ನಿಡಶೇಸಿ ಕೆರೆ ಅಭಿವೃದ್ಧಿಗೆ ಹೆಚ್ಚುವರಿ 5 ಲಕ್ಷ ಖರ್ಚು
Team Udayavani, Apr 27, 2019, 3:10 PM IST
ಕುಷ್ಟಗಿ: ನಿಡಶೇಸಿ ಕೆರೆ ಅಭಿವೃದ್ಧಿ ಏ. 13ರಿಂದ 25ರವರೆಗೆ ಮುಂದುವರಿದಿದ್ದು, ಉಳಿದ 13 ದಿನಗಳ ಕೆಲಸಕ್ಕೆ ಹಿಟಾಚಿ ಬಾಡಿಗೆ 14,56,440 ರೂ., ಟಿಪ್ಪರ್ ಬಾಡಿಗೆ 12,27,520 ರೂ., ಜೆಸಿಬಿ ಬಾಡಿಗೆ 1,62,000 ರೂ. ವ್ಯಯಿಸಲಾಗಿದ್ದು, 5.11 ಲಕ್ಷ ರೂ. ಹೆಚ್ಚುವರಿಯಾಗಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎರಡನೇ ಹಂತದ ಖರ್ಚು ವೆಚ್ಚದ ಮಾಹಿತಿ ನೀಡಿದ ಅವರು, ಹೆಚ್ಚುವರಿ 5.11 ಲಕ್ಷ ರೂ. ಸೇರಿದಂತೆ ದಾಸೋಹ ಇತರೇ ಖರ್ಚಿಗೆ ಅಂದಾಜು 40ರಿಂದ 50 ಸಾವಿರ ರೂ. ಖರ್ಚಾಗಿದೆ. ಸೋಲಾರ ಕಂಪನಿಯಿಂದ 5 ಲಕ್ಷ ರೂ. ದೇಣಿಗೆ ಬರುವ ವಿಶ್ವಾಸವಿದೆ. ಉಳಿದ 60 ಸಾವಿರ ರೂ. ಹೆಚ್ಚುವರಿ ಖರ್ಚನ್ನು ಕೆರೆ ಅಭಿವೃದ್ಧಿ ಸಮಿತಿಯವರೇ ವಹಿಸಲು ನಿರ್ಣಯಿಸಿದ್ದಾರೆ ಎಂದರು.
ಫೆ. 7ರಿಂದ ಶುರುವಾದ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಜನಸಮುದಾಯ, ಸಂಘ ಸಂಸ್ಥೆಗಳಿಂದ 89,39,370 ರೂ. ಸಂಗ್ರಹವಾಗಿದ್ದು, ಇದರಲ್ಲಿ 85,500 ರೂ. ದೇಣಿಗೆ ಬರೆಯಿಸಿ, ನಂತರ ಕೊಡಲು ನಿರಾಕರಿಸಿದ್ದರಿಂದ ಸಮಿತಿಗೆ ಬರಲಾರದ ಮೊತ್ತವಾಗಿದೆ. ಒಟ್ಟು 88,53,870 ರೂ.ಗಳಲ್ಲಿ ಇಂಧನ 58,49,911 ರೂ. ಚಾಲಕರ ಭತ್ತೆ 7,10,660 ರೂ. ಆಗಿದ್ದು, ಇಲ್ಲಿಯವರೆಗೂ 94,0654 ರೂ. ಒಟ್ಟು ಖರ್ಚಾಗಿದೆ. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು 15 ಲಕ್ಷ ರೂ. ಮೊತ್ತದಲ್ಲಿ ಕೆರೆ ಅಭಿವೃದ್ಧಿ ಕೆಲಸವನ್ನು ಪ್ರತ್ಯೇಕವಾಗಿ ನಿರ್ವಹಿಸಿದ್ದಾರೆಂದು ದೇವೇಂದ್ರಪ್ಪ ಬಳೂಟಗಿ ವಿವರಿಸಿದರು.
ಏ. 25ರವರೆಗೆ ಕೆರೆ ಅಭಿವೃದ್ಧಿ ಕೆಲಸದಲ್ಲಿ 1 ರೂ. ಲೋಪವಾಗಿಲ್ಲ. ಪಾರದರ್ಶಕವಾಗಿ ನಿರ್ವಹಿಸಲಾಗಿದ್ದು, ಈ ಮಹಾತ್ಕಾರ್ಯದಲ್ಲಿ ಯಶಸ್ವಿಯಾಗಿದ್ದು ಇನ್ನೂ ಮಳೆರಾಯನ ನಿರೀಕ್ಷೆಯಲ್ಲಿದ್ದು, ಉತ್ತಮ ಮಳೆಯಾಗಿ ಕೆರೆ ತುಂಬಿದರೆ ನಿರ್ವಹಿಸಿದ ಕೆಲಸ ಸಾರ್ಥಕವೆನಿಸಲಿದೆ ಎಂದರು.
ಸಿಪಿಐ ಸುರೇಶ ತಳವಾರ ಮಾತನಾಡಿ, 76 ದಿನಗಳ ಸುದೀರ್ಘ ಕೆಲಸವನ್ನು ಈಗಲೇ ಮುಗಿಸುತ್ತಿರುವುದು ಬೇಸರವೆನಿಸುತ್ತಿದೆ. ಈ ಕೆರೆ ಕಾರ್ಯದಲ್ಲಿ ದಿನವೂ ಒಂದಿಲ್ಲೊಂದು ಕಾರ್ಯ ಚಟುವಟಿಕೆಯಲ್ಲಿ ಪೊಲೀಸ್ ಕೆಲಸದ ಒತ್ತಡದಲ್ಲೂ ನಿರ್ವಹಿಸಿರುವುದು ಸಂತೃಪ್ತ ತಂದಿದೆ. ಸಾರ್ವಜನಿಕರಿಂದ ಸಂಗ್ರಹವಾದ ಮೊತ್ತವನ್ನು ಅನಗತ್ಯ ಖರ್ಚಿಗೆ ಆಸ್ಪದ ನೀಡದೇ ಕೆರೆ ಅಭಿವೃದ್ಧಿಗೆ ಬಳಸಲಾಗಿದೆ. ಈ ಕಾರ್ಯ ತಾತ್ಕಾಲಿಕ ಮುಕ್ತಾಯವಾಗಿದ್ದು, ಈ ಕೆರೆಯ ಕಾರ್ಯವನ್ನು ಇದೇ ಉತ್ಸಾಹದಲ್ಲಿ ಮುಂದುವರಿಸಿಕೊಂಡು ಹೋಗಲು ಸಮಿತಿಯವರಿಗೆ ಮನವಿ ಮಾಡಿದರು. ಸಾರ್ವಜನಿಕರಿಂದ ಸಂಗ್ರಹವಾದ ಮೊತ್ತದ ಹೊರತಾಗಿಯೂ ಸಮಿತಿಯವರ ಸುಮಾರು 1.50 ಲಕ್ಷ ವೈಯಕ್ತಿಕ ಖರ್ಚು ಮಾಡಿಕೊಂಡಿದ್ದಾರೆ. ಈ ಕೆರೆ ಸುಂದರ ಸಸ್ಯೋಧ್ಯಾನವಾಗಿ ಪ್ರಾವಾಸಿಗರನ್ನು ಆಕರ್ಷಿಸಲಿದೆ ಎಂದರು. ಎಸ್.ಎಚ್. ಹಿರೇಮಠ, ಮಹಾಂತಯ್ಯ ಅರಳಲಿಮಠ, ಟಿ. ಬಸವರಾಜ್, ಜಗನ್ನಾಥ ಗೋತಗಿ, ಶರಣಪ್ಪ ಹಂಪನಾಳ, ತಾಜುದ್ದೀನ್ ದಳಪತಿ, ವೀರೇಶ ತುರಕಾಣಿ, ಮಲ್ಲಿಕಾರ್ಜುನ ಬಳಿಗಾರ, ಅಪ್ಪಣ್ಣ ನವಲೆ, ಪಂಪನಗೌಡ ಪಾಟೀಲ, ಶಿವಸಂಗಪ್ಪ ಬಿಜಕಲ್, ನೂರಂದಪ್ಪ ಕಂದಕೂರು, ಕಿರಣ್ ಜ್ಯೋತಿ, ಪುರಸಭೆ ಸದಸ್ಯ ಕಲ್ಲೇಶ ತಾಳದ್ ಇತರಿದ್ದರು.
ಬರಗಾಲ ಸಂದರ್ಭದಲ್ಲೂ ನಿಡಶೇಸಿ ಕೆರೆ ಅಭಿವೃದ್ಧಿಗೆ 1 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಗವಿಶ್ರೀಗಳ ಪ್ರೇರಣೆಯಿಂದ ಸುದೀರ್ಘ 76 ದಿನಗಳ ಕಾಲ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ. ಸಮಿತಿಯವರಲ್ಲಿ ಆಸಕ್ತಿ ಕುಂದಿಲ್ಲ ನನ್ನ ಸೇವಾ ಅವಧಿಯಲ್ಲಿ ನಿಡಶೇಸಿ ಕೆರೆ ಅಭಿವೃದ್ಧಿಯ ದಿನಗಳನ್ನು ಇಲ್ಲಿನ ಜನರನ್ನು ಮರೆಯುವುದಿಲ್ಲ.
•ಸುರೇಶ ತಳವಾರ, ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.