ಗಂಗಾವತಿಯಲ್ಲಿ ಕಠಿಣ ನಿಯಮವಿಲ್ಲ: ಯಥಾ ರೀತಿ ಜನರ ಓಡಾಟ, ಕದ್ದುಮುಚ್ಚಿ ಬಟ್ಟೆ ಮಾರಾಟ
Team Udayavani, May 10, 2021, 9:14 AM IST
ಗಂಗಾವತಿ: ಸೋಮವಾರದಿಂದ ಕೋವಿಡ್ ಕರ್ಪ್ಯೂನಲ್ಲಿ ಇನ್ನಷ್ಟು ಕಠಿಣ ನಿಯಮಗಳು ಜಾರಿಯಾಗಿದೆ. ಆದರೆ ಗಂಗಾವತಿ ನಗರದಲ್ಲಿ ಏನೂ ಬದಲಾಗಲಿಲ್ಲ. ಕಾರು, ಆಟೋ, ಬೈಕ್ ಓಡಾಡುತ್ತಿವೆ.
ಓಎಸ್ ಬಿ ರೋಡ್ ಹಾಗೂ ಮುಚಿಗೇರ್ ಓಣಿ ರಸ್ತೆಯಲ್ಲಿ ಈಗಲೂ ಕೆಲ ಪ್ರಭಾವಿ ವ್ಯಕ್ತಿಗಳ ಬಟ್ಟೆ ಅಂಗಡಿಗಳಲ್ಲಿ ಶೆಟರ್ ಹಾಕಿಕೊಂಡು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತಿದೆ. ಪೊಲೀಸರು ನಗರಸಭೆ ಹಾಗೂ ವಾಣಿಜ್ಯ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ನಿಂತು ಬರೀ ಬೈಕ್ ಸವಾರರ ಗುರುತಿನ ಚೀಟಿ ಮತ್ತು ಮನೆಯಿಂದ ಹೊರಗೆ ಬಂದ ಕಾರಣ ಕೇಳಿ ಬಿಡುತ್ತಿದ್ದಾರೆ.
ಇದನ್ನೂ ಓದಿ:ಹುಣಸೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್: ಬೀದಿಗಿಳಿದ ವಾಹನಗಳು ಸೀಜ್
ಸರಿಯಾಗಿ ಕಾರಣ ಹೇಳದ ಬೈಕ್ ಸವಾರರಿಗೆ ದಂಡ ಹಾಕಲು ಮಾತ್ರ ಮೀಸಲಾಗಿದ್ದಾರೆ. ಪುಟ್ ಪಾತ್ ಮೇಲಿನ ಚಹಾ ಅಂಗಡಿಗಳಲ್ಲಿ ಪಾರ್ಸೆಲ್ ಕೊಡದೇ ಅಲ್ಲೇ ಉಪಹಾರ ನೀಡಲಾಗುತ್ತಿದೆ. ಜನರ ದಟ್ಟಣೆ ಎಲ್ಲೆಡೆ ಕಂಡು ಬರುತ್ತಿದೆ.
ವಿಶೇಷವಾಗಿ ಓಎಸ್ ಬಿ ರೋಡಿನಲ್ಲಿ ಅಂಗಡಿಗಳು ಮಾತ್ರ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಕೋವಿಡ್ ಕರ್ಪ್ಯೂ ಕಠಿಣ ರೂಲ್ಸ್ ಕಂಡು ಬರುತ್ತಿಲ್ಲ
ಇದರಿಂದಾಗಿ ಹೆಚ್ಚು ಜನ ಸೇರುತ್ತಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲಾಡಳಿತ ಕೊರೊನಾ ಜಾಗೃತಿ ಮೂಡಿಸಲು ಹಗಲಿರುಳು ಕೆಲಸ ಮಾಡಿತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.