ಕುಷ್ಟಗಿ: ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ
Team Udayavani, Dec 23, 2021, 3:09 PM IST
ಕುಷ್ಟಗಿ: ಯಾವೂದೇ ಪಕ್ಷಗಳ ಸರ್ಕಾರಗಳು ಬಂದರೂ, ಅನೇಕ ಹಂತಗಳ ಕೃಷಿಕರ ಸಂಕೀರ್ಣ ಸಮಸ್ಯೆಗಳನ್ನು ನೀಗಿಸಲು ಸಾಧ್ಯವಾಗದೇ, ಸೋಲು ಅನುಭವಿಸಿವೆ ಎಂದು ಚಿಂತಕ ರವಿತೇಜ ಅಬ್ಬಿಗೇರಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕೃಷಿ ಇಲಾಖೆಯ ಸಭಾಂಗಣದಲ್ಲಿ 2020-21ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿನ ವಸ್ತು ಸ್ಥಿತಿ, ವಾತವರಣ, ಮಾರುಕಟ್ಟೆಯ ಸ್ಥಿತಿಗತಿ, ರಾಜಕೀಯ ನಿಲವು, ಧೋರಣೆ ಬೇರೆ ಬೇರೆಯಾಗಿವೆ. ಹಿನ್ನೆಲೆಯಲ್ಲಿ ಸಮನ್ವಯತೆ ಸಾಧಿಸಲು ಅಸಾದ್ಯವಾಗಿದ್ದು, ರೈತರ ಸಮಸ್ಯೆಗಳನ್ನು ಸ್ಪಂಧಿಸಲು ರಾಜಕೀಯ ಪಕ್ಷಗಳು ಹಿಂದು ಮುಂದು ಮಾಡುತ್ತಿವೆ. ಹೀಗಾಗಿ ಇಲ್ಲಿಯವರೆಗೂ ರೈತರ ಬದುಕು ಹಸನುಗೊಳಿಸಲು ಸಾದ್ಯವಾಗಿಲ್ಲ. ಕೃಷಿ ವಲಯದಲ್ಲಿನ ಸವಾಲುಗಳು, ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಇಚ್ಛಾಶಕ್ತಿಯಾಗಿ ಉಳಿದಿಲ್ಲ ಎಂದರು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ಭೇಷರತ್ತಾಗಿ ಹಿಂಪಡೆದಿರುವುದು ಇದಕ್ಕೆ ನಿದರ್ಶನವಾಗಿದೆ. ಈ ಕೃಷಿ ಮಸೂದೆಗಳು ಕಾನೂನು ಆಗಬಾರದು ಎಂದು ರೈತರು ಇಡೀ ವರ್ಷ ದೆಹಲಿಯಲ್ಲಿ ಚಾರಿತ್ರಿಕ ಹೋರಾಟ ಮಾಡಬೇಕಾಯಿತು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಮಾತನಾಡಿ, ಮನುಷ್ಯ ಸತ್ತರೆ ಮಣ್ಣಿನಲ್ಲಿ ಹೂತು ಹಾಕಿದರೆ ಜೀವನ ಕೊನೆಯಾಗುತ್ತಿದೆ. ಆದರೆ ಮಣ್ಣು ಸತ್ತರೆ ಮನುಕುಲವೇ ಕೊನೆಯಾಗಲಿದೆ ಎಂದ ಅವರು, ಆದಷ್ಟು ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ರೈತ ಸಂಘದ ಮಹಿಳಾ ಘಟಕದ ಆದ್ಯಕ್ಷೆ ಮಹಾಂತಮ್ಮ ಪಾಟೀಲ, ಶಿವಪ್ಪ ತಳಗಡೆ, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ತಾಂತ್ರಿಕ ಸಹಾಯಕ ಬಾಲಪ್ಪ ಜಲಗೇರಿ,ಶೇಖರಯ್ಯ ಹಿರೇಮಠ, ಪ್ರಕಾಶ ತಾರಿವಾಳ ಆತ್ಮ ಯೋಜನೆ ವ್ಯವಸ್ಥಾಪಕ ಬಸವರಾಜ ಪಾಟೀಲ ಮತ್ತೀತರಿದ್ದರು.
ಪ್ರಸ್ತಾವಿಕವಾಗಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಾತನಾಡಿ ಪ್ರತಿಯೊಬ್ಬರು ಊಟ ಮಾಡುವ ಮುನ್ನ ಅನ್ನದಾತರನ್ನು ಸ್ಮರಿಸಿ ಊಟ ಮಾಡಬೇಕಿದೆ ಎಂದರು.
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಹನುಮಸಾಗರ ರೈತ ಸಿರಾಜುದ್ದೀನ ಮೂಲಿಮನಿ, ಕುಷ್ಟಗಿ ರೈತ ರಮೇಶ ಕೊನಸಾಗರ, ಹಂಚಿನಾಳದ ರೈತ ಈಶಪ್ಪ ಮೆಳ್ಳಿ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.