಾಗಲೇ ಹಕ್ಕುಪತ್ರ ಹೊಂದಿದವರು ಮಾತ್ರ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಇನ್ನೂ 2 ಲಕ್ಷ ರೂ.ಗಳ ಮನೆ ಸಾಲಕ್ಕೆ ನಗರಸಭೆ ಗ್ಯಾರಂಟಿ ನೀಡಿ ವೇತನದಲ್ಲಿ ಸಾಲದ ಕಂತಿನ ಹಣದ ಕಟಾವಿಗೆ ಅವಕಾಶ ಕಲ್ಪಿಸಲಾಗಿದೆ. ಪೌರಕಾರ್ಮಿಕರು ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ನೆರವಾಗಲಿದೆ ಎಂದರು.
ಪೌರಾಯುಕ್ತ ಡಾ| ದೇವಾನಂದ ದೊಡ್ಮನಿ, ನಗರಸಭೆ ಸದಸ್ಯ ನವೀನ ಪಾಟೀಲ್, ಬಿಜೆಪಿ ಮುಖಂಡರಾದ ರಾಜೇಶ್ವರಿ, ವೀರೇಶ ಸುಳೇಕಲ್ ದೇವಪ್ಪ ನಾಯಕ, ಚನ್ನವೀರನಗೌಡ, ಶಿವಪ್ಪ, ಅಭಿಯಂತರ ಆರ್.ಆರ್. ಪಾಟೀಲ್, ಜೋಗದ ಹನುಮಂತಪ್ಪ ನಾಯಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.