ಕೊಪ್ಪಳದ ವಿವಿಧೆಡೆ ‘ನೋ ಸಿಎಎ’ ಗೋಡೆಬರಹ
Team Udayavani, Jan 18, 2020, 4:22 PM IST
ಕೊಪ್ಪಳ: ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೊಪ್ಪಳದಲ್ಲಿ ವಿರೋಧದ ಧ್ವನಿ ಕಾಣಿಸಿಕೊಂಡಿದೆ. ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಕಾಲೇಜಿನ ಗೋಡೆ ಸೇರಿದಂತೆ ರೈಲ್ವೇ ಮೇಲ್ಸೆತುವೆಯ ಗೋಡೆ ಮೇಲೆ ನೋ ಸಿಎಎ, ನೋ ಎನ್‌ಆರ್‌ಸಿ ಹಾಗೂ ನೋ ಎನ್‌ಆರ್‌ಪಿ ಎಂದು ಬರೆದಿದ್ದಾರೆ.
ಆದರೆ ಯಾರು ಬರೆದಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ಉದ್ದೇಶ ಪೂರ್ವಕವೇ ಯಾರೋ ಕಿಡಿಗೇಡಿಗಳಿಂದಲೇ ಈ ಕೃತ್ಯ ಎಸಗಲಾಗಿದೆ ಎನ್ನುವ ಮಾಹಿತಿಯು ಹರಿದಾಡುತ್ತಿದೆ.
ನಗರದ ಸರ್ಕಾರಿ ಪದವಿ ಕಾಲೇಜಿನ ಗೋಡೆಯ ಮೇಲೆ ವಾರದ ಹಿಂದೆಯೇ ಇದನ್ನು ಕಪ್ಪು ಹಾಗೂ ಕೆಂಪು ಬಣ್ಣದಿಂದ ಬರೆಯಲಾಗಿದ್ದರೂ ಇದನ್ನು ಯಾರೂ ಅಷ್ಟಾಗಿ ಗಮನಿಸಿರಲಿಲ್ಲ. ಶನಿವಾರ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಗಮನಿಸಿದ್ದು, ಎಬಿವಿಪಿ ಮುಖಂಡರ ಗಮನಕ್ಕೆ ತಂದಿದ್ದಾರೆ.
ಎಬಿವಿಪಿ ಮುಖಂಡರು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು, ಅವರು ಮಾತ್ರ ಯಾರು ಬರೆದಿದ್ದಾರೋ ನಮಗೆ ಗೊತ್ತಿಲ್ಲವೆಂದು ಸುಮ್ಮನಾಗಿದ್ದಾರೆ. ಶಾಂತಿಗೆ ಹೆಸರಾಗಿದ್ದ ಕೊಪ್ಪಳದಲ್ಲಿಯೂ ನೋ ಸಿಎಎ ಹಾಗೂ ಎನ್‌ಆರ್‌ಸಿ ಗೋಡೆಬರಹ ಕಾಣಿಸಿಕೊಂಡು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.