ಇಂದರಗಿ ಹೊಸಕೆರೆಗೆ ಜೀವಕಳೆ


Team Udayavani, Oct 30, 2019, 2:26 PM IST

kopala-tdy-1

ಕೊಪ್ಪಳ: ಕಳೆದ 12 ವರ್ಷಗಳಿಂದ ನೀರಿಲ್ಲದೇ ಬಿಕೋ ಎನ್ನುತ್ತಿದ್ದ ತಾಲೂಕಿನ ಇಂದರಗಿ ಕೆರೆಗೆ ಈ ವರ್ಷ ಜೀವಕಳೆಬಂದಿದೆ. 70 ಎಕರೆ ವಿಸ್ತಾರ ಹೊಂದಿರುವ ಕೆರೆಗೆ ಗವಿಸಿದ್ದೇಶ್ವರ ಶ್ರೀಗಳ ಪ್ರೇರಣೆಯಿಂದ ಸ್ವಯಂ ಗ್ರಾಮಸ್ಥರೇ ಹೊಟ್ಟೆಬೆನಕನನಾಲ ತಿರುವು ದುರಸ್ತಿ ಮಾಡಿಸಿ ಗುಡ್ಡದ ಪ್ರದೇಶದಲ್ಲಿ ವ್ಯರ್ಥವಾಗಿಹರಿಯುವ ನೀರು ಹಿಡಿದಿಟ್ಟುಕೊಂಡು ಕೆರೆಗೆ ಮರುಜೀವ ಮಾದರಿಯಾಗಿದ್ದಾರೆ.

ತಾಲೂಕಿನ ಕೊನೆಯ ಭಾಗದ ಇಂದರಗಿಗ್ರಾಮಗುಡ್ಡಬೆಟ್ಟಗಳ ಮಧ್ಯದಲ್ಲಿದೆ. ಈ ಪ್ರದೇಶ ನೀರಾವರಿ ವ್ಯಾಪ್ತಿ ಎಂದು ಗುರುತಿಸಲ್ಪಟ್ಟರೂ ಅಲ್ಪ ಸ್ವಲ್ಪ ನೀರಾವರಿ ಪ್ರದೇಶ ಹೊಂದಿದೆ. ಸತತ ಮಳೆಯ ಕೊರತೆ ಎದುರಿಸುತ್ತಿದ್ದ ಈ ಭಾಗದ ಜನತೆ ನೀರಿನ ಮೂಲ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಗ್ರಾಮ ಪಕ್ಕದಲ್ಲೇ ಇರುವ ಹೊಸಕೆರೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಭಿವೃದ್ಧಿ ಮಾಡಿರಲಿಲ್ಲ.ಕೆರೆಗೆ ಕಾಯಕಲ್ಪ ಸಿಗಲಿದೆಯೋ ಇಲ್ಲವೋ ಎಂಬುವಂತಾಗಿತ್ತು.

ಶ್ರೀಗಳ ಪ್ರೇರಣೆ: ಇದೇ ವೇಳೆ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಕಳೆದ ಮಾರ್ಚ್‌ ತಿಂಗಳಲ್ಲಿ 26 ಕಿ.ಮೀ. ಉದ್ದದ ಹಿರೇಹಳ್ಳ ಸ್ವತ್ಛಗೊಳಿಸುವ ಸಂಕಲ್ಪ ಮಾಡಿದ್ದಲ್ಲದೇ ಕಾರ್ಯಾರಂಭ ಮಾಡಿದರು. ಇದರಿಂದ ಪ್ರೇರಿತಗೊಂಡ ಇಂದರಗಿ ಗ್ರಾಮಸ್ಥರು ಶ್ರೀಗಳನ್ನು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಶ್ರೀಗಳು ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಬಗ್ಗೆ ಮಾತನ್ನಾಡಿದ್ದರಿಂದ, ಇಂದರಗಿ ಹೊಸಕೆರೆಗೆ ನೀರು ಸಂಗ್ರಹವಾಗದೇ ಇರುವ ಕುರಿತು ಶ್ರೀಗಳ ಗಮನಕ್ಕೆ ತಂದಿದ್ದರು. ಶ್ರೀಗಳು ಹೊಸಕೆರೆ ಸ್ಥಳಕ್ಕೆ ತೆರಳಿ 5-6 ಕಿ.ಮೀ. ಗುಡ್ಡದಲ್ಲಿ ಸುತ್ತಾಡಿ ಗಮನಿಸಿದ್ದರು.

ಹೊಟ್ಟೆಬೆನಕನ ನಾಲೆ ತಿರುವು ದುರಸ್ತಿ: 1984ರ ಅವಧಿಯಲ್ಲಿ ಹೊಸ ಕೆರೆ ನಿರ್ಮಿಸಿದ್ದರೂ ನಾಲ್ಕೆದು ಬಾರಿ ಮಾತ್ರ ನೀರು ತುಂಬಿತ್ತು. ಬಳಿಕ ಕೆರೆಯ ನಾಲೆ ಮುಚ್ಚಿ ಹೋಗಿದ್ದರಿಂದ ಇತ್ತ ಯಾರೂ ಲಕ್ಷ ಕೊಟ್ಟಿರಲಿಲ್ಲ. ಇಂದರಗಿ ಮತ್ತು ಬೊಮ್ಮಸಾಗರ ತಾಂಡಾ ಗ್ರಾಮಗಳ ಅರಣ್ಯ ಪ್ರದೇಶದ ನೀರು ಹೊಟ್ಟೆಬೆನಕನ ನಾಲೆ ಮೂಲಕ ನೀರು ಹರಿದು ಹೋಗಿ ಮುಕ್ಕುಂಪಿ ಗ್ರಾಮದತ್ತ ಸಾಗಿ ವ್ಯರ್ಥವಾಗಿ ಹೋಗುತ್ತಿತ್ತು. ಈ ವಿಷಯವನ್ನು ಶ್ರೀಗಳ ಗಮನಕ್ಕೆ ತಂದಾಗ ನಾಲೆ ದುರಸ್ತಿ ಕೈಗೊಳ್ಳಲು ಮಾರ್ಗದರ್ಶನ ಮಾಡಿದ್ದರು. 25 ಟ್ರಾಕ್ಟರ್‌ ಹಾಗೂ 5 ಜೆಸಿಬಿಗಳು 24 ದಿನಗಳ ಕಾಲ ನಾಲೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದವು. ಸ್ವತಃ ಗ್ರಾಮಸ್ಥರೇ ಯಾರಿಂದಲೂ ಹಣ ಪಡೆಯದೇ ಸ್ವಯಂ ಹಣ ಸಂಗ್ರಹಿಸಿ ಕೆರೆಗೆ ನಾಲೆ ಜೋಡಣೆ ಕಾರ್ಯ ಮಾಡಿದ್ದರು.

12 ವರ್ಷದ ಬಳಿಕ ಕೆರೆಗೆ ನೀರು: ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡದ ಕಾರ್ಯವನ್ನು ಸ್ವತಃ ಗ್ರಾಮಸ್ಥರೇ ಮಾಡಿ ತೋರಿಸಿದ್ದರಿಂದ ಕೆರೆಗೆ ನೀರು ಹರಿಯುವಂತಾಗಿದೆ. ಗವಿಸಿದ್ದೇಶ್ವರ ಶ್ರೀ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಪ್ರಯತ್ನ ಕೈ ಹಿಡಿದಿದೆ.12 ವರ್ಷಗಳ ಹಿಂದೆ ಕೆರೆಗೆ ನೀರು ಹರಿದು ಬಂದಿತ್ತು. ತರುವಾಯ ನೀರು ಸಂಗ್ರಹವಾಗಿರಲಿಲ್ಲ. 12 ವರ್ಷಗಳ ಬಳಿಕ ಕೆರೆಗೆ ಮತ್ತೆ ಜೀವಕಳೆ ಬಂದಿದೆ.

 

-ದತ್ತು ಕಮ್ಮಾರ

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.