ಅಧಿಕಾರಿಗಳ ನಿರ್ಲಕ್ಷ… ರಾಯನ ಕೆರೆಗೆ ಬರಬೇಕಾದ ಅಪಾರ ಪ್ರಮಾಣದ ನೀರು ವ್ಯರ್ಥ
Team Udayavani, Aug 17, 2024, 1:45 PM IST
ತಾವರಗೇರಾ: ತಾವರಗೇರಾ ಪಟ್ಟಣದ ಜೀವನಾಡಿಯಾಗಿರುವ ರಾಯನ ಕೆರೆಗೆ ಬರಬೇಕಾದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹಳ್ಳಗಳು ಸೇರುತ್ತಿರುವ ಘಟನೆ ನಡೆದಿದೆ. ಕಳೆದ ಬುಧವಾರ ರಾತ್ರಿ ಭಾರೀ ಮಳೆಯಾಗಿ. ಈ ವರ್ಷದಲ್ಲಿ ಅತಿ ಹೆಚ್ಚಿನ ಮಳೆಯಾಗಿ ಫೀಡರ್ ಚಾನೆಲ್ ಮೂಲಕ ಬರಬೇಕಾಗಿದ್ದ ನೀರು ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪಕ್ಕದ ಹಳ್ಳಿಗೆ ಹರಿಯುವಂತಾಗಿದ್ದು ಜೊತೆಗೆ ಕಳೆದ ರಾತ್ರಿ ಕೂಡ ಉತ್ತಮ ಮಳೆಯಾಗಿದ್ದರೂ ಮತ್ತೆ ನೀರು ಹಳ್ಳದ ಪಾಲಾಗಿದೆ.
ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ಇರುವ ಏಕೈಕ ಕೆರೆಗೆ ನೀರು ಹರಿದು ಬರುವುದೇ ಇರುವುದರಿಂದಾಗಿ ಪಟ್ಟಣದ ಸಾರ್ವಜನಿಕರು ಹಾಗೂ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೆರೆ ಬರ್ತಿಯಾದರೆ ಕುಡಿಯುವ ನೀರು ಸೇರಿದಂತೆ ರೈತರ ಬೋರ್ವೆಲ್ ಗಳಲ್ಲಿ ಸಂಗ್ರಹವಾಗಿರುವುದರಿಂದ ಖುಷಿ ಚಟುವಟಿಗಳಿಗೆ ಅನುಕೂಲವಾಗುತ್ತದೆ ಎಂಬುದು ರೈತರ ಅನಿಸಿಕೆಯಾಗಿದೆ ಮಳೆಗಾಲದಲ್ಲಿ ಕೆರೆ ಬರ್ತಿಯಾದರೆ ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಈ ಬಾರಿ ಅತೀ ಹೆಚ್ಚು ಮಳೆಯಾದರೂ ಕೂಡ ರಾಯಣ್ಣ ಕೆರೆಗೆ ನೀರು ಬರದೆ ವ್ಯರ್ಥವಾಗಿ ಹಳ್ಳಕ್ಕೆ ಸೇರುವಂತಿದ್ದು ದುರದೃಷ್ಟಕರ ಈ ಕೂಡಲೇ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳುಫೀಡರ್ ಚಾನೆಲ್ ಗಳನ್ನು ದುರಸ್ತಿಗೊಳಿಸುವುದರ ಜೊತೆಗೆ ಅಗತ್ಯ ಕ್ರಮ ಕೈಗೊಂಡು ಕೆರೆಗೆ ನೀರು ಹರಿಸುವಂತಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ: Udupi; ಸಿಎಂ ರಾಜೀನಾಮೆ ನೀಡದಿದ್ದರೆ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ: ಸುನೀಲ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.